Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಆರ್ ಎಸ್ ಎಸ್ ಬಗ್ಗೆ ಗಂಧಗಾಳಿ ಗೊತ್ತಿರದ ವಿನಯ ಕುಲಕರ್ಣಿ: ಬೆಲ್ಲದ ವಾಗ್ದಾಳಿ

ಆರ್ ಎಸ್ ಎಸ್ ಬಗ್ಗೆ ಗಂಧಗಾಳಿ ಗೊತ್ತಿರದ ವಿನಯ ಕುಲಕರ್ಣಿ: ಬೆಲ್ಲದ ವಾಗ್ದಾಳಿ

Spread the love

ಹುಬ್ಬಳ್ಳಿ: ಲಿಂಗಾಯತ ಧರ್ಮದ ಮೇಲೆ ದಬ್ಬಾಳಿಕೆ ಮಾಡುವ ಹಾಗೂ ಒಡೆದಾಳುವ ನೀತಿಯನ್ನು ಅನುಸರಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಅವಕಾಶ ಕೊಟ್ಟಿರುವುದು ಖಂಡನೀಯವಾಗಿದೆ.ಆರ್.ಎಸ್.ಎಸ್ ಬಗ್ಗೆ ಗಂಧಗಾಳಿ ಗೊತ್ತಿರದ ಕುಲಕರ್ಣಿ ಇಲ್ಲಸಲ್ಲದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದು ಶಾಸಕ ಅರವಿಂದ ಬೆಲ್ಲದ ವಿನಯ ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ಕಾಂಗ್ರೆಸ್ ಪಕ್ಷ ತುಳಿಯುತ್ತಾ ಬಂದಿರುವುದು ಪ್ರತಿಯೊಬ್ಬ ಲಿಂಗಾಯತ ಧರ್ಮದ ಜನತೆಗೆ ಗೊತ್ತಿದೆ. ಅಲ್ಲದೇ ಭಾರತೀಯ ಜನತಾ ಪಾರ್ಟಿ ಕಾರ್ಯಪ್ರವೃತ್ತಿ ನೋಡಿದ್ದಾರೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಈ ಹಿಂದೆ ರಾಜ್ಯದಲ್ಲಿ ಲಿಂಗಾಯತರನ್ನು ಒಡೆಯುವ ಹುನ್ನಾರ ನಡೆಸಿದ ಕಾಂಗ್ರೆಸ್ ನಾಯಕರಿಗೆ ಪಾಠ ಕಲಿಸಿದರೂ ಸಹ ಬುದ್ಧಿ ಬರಲಿಲ್ಲ ಎಂದರು. ವಿನಯ ಕುಲಕರ್ಣಿಯವರು ಪ್ರಲ್ಹಾದ ಜೋಶಿಯವರ ಬಗ್ಗೆ ಮಾತನಾಡುತ್ತ ಲಿಂಗಾಯತರಾದ ಜಗದೀಶ ಶೆಟ್ಟರ್, ಅರವಿಂದ ಬೆಲ್ಲದ, ಶಂಕರಪಾಟೀಲ ಮುನೇನಕೊಪ್ಪ , ಅಮೃತ ದೇಸಾಯಿ ಬಗ್ಗೆ ಮಾತನಾಡುತ್ತಿರುವುದು ಘನತೆಗೆ ಚ್ಯುತಿ ತರುವ ಕಾರ್ಯವಾಗಿದೆ ಎಂದು ಅವರು ಹೇಳಿದರು. ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಯೊಂದು ಸರ್ಕಾರಿ ಕಚೇರಿಯಲ್ಲಿ ಬಸವಣ್ಣನವರ ಪೋಟೊ ಹಾಕುವಂತೆ ಮಾಡಿರುವುದು ಸಿದ್ಧರಾಮಯ್ಯನವರ ಚುನಾವಣೆ ಗಿಮಿಕ್ ಆಗಿದೆ ಎಂದು ಅವರು ಹೇಳಿದರು.ಆರ್.ಎಸ್‌.ಎಸ್‌ ಬಗ್ಗೆ ಮಾತನಾಡಿದ ಅವರು, ಆರ್.ಎಸ್.ಎಸ್. ಬಗ್ಗೆ ಗಂಧಗಾಳಿ ಗೊತ್ತಿರದ ವಿನಯ ಕುಲಕರ್ಣಿಯವರು ಆರ್.ಎಸ್.ಎಸ್ ಕುರಿತು ಮಾತನಾಡುವ ಹಕ್ಕಿಲ್ಲ ಎಂದು ಕುಲಕರ್ಣಿ ವಿರುದ್ಧ ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಅಭ್ಯರ್ಥಿ ಲಿಂಗಾಯತರ ಬಗ್ಗೆ ಮಾತನಾಡುವ ಅವರು ಲಿಂಗಾಯತ ಅಭಿವೃದ್ಧಿಗೆ ಕಿಂಚಿತ್ತೂ ಶ್ರಮವಹಿಸಿಲ್ಲ ಎಂದು ಅವರು ಹರಿಹಾಯ್ದರು.ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಮೃತ ದೇಸಾಯಿ, ಶಂಕರಣ್ಣ ಮುನವಳ್ಳಿ, ಪ್ರದೀಪ ಶೆಟ್ಟರ್, ಶಂಕರ ಪಾಟೀಲ ಮುನೇನಕೊಪ್ಪ, ಮಂಜುನಾಥ ಕುನ್ನುರ, ವಿ.ವಿ.ಪಾಟೀಲ ಸೇರಿದಂತೆ ಇತರರು ಇದ್ದರು.

Check Also

ಧಾರವಾಡ ಜಿಲ್ಲೆಯ ನೂತನ “ಎಸ್ ಪಿ ಆಗಿ” ಕೃಷ್ಣ ಕಾಂತ ಅಧಿಕಾರ ಸ್ವೀಕಾರ

Spread the loveಧಾರವಾಡ: ಜಿಲ್ಲೆಯ ನೂತನ ಎಸ್ ಪಿ ಆಗಿ ಇಂದು ಕ್ರಷ್ಣ ಕಾಂತ ಅವರು ಅಧಿಕಾರವನ್ನು ವಹಿಸಿಕೊಂಡರು. ಹುಬ್ಬಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!