Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಆನಂದನಗರದ ಸ್ಟೇಟ್ ಬ್ಯಾಂಕ್ ಶಾಖೆ ಪುನರ್ನಿರ್ಮಾಣಕ್ಕೆ ಆಗ್ರಹ..

ಆನಂದನಗರದ ಸ್ಟೇಟ್ ಬ್ಯಾಂಕ್ ಶಾಖೆ ಪುನರ್ನಿರ್ಮಾಣಕ್ಕೆ ಆಗ್ರಹ..

Spread the love

ಹುಬ್ಬಳ್ಳಿ: ಹಳೇ ಹುಬ್ಬಳ್ಳಿಯ ಆನಂದನಗರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ ನಂ-17787 ಆನಂದನಗರ ಶಾಖೆಯನ್ನು ದಿಡಿರನೇ ಮುಚ್ಚಿರುವುದು ಖಂಡನೀಯವಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಗೆ ಪೂರಕವಾಗಿ ಸ್ಟೇಟ್ ಬ್ಯಾಂಕ್ ಆನಂದನಗರ ಶಾಖೆಯನ್ನು ಪುನರ್ನಿರ್ಮಾಣ ಮಾಡಬೇಕು ಎಂದು ಆನಂದನಗರ ಹಿತರಕ್ಷಣಾ ಸಮಿತಿಯ ಮುಖಂಡರಾದ ರಾಜು ಹಿರೇವಡೆಯ ಆಗ್ರಹಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆನಂದನಗರದಲ್ಲಿ ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಸ್ಟೇಟ್ ಬ್ಯಾಂಕ್ ಶಾಖೆಯು ಯಾವುದೇ ಮಾಹಿತಿಯಿಲ್ಲದೇ ದಿಡಿರನೇ ಮುಚ್ಚಿರುವುದು ಸ್ಥಳೀಯ ಅಸಮಾಧಾನಕ್ಕೆ ಕಾರಣವಾಗಿದೆ ಎಂದರು. ಸುಮಾರು 14 ಸಾವಿರಕ್ಕೂ ಹೆಚ್ಚು ಉಳಿತಾಯ ಖಾತೆಗಳನ್ನು ಹೊಂದಿರುವ ಹಾಗೂ 20 ಕೋಟ ಎಫ್ ಡಿ ಹೊಂದಿದ್ದ ಸುಸಜ್ಜಿತ ಕಟ್ಟಡವನ್ನು ಏಕಾಏಕಿ ಮುಚ್ಚಿದ್ದು, ಇದರಿಂದ ವೃದ್ಧರು ಹಾಗೂ ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆನಂದನಗರ ಶಾಖೆಯನ್ನು ಮುಚ್ಚಿ ಅದನ್ನು ಸಿದ್ದಾರೂಡ ಮಠದ ಆವರಣ ಶಾಖೆಗೆ ವರ್ಗಾವಣೆ ಮಾಡಿದೇ ಆದರೇ ಅಲ್ಲಿ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದರು. ಈ ಹಿನ್ನೆಲೆಯಲ್ಲಿ ವೃದ್ಧರು ಅಲ್ಲಿಯವರೆಗೂ ಹೋಗಿ ತಮ್ಮ ಬ್ಯಾಂಕ್ ವ್ಯವಹಾರ ಪೂರೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಈ ನಿಟ್ಟಿನಲ್ಲಿ ಶೀಘ್ರವಾಗಿ ಆನಂದನಗರ ಶಾಖೆಯನ್ನು ಪುನರ್ನಿರ್ಮಾಣ ಮಾಡಬೇಕು ಎಂದು ಅವರು ಒತ್ತಾಯಿಸಿದರು. ಈ ಕುರಿತು ಹಲವಾರು ಬಾರಿ ಮನವಿ ಮಾಡಿದ್ದರು ಕೂಡ ಮೇಲಾಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಅಲ್ಲದೇ ಇನ್ನು ಹದಿನೈದು ದಿನಗಳ ಒಳಗಾಗಿ ಆನಂದನಗರ ಶಾಖೆಯ ಪುನರ್ನಿರ್ಮಾಣ ಕೈಗೊಳ್ಳದೇ ಇದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಇಮ್ರಾನ್ ಯಲಿಗಾರ, ನಿಜಲಿಂಗಪ್ಪ ಪತ್ತಾರ, ಶಿವು ಗೋಕಾವಿ, ದೂರಪ್ಪ ಗಾಂಡೊಳ್ಳರ, ಇಮಾಮ್ ಮಡಕಿ ಸೇರಿದಂತೆ ಇತರರು ಇದ್ದರು.

Check Also

‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್

Spread the loveತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!