Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಅಹವಾಲು ಸ್ವೀಕರಿಸಲು ಬಂದ ಸಿಎಂ ಅಹವಾಲು ಸ್ವೀಕರಿಸದೆ ಹೋದ್ರು : ಜನರ ಗೋಳು ಕೇಳೋರ್ಯಾರು

ಅಹವಾಲು ಸ್ವೀಕರಿಸಲು ಬಂದ ಸಿಎಂ ಅಹವಾಲು ಸ್ವೀಕರಿಸದೆ ಹೋದ್ರು : ಜನರ ಗೋಳು ಕೇಳೋರ್ಯಾರು

ಬೆಳಗಾವಿ:- ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ದರೂರು ಗ್ರಾಮದಲ್ಲಿ ನಡೆದ ಯಡಿಯೂರಪ್ಪನವರ ಅಹವಾಲು ಸ್ವೀಕಾರ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು. ಮೊದಲೇ ನೆರೆಯಿಂದ ಬಳಲಿದ ಜನರ ಅಂಗಡಿ ಮುಂಗಟ್ಟನ್ನು ಸಿ ಎಂ ಬರ್ತಾರೆ ಎಂಬ ಒಂದೇ ಒಂದು ಕಾರಣಕ್ಕೆ ಪೊಲೀಸರು ಮುಚ್ಚಿಸಿದ್ರು. ಅಲ್ಲದೆ ಅಂಗಡಿ ಮುಚ್ಚದೆ ಇದ್ದ ಬಾಲಕನಿಗೆ ಪೊಲೀಸರು ಬಸ್ಕಿ ಹೊಡೆಸಿದ ಅಮಾನವೀಯವಾಗಿ ವರ್ತಿಸಿದ ಘಟನೆಯೂ ನಡೆಯಿತು. ಅಲ್ಲದೆ ವೇದಿಕೆ ಭಾಗಕ್ಕಷ್ಟೆ ನೆರಳಿನ ವ್ಯವಸ್ಥೆ ಮಾಡಿದ್ದ ಜಿಲ್ಲಾಡಳಿತ ಸಂತ್ರಸ್ಥರನ್ನು ಸುಡುವ ಬಿಸಿಲಿನಲ್ಲಿ ಕೂರುವಂತೆ ಮಾಡಿತ್ತು. ಇನ್ನೂ ವೇದಿಕೆಗೆ ಬಂದ ಡಿಸಿಎಂ ಸವದಿ ನಾನು ಕೂಡ ಒಬ್ಬ ಸಂತ್ರಸ್ಥ ಎಂಬಂಥ ರೀತಿಯಲ್ಲಿ‌ ಮಾತನಾಡಿದ್ರು. ಈ ಹಿಂದೆ ನಂದು ನೂರು ಎಕರೆ ಜಮೀನಿದೆ ಅದಕ್ಕೆ ಪರಿಹಾರ ಕೊಡಬೇಕು ಎಂದಾದರೆ 1 ಕೋಟಿ ರೂಪಾಯಿ ಬೇಕು ಎಂಬ ಮಾತುಗಳನ್ನ ಬೆಳಗಾವಿಯಲ್ಲಿ ಆಡಿದ್ದರು ಆದರೆ ಅಲ್ಲಿ ಹಾಗೆ ಮಾತನಾಡಿ ಅಥಣಿ ತಾಲೂಕಿನ ದರೂರಿಗೆ ಬರೋವಷ್ಟರಲ್ಲಿ ಡಿ ಸಿ ಎಂ ಅವರ ಗದ್ದೆಯಲ್ಲಿ 20 ಎಕರೆ ಕಡಿಮೆಯಾದರಂತೆ ಕಾಣುತ್ತೆ ಯಾಕೇಂದ್ರೆ ಅಲ್ಲಿ 100 ಎಕರೆ ಎಂದು ಹೇಳಿದ್ದ ಡಿ ಸಿ ಎಮ್ ಲಕ್ಷ್ಮಣ ಸವದಿ ದರೂರಿಗೆ ಬಂದು 80 ಎಕರೆ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಅಥಣಿ ಮತಕ್ಷೇತ್ರದ ಜನ ನಮ್ಮ‌ ಸವದಿಯವರ ನಿಜವಾದ ಗದ್ದೆ ಎಷ್ಟಿದೆ ಎನ್ನುವ ಪ್ರಶ್ನೆ ಮಾಡುತ್ತಿದ್ದಾರೆ . ಡಿ ಸಿ ಎಂ ಭಾಷಣದ ಬಳಿಕ ಮಾತನಾಡಿದ ಸಿ ಎಂ ಯಡಿಯೂರಪ್ಪ ಸಂತ್ರಸ್ಥರಿಗೆ ಎರಡು ಅವಕಾಶವಿದೆ ಇದ್ದ ಜಾಗದಲ್ಲೆ‌ ಮನೆ ಕಟ್ಟಿಸಿಕೊಳ್ತಿರೋ ಅಥವಾ ಬೇರೆಕಡೆ ಹೋಗಿ ನೀವು ಜಾಗ ಆಯ್ಕೆ ಮಾಡ್ಕೊಳ್ತಿರೋ ಆಯ್ಕೆ ನಿಮಗೆ ಬಿಟ್ಟಿದ್ದು ಎಂದು ಹೇಳಿದರು. ಇನ್ನು ಸಿ ಎಂ‌ ಭಾಷಣ ಮಾಡುತ್ತಿರುವಾಗಲೇ ಮಳೆ ಬಂದಿದ್ದರಿಂದ ಸಿ ಎಂ ಯಡಿಯೂರಪ್ಪ ತರಾತುರಿಯಲ್ಲೇ ಭಾಷಣ ಬೇಗ ಮುಗಿಸಿ ಕಾರು ಹತ್ತಿ ಹೊರಟರು ಆದರೆ ಸಿ ಎಂಗೆ ತಮ್ಮ ಅಹವಾಲು ನೀಡಲು ಬಂದಿದ್ದ ರೈತರು ಮತ್ತು ಜನಸಾಮಾನ್ಯರು ಅವರ ಅಹವಾಲು‌ ಕೇಳದೆ ಹೋದ ಸಿ ಎಂ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

Share

About Site Default

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!