Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಅಕ್ರಮ ಗಾಂಜಾ ಮಾರಾಟ ಮಾಡ್ತಿದ್ದವರ ಮನೆಗಳ ಮೇಲೆ ಪೊಲೀಸರಿಂದ ದಾಳಿ- ಸಂಗ್ರಹಿಸಿದ್ದ ಗಾಂಜಾ ಸೀಜ್

ಅಕ್ರಮ ಗಾಂಜಾ ಮಾರಾಟ ಮಾಡ್ತಿದ್ದವರ ಮನೆಗಳ ಮೇಲೆ ಪೊಲೀಸರಿಂದ ದಾಳಿ- ಸಂಗ್ರಹಿಸಿದ್ದ ಗಾಂಜಾ ಸೀಜ್

Spread the love

ಅವಳಿನಗರ ಪೊಲೀಸರು ಅಕ್ರಮವಾಗಿ ಗಾಂಜಾ ಮಾರಾಟ ಮಾಡುವವರ ಮನೆ ಮೇಲೆ ದಿಢೀರ್ ದಾಳಿ ನಡೆಸುವ ಮೂಲಕ ಶಾಕ್ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಗಾಂಜಾ ಮಾರಾಟ ಪ್ರಕರಣಗಳು ನಡೆಯುತ್ತಿದ್ದರಿಂದ ಖಚಿತ ಮಾಹಿತಿ ಮಾಹಿತಿ ಮೇರೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪೊಲೀಸರು 36 ಕಡೆ ಏಕಕಾಲಕ್ಕೆ ದಾಳಿ ನಡೆಸಿ, ಖದೀಮರಿಗೆ ಬಿಸಿ ಮುಟ್ಟಿಸಿದ್ದಾರೆ.ಹಳೇ ಹುಬ್ಬಳ್ಳಿಯ ಬಾಪಾಣಾ ಲೇ ಔಟ್ ನಿವಾಸಿಯಾಗಿರುವ ಮಹ್ಮದ ಸಲಾವೋದ್ದೀನ್ ತಂದೆ ಮಹ್ಮದ ಶಫಿ ಸೊಲ್ಲಾಪುರ ಮನೆಯ ಟೆರಸ್ ಮೇಲೆ ಹೂ ಕೂಂಡಗಳಲ್ಲಿ ಗಾಂಜಾ ಬೆಳೆದಿದ್ದ. ಈತನ ಮನೆ ಮೇಲೆ ದಾಳಿ ಮಾಡಿದಾಗ ಪೊಲೀಸರಿಗೆ 217 ಗ್ರಾಂ ಗಾಂಜಾ ದೊರೆತಿದೆ. ಕೂಡಲೇ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.ಅದೇ ರೀತಿ ಧಾರವಾಡದ ಉಪನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಬರುವ ಸೈದಾಪುರ ನಿವಾಸಿಯಾಗಿರುವ ತನ್ವೀರ್ ರಾಮದುರ್ಗ ಮನೆ ಮೇಲೆ ದಾಳಿ ನಡೆಸಿದಾಗ 103 ಗ್ರಾಂ ಗಾಂಜಾ ದೊರೆತಿದ್ದು, ಕೂಡಲೇ ಆತನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.ಇನ್ನುಳಿದಂತೆ ಧಾರವಾಡದ ಮಣಕಿಲ್ಲಾ ನಿವಾಸಿ ಆಸ್ಪಕ್ ಖಾಜಿ, ತೇಜಸ್ವಿನಗರದ ನಿವಾಸಿ ಜಮೀರ್ ಮೌಲಾಸಾಬ ಶೇಖ್, ಪುರೋಹಿತ ನಗರದ ಶಾರೂಖ್ ನೂರಅಹ್ಮದ್ ದೊಡ್ಡಮನಿ, ಹುಬ್ಬಳ್ಳಿಯ ಬೆಂಗೇರಿ ನಿವಾಸಿ ಸಾಗರ ತಂದೆ ದೇವಾನಂದ ಜಗಾಪುರ, ಮೇದಾರ ಓಣಿಯ ಶ್ರೀನಿವಾಸ ಅಲಿಯಾಸ್ ಶಿನ್ಯಾ ತಂದೆ ಶ್ಯಾಮಣ್ಣ ಕಲಬುರಗಿ, ಅರಳಿಕಟ್ಟಿ ಓಣಿಯ ಪ್ರವೀಣ ತಂದೆ ಶಂಕರ ಹಬೀಬ, ಚೋಳನವರ ಓಣಿಯ ನಾರಾಯಣ ತಂದೆ ಸುರೇಂದ್ರ ಶಾ ಹಬೀಬ, ವೀರಾಪುರ ಓಣಿಯ ಕಾರ್ತಿಕ ತಂದೆ ಮಂಜುನಾಥ ದೇವಕತ್, ಕೆ.ಕೆ. ನಗರ ಮಲ್ಲಿಕ್ ಜಾನ್ ತಂದೆ ರೆಹಮಾನ್ ಸಿಕಂದರ್ ಅವರ ಮೇಲೆ ಮನೆ ಮೇಲೆ ದಾಳಿ ಕಾನೂನು ಕ್ರಮ ಜರುಗಿಸಲಾಗಿದೆ.ಅಲ್ಲದೆ, ಸಾರ್ವಜನಿಕರು ನೇರವಾಗಿ ಮಾಹಿತಿಗಳನ್ನು ಪೊಲೀಸ್ ಇಲಾಖೆಗೆ ತಿಳಿಸಬಹುದಾಗಿದೆ. ಅವರ ಹೆಸರನ್ನು ಗೌಪ್ಯವಾಗಿ ಇಡಲಾಗುವುದು ಎಂದು ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

Check Also

‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್

Spread the loveತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!