Breaking News
Hiring Reporter’s For more Information Contact Above Number 876 225 4007 . Program producer
Home / ರಾಜಕೀಯ / ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ – ದೇವೇಗೌಡ್ರ ನೀತಿ

ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ – ದೇವೇಗೌಡ್ರ ನೀತಿ

ರಾಜಕೀಯ ಬಿಗಿಪಟ್ಟುಗಳಿಗೆ, ತಂತ್ರ, ಷಡ್ಯಂತ್ರ ಜತೆಗೆ ರಾಜಕೀಯ ಸೂತ್ರ ಹೆಣೆಯೋದರಲ್ಲಿ ಪಳಗಿದ ರಾಜ್ಯದ ಏಕೈಕ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರಿಗೆ ಕರಗತವಾಗ್ಬಿಟ್ಟಿವೆ. ಅಕ್ಕಿ ಮೇಲೆ ಆಸೆ ನೆಂಟರ ಮೇಲೂ ಪ್ರೀತಿ ಅನ್ನೋವಂತೆ ಕಾಂಗ್ರೆಸ್ ಜತೆ ಸೇರಿ ಮೈತ್ರಿ ಸರ್ಕಾರ ನಡೆಸ್ತಿದ್ರೂ ಬಿಜೆಪಿ ಮೇಲಿನ ಆಸೆ ಅವರಿಗೆ ಇನ್ನೂ ಹೋದಂತೆ ಕಾಣಿಸ್ತಿಲ್ಲ. ಇವತ್ತು ಅವರ ಬಾಯಿಯಿಂದ ಉದುರಿದ ಅಣಿಮುತ್ತುಗಳೇ ಸಾಕ್ಷ್ಯಿ.
ಒಳಸುಳಿಯಲ್ಲಿ ಏಟು ಕೊಡೋದರಲ್ಲಿ ಹರದನಹಳ್ಳಿಯ ದೌಡ್ಡಗೌಡರದು ಎತ್ತಿದ ಕೈ. ಏನೇ ತಂತ್ರ ಕಾರ್ಯರೂಪಕ್ಕೆ ತರಲು ಮೊದಲೇ ಆ ಬಗ್ಗೆ ನೂರು ಭವಿಷ್ಯದ ಬಗೆಗೆ ಯೋಚಿಸಿರ್ತಾರೆ. ಮೈತ್ರಿಯಿಂದ ಕಾಂಗ್ರೆಸ್ ಗೆ ಆಗೋ ಲಾಭಕ್ಕಿಂತ ನಷ್ಟವೇ ಜಾಸ್ತಿ ಅನಿಸ್ತಿದೆೆ. ಪುತ್ರ ವ್ಯಾಮೋಹಿ  ಗೌಡರು, ಹೆಚ್ ಡಿಕೆ ಪ್ರಮಾಣ ವಚನದಲ್ಲಿ ತೃತೀಯ ರಂಗದ ನಾಯಕತ್ವವಹಿಸಿಕೊಳ್ತಾರೆ ಅಂತ ಬಣ್ಣಿಸಲಾಗಿತ್ತು. ಆದ್ರೇ, ಹಾಗೇ ಆಗೋ ಸಾಧ್ಯತೆಯಿಲ್ಲ ಅಂತ ಅವರೇ ಇವತ್ತು ಹುಬ್ಬಳ್ಳಿಯಲ್ಲಿ ಹೇಳ್ಕೊಂಡಿದಾರೆ. ಉತ್ತರಕರ್ನಾಟಕದಲ್ಲಿ ಪಕ್ಷವನ್ನ ಸ್ಥಳೀಯ ಸಂಸ್ಥೆ,‌ ಲೋಕಸಭಾ ಚುನಾವಣೆಗೆ ಬಲಪಡಿಸಲು ಹೆಚ್ ಡಿಡಿ ಪ್ರವಾಸ ಕೈಗೊಂಡಿದಾರೆ. ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿಯವರ ಮನೆಗೆ ಉಪಾಹಾರಕ್ಕೆ ತೆರಳುವ ಮೊದಲೇ ಮಾಧ್ಯಮದರಿಗೆ ಎದುರಾದ ದೇವೇಗೌಡರು, ತೃತಿಯ ರಂಗ ಸ್ಪಷ್ಟವಾಗಿ ಹೊರಹೊಮ್ಮಿಲ್ಲ. ಒಂದೊಂದು ರಾಜ್ಯದಲ್ಲಿ ಪ್ರಾದೇಶಿ ಪಕ್ಷಗಳ ಬಲ ಹೆಚ್ಚು ಇದೆ. ಕೆಲವು ರಾಜ್ಯಗಳಲ್ಲಿ ರಾಷ್ಟ್ರೀಯ ಪಕ್ಷಗಳು ಮಾತ್ರ ಪ್ರಾಬಲ್ಯ ಹೊಂದಿವೆ. ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ತೃತೀಯ ರಂಗದ ಸ್ಪಷ್ಟತೆ ಬರುತ್ತೆ ಅಂದ್ರು. ಕೆಲ ರಾಜ್ಯಗಳಲ್ಲಿ ಹೊಂದಾಣಿಕೆ ಸಾಧ್ಯ. ಚುನಾವಣೆ ನಂತರವೂ ಆಗಬಹುದೇನೋ.. ಸಾಂದರ್ಭಿಕ ತಕ್ಕಂತೆ ನಡೆಯಿರುತ್ತೆ. ಬಿಜೆಪಿಗೆ ವಿರುದ್ಧ ಕಾಂಗ್ರೆಸ್ ಜತೆ ಹೋಗುವ ಪಕ್ಷಗಳ ಚಿತ್ರಣ ಸ್ಪಷ್ಟವಿಲ್ಲ. ಬೆಂಗಳೂರಿಗೆ ಬಂದಿದ್ದ 29ಜನರೆಲ್ಲರೂ ಒಂದಾಗುತ್ತಾರೆ ಎಂದು ಹೇಳಲ್ಲ. ಮೈತ್ರಿ ಸರ್ಕಾರ ರಚನೆಯಾಗುವಾಗ ಒಂದೆಡೆ ಸೇರಿ ಇತಿಹಾಸ ಸೃಷ್ಟಿಸಿದ್ದಾರೆ. ಜೆಡಿಎಸ್ ಪಕ್ಷ ಉಳಿಸಿಕೊಂಡು ಹೋಗುವುದು ನನ್ನ ಹೋರಾಟ. ಅಷ್ಟೇ ಅಲ್ಲ, ಬಿಜೆಪಿ ವಿರುದ್ಧ ನಾಯಕತ್ವವಹಿಸುವ ಮಟ್ಟಕ್ಕೆ ಹೋಗಲ್ಲ ಅನ್ನೋದರಲ್ಲಿಯೇ ರಾಜಕೀಯ ಜಾಣ್ಮೆ ಪ್ರದರ್ಶಿಸಿದಾರೆ. ರಾಹುಲ್ ಗಾಂಧಿ ನಾಯಕತ್ವಕ್ಕೆ, ಪ್ರಧಾನಿ ಆಕಾಂಕ್ಷೆಗೆ ನಮ್ಮ ಕಡೆಯಿಂದ ಆತಂಕವಿಲ್ಲ ಅಂದಿದಾರೆ ಗೌಡರು, ಇದೇ ಅಲ್ವೇ ಅಕ್ಕಿ ಮೇಲೆ ಆಸೆ ನೆಂಟರ ಮೇಲೂ ಪ್ರೀತಿ ಅನ್ನೋದು.
ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ
ರಾಜಕೀಯವಾಗಿ ಎಷ್ಟೇ ಹತ್ತಿಕ್ಕಲು ಯತ್ನಿಸಿದ್ರೂ ತಮ್ಮ ಒಂದ್ ಕಾಲದ ಶಿಷ್ಯ ಸಿದ್ದರಾಮಯ್ಯ ಐದು ವರ್ಷ ರಾಜ್ಯ ಆಳಿದ್ದು ದೇವೇಗೌಡರಿಗೆ ಅರಗಿಸಿಕೊಳ್ಳಲಾಗಿಲ್ಲ ಅನ್ನೋದು ಸ್ಪಷ್ಟ. ಅದಕ್ಕಾಗಿ ಸಿದ್ದು ಆಪ್ತರು ಜತೆಗೆ ಜಾತಿಯ ಗೇಮ್ ಆಡಿ ವಿಧಾನಸಭಾ ಚುನಾವಣೆಯಲ್ಲಿ ಶಿಷ್ಯನ ರಾಜಕೀಯ ವೇಗಕ್ಕೆ ಅಡ್ಡಿಯಾಗಿದ್ದ ಗೌಡರ ಈಗ ಮತ್ತೊಂದು ದಾಳ ಉರುಳಿಸ್ತಿದಾರೆ. ಹಾಗೇನಾದ್ರೂ ಕಾಂಗ್ರೆಸ್ ನೇತೃತ್ವದಲ್ಲಿ ಕೇಂದ್ರದಲ್ಲಿ ಮೈತ್ರಿ ಸರ್ಕಾರ ಬಂದ್ರೇ ಸಿದ್ದುಗೆ ಯಾವ ರೀತಿಯಿಂದಲೂ ಒಳ್ಳೇ ಸ್ಥಾನ ಸಿಗದಂತೆ ನೋಡಿಕೊಳ್ಳೋದು ಗೌಡರ ಒನ್ ಲೈನ್ ಅಜೆಂಡಾ ಅನಿಸುತ್ತೆ. ಅದಕ್ಕಾಗಿಯೇ, ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮಾಡುವುದರ ಬಗ್ಗೆ ಕಾಂಗ್ರೆಸ್ ನಿರ್ಧರಿಸುತ್ತೆ ಅಂತಿದಾರೆ. ಇದಲ್ವೇ ವರಸೆ ಅಂದ್ರೇ.. ಲೋಕಸಭೆಯಲ್ಲಿ ಎಷ್ಟು ಸೀಟು ಬರುತ್ತೆ ನೋಡ್ಬೇಕು, ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಕುರಿತು ಮೇಲ್ಮಟ್ಟದಲ್ಲಿ ಚರ್ಚೆಯಾಗ್ಬೇಕು ಅಂತಿದಾರೆ. ಎಂಪಿ ಚುನಾವಣೆಗೆ ಮೈತ್ರಿಯಾದ್ರೇ ಜೆಡಿಎಸ್ ಗೇ ಲಾಭ ಜಾಸ್ತಿ. ಆದ್ರೇ. ಇದರಿಂದ ಕಾಂಗ್ರೆಸ್ ಗೇ ಹಿನ್ನಡೆ ಅನ್ನೋ ಭಾವನೆಯನ್ನ ಈಗಾಗಲೇ ಕೈ ಪಕ್ಷದ ನಾಯಕರೇ ಹೇಳ್ಕೋತಿದಾರೆ. ಇದರ ಮಧ್ಯೆಯೇ ಈಗ ಮೈತ್ರಿ ಸರ್ಕಾರಕ್ಕೆ ಅಡೆತಡೆಗಳನ್ನ ಒಂದೊಂದೇ ಸರಿಪಡಿಸೋಕೆ ಗೌಡರು ಮುಂದಾಗಿದಾರೆ. ಸಿಎಂ ಹೆಚ್ ಡಿಕೆ ಗ್ರಾಮ ವಾಸ್ತವ್ಯ ಮಾಡೋಕಾಗಲ್ಲ. ಅದಕ್ಕೆ ಅವರ ಆರೋಗ್ಯ ಸಾಥ್ ಕೊಡ್ತಿಲ್ಲ ಎಂದಿದಾರೆ. ಹುಬ್ಬಳ್ಳಿಯಲ್ಲಷ್ಟೇ ಅಲ್ಲ, ಧಾರವಾಡದ ಮಾಜಿ ಶಾಸಕ ಎನ್.ಹೆಚ್ ಕೋನರೆಡ್ಡಿ ಮನೆಗೆ ಭೇಟಿ ಕೊಟ್ಟ ಮಾಜಿ ಪ್ರಧಾನಿ, ನಿನ್ನೆ ನಾಡೋಜ ಡಾ.ಪಾಟೀಲ ಪುಟ್ಟಪ್ಪ ನೀಡಿದ್ದ ಪ್ರತ್ಯೇಕ ರಾಜ್ಯದ ಕೂಗಿಗೆ ಪ್ರತಿಕ್ರಿಯಿಸಿದ್ರು. ಉತ್ತರಕರ್ನಾಟಕದಲ್ಲಿ ಈ ಹಿಂದೆ ಯಾವ್ಯಾವ ಸರ್ಕಾರಗಳು ಎಷ್ಟೆಷ್ಟು ಅನುದಾನ ನೀಡಿವೆ ಅನ್ನೋದನ್ನ ಸದನದಲ್ಲಿಯೇ ಅಂಕಿ ಸಂಖ್ಯೆಗಳನ್ನಿಸಿಕೊಂಡೇ ಚರ್ಚೆ ನಡೆಯಲಿ ಅಂತ ಸವಾಲು ಹಾಕಿದ್ರು. ರಾಮಕೃಷ್ಣ ಹೆಗ್ಡೆ, ಅರಸು ಬಿಟ್ರೇ 25 ವರ್ಷ ಲಿಂಗಾಯತರೇ ಈ ರಾಜ್ಯ ಆಳಿದಾರೆ. ಡಾ. ನಂಜುಂಡಪ್ಪ ನೀಡಿದ ವರದಿ ಮುಂದಿಟ್ಕೊಂಡೇ ಚರ್ಚೆಯಾಗಲಿ ಅಂದ್ರು.
ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ
  ಅಪ್ಪಿತಪ್ಪಿಯೂ ಕಾಂಗ್ರೆಸ್ ಕುರಿತು ಜಾಸ್ತಿ ಮಾತೇ ಆಡದ ದೇವೇಗೌಡರ ತಮ್ಮ ಪಕ್ಷ ಬಲವರ್ಧನೆ ಕುರಿತಂತೆಯೇ ಹೆಚ್ಚು ಒತ್ತು ಕೊಟ್ಟು ಮಾತಾಡಿದ್ರು. ಪ್ರಧಾನಿ ಮೋದಿ ಎದುರಿಸಲು ನಾಯಕತ್ವವಹಿಸ್ಬೇಕಿದ್ದ ದೇವೇಗೌಡರು ಮುಂದಿನ ದೂರಾಲೋಚನೆಯಿಟ್ಕೊಂಡೇ ಅದರಿಂದ ಹಿಂದೆ ಸರಿದಿರೋದು ಸ್ಪಷ್ಟ. ಅದಕ್ಕಾಗಿ ಇರಬೇಕು ಜೆಡಿಎಸ್ ಜತೆಗೆ ಹೋಗೋದ್ರಿಂದ ಕಾಂಗ್ರೆಸ್ ಗೇ ಹೆಚ್ಚು ನಷ್ಟ ಅಂತ ಆ ಪಕ್ಷದವರೇ ಹೇಳ್ತಿರೋದು. ಅಧಿಕಾರಕ್ಕಾಗಿ ಕಾಂಗ್ರೆಸ್ ಸ್ನೇಹ ಬೇಕು, ಮುಂದಿನ ರಾಜಕೀಯ ಮಹತ್ವಾಕಾಂಕ್ಷೆಗೆ ಮೋದಿ ಜತೆಗೂ ಸ್ನೇಹ ಇರ್ಬೇಕೆಂದು ಗೌಡರು ಬಯಸಿದಂತಿದೆ.

Share

About Shaikh BIG TV NEWS, Hubballi

Check Also

ಧರ್ಮೆಗೌಡ ಆತ್ಮಹತ್ಯೆ ಸ್ಥಳಕ್ಕೆ ಭೇಟಿ ನೀಡಿದ ಸಿ.ಟಿ. ರವಿ.

ಚಿಕ್ಕಮಗಳೂರು: ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಕಡೂರು ತಾಲೂಕಿನ ಗುಣಸಾಗರ ಬಳಿ ತಡರಾತ್ರಿ 1.30ರ …

Leave a Reply

Your email address will not be published. Required fields are marked *

error: Content is protected !!