Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಅಳೆದುಳಿದ ಬೆಳೆಗಳಲ್ಲಿಯೇ ಸೀಗೆ ಹುಣ್ಣಿಮೆ ಆಚರಿಸಿದ ರೈತ ಸಮುದಾಯ.

ಅಳೆದುಳಿದ ಬೆಳೆಗಳಲ್ಲಿಯೇ ಸೀಗೆ ಹುಣ್ಣಿಮೆ ಆಚರಿಸಿದ ರೈತ ಸಮುದಾಯ.

ಹುಬ್ಬಳ್ಳಿ: ಧಾರವಾಡ ಜಿಲ್ಲೆಯ ಕೆಲಭಾಗಗಳಲ್ಲಿ ಇಂದು ರೈತ ಸಮೂಹ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಗಳೊಂದಿಗೆ ಸಂಭ್ರಮದಿಂದ ಆಚರಿಸಿತು. ಈ ಬಾರಿ ಮಳೆಯಿಂದಾಗಿ ರೈತ ಸಮೂಹ ತೀವ್ರ ಸಂಕಷ್ಟದಲ್ಲಿದೆ. ಆದರೂ ಕೂಡ ಸಂಪ್ರದಾಯವನ್ನು ಕೈಬಿಡಬಾರದೆಂಬ ಉದ್ದೇಶದಿಂದ ರೈತರು ಭೂದೇವಿಯ ಆರಾಧನೆಯಲ್ಲಿ ನಿರತವಾಗಿದ್ದು ವಿಶೇಷವಾಗಿ ಗಮನ ಸೆಳೆಯಿತು. ಇನ್ನೂ ಕ್ಯಾಲೆಂಡರ್ ಪ್ರಕಾರ ಸೀಗೆಹುಣ್ಣಿಮೆ ರವಿವಾರ ಬಂದಿದ್ದು, ಅಂದು ಚರಗಾ ಚೆಲ್ಲುವ ಸಂಪ್ರದಾಯ ಇಲ್ಲದ ಕಾರಣ ಜಿಲ್ಲೆಯ ಹಲವಾರು ಪ್ರದೇಶದ ರೈತ ಸಮುದಾಯ ಇಂದೇ ಸೀಗೆಹುಣ್ಣಿಮೆ ಆಚರಣೆ ಮಾಡಿದ್ದವು. ಹೀಗಾಗಿ 2 ದಿನ ಮುಂಚಿತವಾಗಿಯೇ ಇಲ್ಲಿ ಹುಣ್ಣಿಮೆ ಸಂಭ್ರಮ ಕಳೆಗಟ್ಟಿತ್ತು. ವಿಜಯದಶಮಿಯ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ 5 ಬಗೆಯ ಕಾಳುಗಳನ್ನು ಕುದಿಸಿ ಅವುಗಳನ್ನು ಹೊಲದ ಸುತ್ತಲೂ ಚರಗದ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ. ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮದ್ಧವಾಗಿರಲಿದೆ ಎನ್ನುವ ನಂಬಿಕೆ ಜನಪದದಲ್ಲಿದೆ. ಇನ್ನೂ ಜಾನುವಾರುಗಳ ಮೈತೊಳೆದು ಸಿಂಗರಿಸುವುದು ಸಂಪ್ರದಾಯವಾಗಿದೆ. ಇನ್ನೂ ಬಹುತೇಕರು ಬೆಳಿಗ್ಗೆ ಬೇಗ ಎದ್ದು ಬೈಕ್ ಟ್ರ್ಯಾಕ್ಟರ್, ನಡೆದುಕೊಂಡು ಹೋಗಿ ಹೊಲಗಳನ್ನು ಪೂಜೆ ಮಾಡಿ ಚರಗಾ ಚೆಲ್ಲಿದರೇ, ಕೇಲವು ಕುಟುಂಬಗಳು ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ ರೈತರು ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವದಲ್ಲಿ ತೇಲಿದರು. ಇನ್ನೂ ಮಳೆಯಿಂದ ಅಳೆದುಳಿದ ಫಸಲಿಗೆ ಉಡಿ ಕಟ್ಟಿ ಸೀರೆ, ಕುಪ್ಪುಸ ತೊಡಿಸಿ ಪೂಜಿಸಿ ಆರಾಧಿಸಿದ ರೈತ ಸಮೂಹ ಅಲ್ಲಿಯೇ ಪಾಂಡವರ ಮೂರ್ತಿಗಳನ್ನು ನಿರ್ಮಿಸಿ ಅವುಗಳಿಗೂ ಪೂಜೆ ಸಲ್ಲಿಸಿತು. *ಹತ್ತಾರು ಬಗೆಯ ಆಹಾರ ಪದಾರ್ಥ:* ಸೀಗೆ ಹುಣ್ಣಿಮೆಯ ಸಡಗರಕ್ಕಾಗಿಯೇ ಹತ್ತಾರು ತರಾವರಿ ಪದಾರ್ಥಗಳು ಸಿದ್ಧಗೊಂಡಿದ್ದವು. ಕಡುಬು, ಖರ್ಚಿಕಾಯಿ, ಹೋಳಿಗೆ, ಎಣಗಾಯಿ ಪಲ್ಯೆ, ಮಡಕಿಕಾಳು ಪಲ್ಯೆ, ವಿಧವಿಧದ ಬುತ್ತಿ… ಹೀಗೆ ಹಲವಾರು ಪದಾರ್ಥಗಳನ್ನು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆಗೂಡಿ ಸಹಭೋಜನದಲ್ಲಿ ತೊಡಗಿದ್ದ ರೈತರು ಸೀಗೆ ಹುಣ್ಣಿಮೆಯ ಅರ್ಥಪೂರ್ಣ ಆಚರಣೆಗೆ ಸಾಕ್ಷಿಯಾದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!