Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಅಜಿಂಕ್ಯಾ ಮನೆಗೆ ಲಕ್ಷ್ಮೀ ಆಗಮನ. ಹೆಣ್ಣು ಮಗುವಿನ ತಂದೆಯಾದ ರಹಾನೆ.

ಅಜಿಂಕ್ಯಾ ಮನೆಗೆ ಲಕ್ಷ್ಮೀ ಆಗಮನ. ಹೆಣ್ಣು ಮಗುವಿನ ತಂದೆಯಾದ ರಹಾನೆ.

ಮುಂಬೈ: ಭಾರತ ಟೆಸ್ಟ್​ ತಂಡದ ಉಪನಾಯಕ ಅಜಿಂಕ್ಯಾ ರಹಾನೆ ಮಡದಿ ಶನಿವಾರ ಹೆಣ್ಣುಮಗುವಿಗೆ ಜನ್ಮ ನೀಡಿದ್ದಾರೆ.2014ರಲ್ಲಿ ಬಾಲ್ಯದ ಗೆಳತಿ ರಾಧಿಕಾರನ್ನು ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ರಹಾನೆ 5 ವರ್ಷಗಳ ಬಳಿಕ ತಂದೆಯಾಗಿದ್ದಾರೆ. ವಿಶಾಖಪಟ್ಟಣದಲ್ಲಿ ನಡೆಯುತ್ತಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಭಾಗಿಯಾಗಿರುವ ರಹಾನೆ, ತಮ್ಮ ಮಗುವಿನ ಮುಖವನ್ನು ನೋಡಲು ಇನ್ನೊಂದು ದಿನ ಕಾಯಬೇಕಾಗಿದೆ. ನಾಳೆ ಮೊದಲ ಟೆಸ್ಟ್​ ಪಂದ್ಯಕ್ಕೆ ಕೊನೆಯ ದಿನವಾಗಿದ್ದು, ಒಂದು ವೇಳೆ ಪಂದ್ಯ ಗೆದ್ದರೆ ರಹಾನೆ ಪಾಲಿಗೆ ಡಬಲ್​ ಸಂಭ್ರಮವಾಗಲಿದೆ.ರಹಾನೆಗೆ ಮಾಜಿ ಕ್ರಿಕೆಟರ್‌ ಹರ್ಭಹನ್​ ಸಿಂಗ್​ ಟ್ವೀಟ್​ ಮಾಡಿ ಶುಭಕೋರಿದ್ದು, ಅಮ್ಮ ಹಾಗೂ ಮಗು ರಾಜಕುಮಾರಿ ಆರೋಗ್ಯವಾಗಿದ್ದಾರೆಂದು ಭಾವಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ರಹಾನೆ ಹೆಣ್ಣು ಮಗುವಿನ ತಂದೆಯಾಗುವ ಮೂಲಕ ತಂಡದ ಸಹ ಅಟಗಾರರಾದ ಧೋನಿ, ರೈನಾ, ಭಜ್ಜಿ, ರೋಹಿತ್​ ಹಾಗೂ ವಿಹಾರಿ ಸಾಲಿಗೆ ಸೇರಿಕೊಂಡಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!