Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಆಡಿಯೋ ಪ್ರಕರಣ: ಅದು ಹೇಗೆ ಲಂಚದ ಪ್ರಕರಣವಾಗುತ್ತೆ ಸಿ.ವಿ.ನಾಗೇಶ್‌ ವಾದ

ಆಡಿಯೋ ಪ್ರಕರಣ: ಅದು ಹೇಗೆ ಲಂಚದ ಪ್ರಕರಣವಾಗುತ್ತೆ ಸಿ.ವಿ.ನಾಗೇಶ್‌ ವಾದ

ಕಲಬುರ್ಗಿ: ಆಪರೇಷನ್ ಕಮಲದ ಆಡಿಯೋ ಟೇಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಫ್ಐಆರ್ ರದ್ದು ಕೋರಿ ಕಲಬುರ್ಗಿ ಹೈಕೋರ್ಟ್ ಪೀಠಕ್ಕೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆಯಿತು. ಕೋರ್ಟ್ ನಂಬರ್ 4ರಲ್ಲಿ ಬಿ.ಎಸ್ ಯಡಿಯೂರಪ್ಪ ಪರ ಹಿರಿಯ ವಕೀಲ ಸಿ.ವಿ.ನಾಗೇಶ್‌ ವಾದ ಮಂಡಿಸಿದ್ರು. ಇದಾದ ನಂತ್ರ, ನ್ಯಾಯಪೀಠವು ತೀರ್ಪು ಕಾಯ್ದಿರಿಸಿ, ಪ್ರಕರಣವನ್ನು ಮುಂದೂಡಿದೆ.ವಾದ ಏನಿತ್ತು..ಸತತ ಒಂದೂವರೆ ಗಂಟೆಗಳ ಕಾಲ ಬಿಎಸ್‌ವೈ ಪರ ವಕೀಲ ನಾಗೇಶ್ ವಾದ ಮಂಡಿಸಿದರು. ಶರಣಗೌಡ ನೀಡಿದ ದೂರಿನ ಪ್ರತಿಯನ್ನು ಅವರು ಸಂಪೂರ್ಣವಾಗಿ ಓದಿದರು. ಬಿಎಸ್‌ವೈ ವಿರುದ್ಧ ದಾಖಲಾಗಿರುವ ಎಫ್ಐಆರ್ ರಾಜಕೀಯ ಷಡ್ಯಂತ್ರ ಎಂದೂ ವಾದ ಮಂಡಿಸಿದರು. ಫೆಬ್ರವರಿ 9ರ ರಾತ್ರಿ ಘಟನೆ ನಡೆದಿದ್ದು, ಫೆ. 13ರಂದು ದೂರು ಸಲ್ಲಿಸಿದ್ದಾರೆ. ಈ ಮಧ್ಯೆ ಕಾನೂನು ಸಲಹೆ ಪಡೆದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಗಿ ತಿಳಿಸಿದ್ದಾರೆ.ರಾಜಕೀಯ ಷಡ್ಯಂತ್ರದಿಂದ ದೂರು ನೀಡಲಾಗಿದೆ. ದೂರು ನೀಡಿರುವ ಶರಣಗೌಡ ಕಂದಕೂರು ಪಬ್ಲಿಕ್ ಸರ್ವೆಂಟ್ ಅಲ್ಲ. ಎಂಎಲ್‌ಎ ಮಗ, ಓರ್ವ ಮಾಜಿ ಸಿಎಂ ವಿರುದ್ಧ ಆರೋಪ ಮಾಡಿದ್ದಾರೆ. ಎಲೆಕ್ಷನ್‌ಗೆ ನಿಲ್ಲಲು ಹಣ ಕೊಡುವುದಾಗಿ ಹೇಳಿದ್ದಾರೆ ಎಂದು ತಾವೇ ಸಲ್ಲಿಸಿದ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಪಬ್ಲಿಕ್ ಸರ್ವೆಂಟ್ ಅಲ್ಲದವನಿಗೆ ನಮ್ಮ ಪಕ್ಷಕ್ಕೆ ಬಂದು ಎಲೆಕ್ಷನ್‌ಗೆ ಸ್ಪರ್ಧಿಸು ಎಂದು ಹೇಳಿದ್ದಾರೆ. ಇದು ಹೇಗೆ ಲಂಚದ ಪ್ರಕರಣವಾಗುತ್ತೆ ಎಂದು ಹಿರಿಯ ವಕೀಲ ಸಿ.ವಿ.ನಾಗೇಶ್ ವಾದ ಮ‌ಂಡಿಸಿದ್ರು. ಇನ್ನೂ ಇದೇ ವೇಳೆ 1992ರ ಭಜನಲಾಲ್ ಕೇಸ್ , 2004 ಪವಿತ್ರಾ ಕೇಸ್, 2006ರ ಭಟ್ ಪ್ರಕರಣವನ್ನ ಸಿ.ವಿ.ನಾಗೇಶ್ ಉಲ್ಲೇಖಿಸಿದರು. ಸುಪ್ರೀಂಕೋರ್ಟ್ ನೀಡಿದ್ದ ತೀರ್ಪು ಬಗ್ಗೆ ಕೋರ್ಟ್ ಗಮನಕ್ಕೆ ತಂದರು

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!