Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಅರ್ಹ ಎಲ್ಲಾ ಪಲಾನುಭವಿಗಳಿಗೆ ಅನಿಲಭಾಗ್ಯ ಯೋಜನೆ ಮಂಜೂರು- ಶಾಸಕ ಸಿ.ಎಸ್.ಶಿವಳ್ಳಿ

ಅರ್ಹ ಎಲ್ಲಾ ಪಲಾನುಭವಿಗಳಿಗೆ ಅನಿಲಭಾಗ್ಯ ಯೋಜನೆ ಮಂಜೂರು- ಶಾಸಕ ಸಿ.ಎಸ್.ಶಿವಳ್ಳಿ

Spread the love

ಹುಬ್ಬಳ್ಳಿ, ಡಿ.15 : ಅನಿಲ ಭಾಗ್ಯ ಯೋಜನೆಯಡಿ ಕುಂದಗೋಳ ಮತ ಕ್ಷೇತ್ರದ ವ್ಯಾಪ್ತಿಯ ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೋಬಳಿಗೆ ಸಂಬಂದಪಟ್ಟಂತೆ ಒಟ್ಟು 1703 ಅರ್ಜಿಗಳು ಸ್ವೀಕೃತವಾಗಿವೆ. ಮೊದಲ ಹಂತದಲ್ಲಿ 316 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಉಳಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ಅನಿಲಭಾಗ್ಯ ಯೋಜನೆಯನ್ನು ಮಂಜೂರು ಮಾಡಲಾಗುವುದು ಎಂದು ಕುಂದಗೋಳ ಶಾಸಕರಾದ ಸಿ.ಎಸ್.ಶಿವಳ್ಳಿಯವರು ಹೇಳಿದರು.ಇಂದು ಮಿನಿವಿಧಾನ ಸೌಧದ ತಾಲೂಕು ಸಭಾಂಗಣದಲ್ಲಿ 24 ಅನಿಲ ಭಾಗ್ಯ ಫಲಾನುಭವಿಗಳಿಗೆ ಗ್ಯಾಸ್‍ಸಿಲೆಂಡರ್ ಹಾಗೂ ಒಲೆಗಳನ್ನು ವಿತರಿಸಿ ಮಾತನಾಡಿದರು.ಬಡವರ ಹಿತರಕ್ಷಣೆ ದೃಷ್ಟಿಯಿಂದ ಹಿಂದಿನ ಸರ್ಕಾರದಲ್ಲಿ ಜಾರಿಗೊಳಿಸಲಾಗಿದ್ದ ಅನಿಲ ಭಾಗ್ಯ ಯೋಜನೆಯನ್ನು ಸಮ್ಮಿಶ್ರ ಸರ್ಕಾರದಲ್ಲಿ ಮುಂದುವರಿಸಲಾಗಿದೆ. ಯೋಜನೆಗೆ ಬಜಟ್‍ನಲ್ಲಿ ಸಾಕಷ್ಟು ಹಣ ನೀಡಲಾಗಿದೆ. ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಮನ ಒಲಿಸಿ ಹೆಚ್ಚಿನ ಅನುದಾನ ಪಡೆದು ಎಲಾ ಅರ್ಹ ಫಲಾನುಭವಿಗಳಿಗೂ ಗ್ಯಾಸ್ ಕಿಟ್‍ಗಳನ್ನು ವಿತರಿಸಲಾಗುವುದು. ಯೋಜನೆಯು ಉತ್ತಮವಾಗಿದ್ದು, ಜಾಲಿ ಕಟ್ಟಿಗೆ ಹಾಗೂ ಹೊಗೆಯ ನಡುವೆ ಅಡುಗೆ ಮಾಡಬೇಕಾದ ಮಹಿಳೆಯರ ಬವಣೆಯನ್ನು ತಪ್ಪಿಸಿದೆ. ಸರ್ಕಾರ ಬಡವರ ಪರವಾಗಿದೆ. ಹಿಂದಿನ ಸರ್ಕಾರದಲ್ಲಿ 8 ಸಾವಿರ ಕೋಟಿ ಸಹಕಾರಿ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾಮಾಡಲಾಗಿದ್ದು, ಪ್ರಸ್ತುತ ಸರ್ಕಾರದಲ್ಲಿ 45 ಸಾವಿರ ಕೋಟಿ ರೈತರ ಸಾಲಾವನ್ನು ಮನ್ನಾ ಮಾಡಲಾಗಿದೆ ಎಂದು ಹೇಳಿದರು.ತಹಶೀಲಾದರರ ಶಶಿಧರ ಮಾಡ್ಯಾಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹುಬ್ಬಳ್ಳಿ ತಾಲೂಕಿನ ಛಬ್ಬಿ ಹೊಬಳಿ ವ್ಯಾಪ್ತಿಯಲ್ಲಿ ಒಟ್ಟು 1703 ಅರ್ಜಿಗಳನ್ನು ಆನ್‍ಲೈನ್ ಮೂಲಕ ಸಲ್ಲಿಸಲಾಗಿತ್ತು. ಇದರಲ್ಲಿ ಪ್ರಥಮ ಹಂತದಲ್ಲಿ 316 ಜನ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಎಲ್ಲಾ ಫಲಾನುಭವಿಗಳ ಮನೆಗಳಿಗೆ ಖುದ್ದಾಗಿ ತೆರಳಿ ಗ್ಯಾಸ್ ಸಿಲೆಂಡರ್ ಹಾಗೂ ಒಲೆಗಳನ್ನು ವಿತರಿಸಲಾಗುವುದು ಎಂದು ಹೇಳಿದರು.ತಾ.ಪಂ. ಕಾರ್ಯನಿರ್ವಾಹ ಅಧಿಕಾರಿ ಎಂ.ಎಂ.ಸವದತ್ತಿ, ಆಹಾರ ಇಲಾಖೆಯ ಶಿರಸ್ತೇದಾರ ವಿರಕ್ತಮಠ, ಅನಿಲಭಾಗ್ಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Check Also

ಮೈಸೂರು ದಸರಾ, ಎಷ್ಟೊಂದು ಸುಂದರ, ಜಂಬೂ ಸವಾರಿ; ನೋಡೋಣ ಬನ್ನಿ ರೀ.. !

Spread the loveಬೆಂಗಳೂರು: ವಿಶ್ವ ವಿಖ್ಯಾತ ಮೈಸೂರು ದಸರಾವನ್ನು ಈ ಬಾರಿ ಸರಳವಾಗಿ ಆಚರಿಸಲಾಯಿತು. ಕೋರೊನಾ ಹಿನ್ನಲೆಯಲ್ಲಿ ಸಾವಿರಾರು ಜನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!