Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಅರ್ಜಿದಾರರ ವಾದ ಅಸಮರ್ಪಕವಾಗಿವೆ, ರಫೇಲ್​ ನಿರ್ಧಾರ ಹೇಗಾಯ್ತು? ಅಷ್ಟೇ ಹೇಳಿ..

ಅರ್ಜಿದಾರರ ವಾದ ಅಸಮರ್ಪಕವಾಗಿವೆ, ರಫೇಲ್​ ನಿರ್ಧಾರ ಹೇಗಾಯ್ತು? ಅಷ್ಟೇ ಹೇಳಿ..

ನವದೆಹಲಿ: ರಫೇಲ್​ ಫೈಟರ್​ ಜೆಟ್​​ ಒಪ್ಪಂದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ದಾಳಿ ನಡೆಸುತ್ತಿರುವ ಹೊತ್ತಲ್ಲೇ, ಇದೀಗ ಸುಪ್ರೀಂ ಕೋರ್ಟ್​ ರಫೇಲ್​ ಒಪ್ಪಂದದ ಮಾಹಿತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಕೇಳಿದೆ. ಅಕ್ಟೋಬರ್​ 29ರೊಳಗೆ ಸೀಲ್​ ಮಾಡಿದ ಕವರ್​​ನಲ್ಲಿ ರಫೇಲ್​ ಒಪ್ಪಂದದ ಮಾಹಿತಿ ನೀಡಬೇಕು ಎಂದು ಕೋರ್ಟ್​ ಹೇಳಿದೆ. ಆದ್ರೆ ಜೆಟ್​​​ಗಳ ಬೆಲೆ ಅಥವಾ ಸೂಕ್ತತೆ ಬಗ್ಗೆ ವಿವರಣೆಗೆ ಹೋಗಬೇಡಿ ಎಂದು ಸ್ಪಷ್ಟಪಡಿದಿದೆ. ನಾವು ಸರ್ಕಾರಕ್ಕೆ ನೋಟಿಸ್​ ನೀಡುತ್ತಿಲ್ಲ. ಅರ್ಜಿದಾರರ ವಾದಗಳನ್ನು ಕೋರ್ಟ್​ ಪರಿಗಣಿಸುತ್ತಿಲ್ಲ. ಅವರ ವಾದಗಳು ತೀರಾ ಅಸಮರ್ಪಕವಾಗಿವೆ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯಿ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
ರಫೇಲ್​ ಒಪ್ಪಂದ ನಿರ್ಧಾರಕ್ಕೆ ತೆಗೆದುಕೊಂಡ ಹೆಜ್ಜೆಗಳೇನು ಎಂಬ ಬಗ್ಗೆ ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳಬೇಕಿದೆ. ಇದೊಂದು ಸೂಕ್ಷ್ಮ ವಿಚಾರವಾಗಿರುವುದರಿಂದ, ಒಪ್ಪಂದದ ಸೂಕ್ತತೆಯ ಬಗ್ಗೆ ನಾವು ಪ್ರಶ್ನಿಸುತ್ತಿಲ್ಲ ಎಂದು ಸುಪ್ರೀಂ ಕೋರ್ಟ್​ ಹೇಳಿದೆ.
ರಫೇಲ್​​ ಒಪ್ಪಂದದ ಬಗ್ಗೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ತನಿಖೆಯಾಗಬೇಕು. ಕೇಂದ್ರ ಸರ್ಕಾರ ಈ ಒಪ್ಪಂದದ ಮಾಹಿತಿಯನ್ನು ಬಹಿರಂಗಗೊಳಿಸಬೇಕು ಅಥವಾ ಒಪ್ಪಂದವನ್ನು ರದ್ದು ಮಾಡಬೇಕು ಎಂದು ಕೋರಿ ಇಬ್ಬರು ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಫ್ರಾನ್ಸ್​​ನ ಡಸ್ಸಾಲ್ಟ್​​ ಸಂಸ್ಥೆಯಿಂದ 36 ಫೈಟರ್​ ಜೆಟ್​​​ಗಳ ಖರೀದಿಗಾಗಿ ಮಾಡಿಕೊಂಡಿರುವ ರಫೇಲ್​ ಒಪ್ಪಂದದಲ್ಲಿ ₹59,000 ಕೋಟಿ ಅವ್ಯವಹಾರ ನಡೆದಿದೆ ಎಂದು ಅರ್ಜಿದಾರ ಎಮ್​ಎಲ್​ ಶರ್ಮಾ ವಾದಿಸಿದ್ದಾರೆ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!