Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಆಹಾರ ಕ್ರಮದ ಗುಟ್ಟನ್ನು ಬಿಚ್ಚಿಟ್ಟ ಮಯಾಂಕ್​.

ಆಹಾರ ಕ್ರಮದ ಗುಟ್ಟನ್ನು ಬಿಚ್ಚಿಟ್ಟ ಮಯಾಂಕ್​.

ಪುಣೆ: ದ. ಅಫ್ರಿಕಾ ವಿರುದ್ಧ ಎರಡನೇ ಟೆಸ್ಟ್​ ಪಂದ್ಯದಲ್ಲೂ ಶತಕ ಸಿಡಿಸಿ ಮಿಂಚುತ್ತಿರುವ ಕನ್ನಡಿಗ ಅಗರ್​ವಾಲ್​ ಪಂದ್ಯಕ್ಕೂ ಮುನ್ನ ತಮ್ಮ ಆಹಾರ ಕ್ರಮದ ಬಗ್ಗೆ ಹೇಳಿದ್ದಾರೆ.ಮಯಾಂಕ್​ ಪಂದ್ಯಕ್ಕೂ ಮುನ್ನ ಕೇವಲ 2 ಎರಡು ಇಡ್ಲಿ ಹಾಗೂ ತೆಂಗಿನ ಕಾಯಿ ಚಟ್ನಿ ಮಾತ್ರ ಸೇವಿಸುವುದಾಗಿ ಹೇಳಿದ್ರು.ಪ್ರಥಮ ದರ್ಜೆ ಕ್ರಿಕೆಟ್​ನ ಫಾರ್ಮ್ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲೂ ಮುಂದುವರಿಸುತ್ತಿರುವುದರ ಬಗ್ಗೆ ಮಾತನಾಡಿರುವ ಯುವ ಕ್ರಿಕೆಟಿಗ, ದೇಶಿ ಕ್ರಿಕೆಟ್​ನಲ್ಲಿ ಸಾಕಷ್ಟು ರನ್​ಗಳಿಸಿದಾಗ ವಿದೇಶದಲ್ಲಿ ಭಾರತ ಎ ತಂಡದ ಪರ ಆಡಲು ಬಿಸಿಸಿಐ ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ನ್ಯೂಜಿಲ್ಯಾಂಡ್​, ವೆಸ್ಟ್​ ಇಂಡೀಸ್​ ಹಾಗೂ ದಕ್ಷಿಣ ಆಫ್ರಿಕಾ ಎ ತಂಡಗಳ ವಿರುದ್ಧ ಕ್ವಾಲಿಟಿ ಬೌಲಿಂಗ್​ ಎದುರಿಸಲು ಉತ್ತಮ ಅವಕಾಶ ಸಿಕ್ಕಿತ್ತು. ಜೊತೆಗೆ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದೆದುರು ಪದಾರ್ಪಣೆ ಮಾಡಿ ರನ್​ಗಳಿಸುವಲ್ಲಿ ಯಶಸ್ವಿಯಾದೆ ಎಂದು ತಿಳಿಸಿದ್ದಾರೆ.ರಣಜಿಯಂತಹ ಸುದೀರ್ಘ ಸರಣಿಯಲ್ಲಿ ಪಾಲ್ಗೊಳ್ಳುವುದರಿಂದ ಟೆಸ್ಟ್​ ಕ್ರಿಕೆಟ್​ನಲ್ಲಿ ಉತ್ತಮ ರನ್​ಗಳಿಸಲು ಸುಲಭವಾಗಿದೆ ಎಂದು ಅವರು ಇದೇ ವೇಳೆ ಹೇಳಿಕೊಂಡಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!