Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..?

ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..?

ಆರಕ್ಷಕರಿಂದಲ್ಲೆ ಹಣಕ್ಕಾಗಿ ಕೊಲೆ ಆಗಿದಿಯಾ..?

ವಾಣಿಜ್ಯ ನಗರೀ ಹುಬ್ಬಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು
ನೋಡುವುದಾದ್ರೇ ಇಲ್ಲಿ ಕದ್ದವನು ಸೇಫ್ , ಸುಮ್ಮನಿದ್ದವನು ಅರೆಸ್ಟ್ ಎಂಬುವ ಹಾಗಿದೆ ಖಾಕಿಪಡೆಯ ನಡೆ.
ಕಳೆದ 19 ರಂದು ಶಹರ ಪೋಲಿಸ್ ಠಾಣೆಯಲ್ಲಿ ಲಾರಿ ಕಳ್ಳತನ ಆರೋಪದಡಿಯಲ್ಲಿ ಐದಕ್ಕೂ ಹೆಚ್ಚು ಜನರನ್ನು
ಪೋಲಿಸರು ಬಂಧಿಸಿ ಠಾಣೆ ಕರೆತಂದು ಅದರಲ್ಲಿ ಇಬ್ಬರನ್ನು ಅಂದರ್ ಮಾಡಿದ್ದರು. ಆದ್ರೇ ಅಂದರ್ ಆದವರಲ್ಲಿ
ಒಬ್ಬ ಇಂದು ಸಾವನ್ನಪ್ಪಿದ್ದಾನೆ. ಅಷ್ಟಕ್ಕೂ ಈ ಸಾವಿನ ಸುತ್ತ ಹಲವು ಅನುಮಾನಗಳ ಮಾತುಗಳು ಕೇಳಿ ಬರುತ್ತೀವೆ.
ಈ ಪ್ರಕರಣದಲ್ಲಿ ಕುಟುಂಬಸ್ಥರು ಹೇಳುವ ಪ್ರಕಾರ ಹಣಕ್ಕಾಗಿಯೇ ಪೋಲಿಸರು ಪೀಡಿಸಿ ಕೊಲೆ ಮಾಡಿದ್ದಾರೆಂದು
ಆರೋಪಿಸಿದ್ದಾರೆ. ಇದರಲ್ಲಿ ವಿಚಾರಣೆಗೆ ಕರೆತಂದಂತ್ತ ಕೇಲವರು ಹೇಳುವ ಪ್ರಕಾರ ಪೋಲಿಸರಿಗೆ ಹಣ ನೀಡಿ
ಹೊರಬಂದಿದ್ದಾರಂತೆ. ಆದ್ರೇ ಬಂಧಿತರಾಗಿದ್ದವರಲ್ಲಿ ದಾವಲ್ ಸಾಬ್ ಹೊಸಪೇಟೆಯವರು ಪೋಲಿಸರಿಗೆ ಹಣ ನೀಡಲು
ನಿರಕರಿಸಿದ ಹಿನ್ನೆಲೆಯಲ್ಲಿ ಪೋಲಿಸರು ಹಿಗ್ಗಾಮುಗ್ಗ ತಳಿಸಿದರಂತೆ. ನಂತರ ಆತನನ್ನು ನ್ಯಾಯಂಗ ಬಂಧನಕ್ಕೆ
ಓಪ್ಪಿಸಿದ್ದಾರೆ. ನ್ಯಾಯಂಗ ಬಂದನದಲ್ಲಿದ್ದ ವ್ಯಕ್ತಿ ಕೇಲವೇ ಕ್ಷಣಗಳಲ್ಲಿ ಕುಸಿದು ಬಿದಿದ್ದಾನೆಂದು
ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೋಲಿಸರು ಹೆಳುವ ಪ್ರಕಾರ ಮೃತ ವ್ಯಕ್ತಿ
ದಾವಲ್ ಸಾಬ್ ಅತೀಯಾದ ಮದ್ಯಪಾನ ಸೇವನೆ ಮಾಡುತ್ತಿದ್ದರು, ಆತನಿಗೆ ಪೀಡ್ಸ್ ಕಾಯಿಲೆ ಇತ್ತು. ಹೀಗಾಗಿ
ಆತ ಹೃದಯಘಾತವಾಗಿ ಸಾವನ್ನಾಪ್ಪಿದ್ದಾನೆಂದು ತಿಳಿಸಿದ್ದಾರೆ. ಒಂದಕ್ಕೊಂದು ತಾಳೆ ಇಲ್ಲದ ಪೋಲಿಸರ ಮಾತುಗಳಲ್ಲಿ
ಎಷ್ಟರ ಮಟ್ಟಿಗೆ ಸತ್ಯಾಂಶ ಇದೆ ಎಂದು ಮೇಲ್ನೋಟಕ್ಕೆ ತಿಳಿಯುತ್ತೇ. ಇನ್ನೂ ಮೃತನ ದೇಹದ ಎದೆ ಭಾಗದ
ಕೆಳಗೆ ಹಾಗೂ ಹೊಟ್ಟೆಯ ಮೇಲೆ ರಕ್ತ ಕಲೆಗಳಿವೆ. ಅಲ್ಲಲ್ಲಿ ಪೋಲಿಸರು ತಳಿಸಿರುವ ಗುರುತುಗಳು ಗೋಚರವಾಗುತ್ತವೆ.
ಇವೆಲ್ಲಾ ನೋಡಿದರೇ ಪೋಲಿಸರು ಹಣಕ್ಕಾಗಿಯೇ ಆರೋಪಿಯ ಮೇಲೆ ಈ ಅಮಾನುಷವಾಗಿ ನಡೆದುಕೊಂಡರ ಎಂಬ ಪ್ರಶ್ನೆಗಳು
ಮೂಡುತ್ತಿವೆ.

Share

About Shaikh BIG TV NEWS, Hubballi

Check Also

ಪಿಆರ್ ಡಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಾಂಡೋಲಿಕರ ಎಸಿಬಿ ಬಲೆಗೆ

ಧಾರವಾಡ : ನಾಲ್ಕನೇ ದರ್ಜೆ ಗುತ್ತಿಗೆದಾರರ ಲೈಸನ್ಸ್ ಮಾಡಿಕೊಡಲು ಲಂಚದ ಬೇಡಿಕೆಯಿಟ್ಟಿದ್ದ ಪಂಚಾಯತ್ ರಾಜ್ ಇಲಾಖೆಯ ಎಕ್ಸಿಕ್ಯೂಟಿವ್ ಎಂಜಿನಿಯರ್ ಒಬ್ಬರು …

Leave a Reply

Your email address will not be published. Required fields are marked *

error: Content is protected !!