Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಆ್ಯಂಬಿಡೆಂಟ್‌ ವಂಚನೆ ಪ್ರಕರಣ: ಫರೀದ್‌ ಜೊತೆ ಅಲೋಕ್‌ಕುಮಾರ್ ಡೀಲ್ ಆರೋಪ!

ಆ್ಯಂಬಿಡೆಂಟ್‌ ವಂಚನೆ ಪ್ರಕರಣ: ಫರೀದ್‌ ಜೊತೆ ಅಲೋಕ್‌ಕುಮಾರ್ ಡೀಲ್ ಆರೋಪ!

ಬೆಂಗಳೂರು: ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಮತ್ತು ಆ್ಯಂಬಿಡೆಂಟ್ ಮುಖ್ಯಸ್ಥ ಫರೀದ್ ನಡುವೆ ಬಿಗ್ ಡೀಲ್ ನಡೆದಿದೆ ಅಂತಾ ಆ್ಯಂಬಿಡೆಂಟ್​ ಕಂಪನಿ ಗ್ರಾಹಕ ಝೈದ್ ಖಾನ್ ಆರೋಪಿಸಿದ್ದಾರೆ. ಆ್ಯಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಝೈದ್ ಖಾನ್, ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ವಿರುದ್ಧ ನೇರ ಆರೋಪ ಮಾಡಿದ್ದಾರೆ. ಆ್ಯಂಬಿಡೆಂಟ್​ ಕಂಪನಿ ಮಾಲೀಕ ಫರೀದ್​ನನ್ನ ಕಲಂದರ್ ಎಂಬಾತ ಅಲೋಕ್ ಕುಮಾರ್‌ಗೆ ಪರಿಚಯಿಸಿದ್ದಾನೆ. ಈಗಾಗಲೇ ಫರೀದ್​ನಿಂದ ₹ 10 ಕೋಟಿ ಮೌಲ್ಯದ ಆಸ್ತಿ ಕಲಂದರ್ ಹೆಸರಿಗೆ ವರ್ಗಾವಣೆಯಾಗಿದೆ. ಇದೇ ಆಸ್ತಿ ಅಲೋಕ್ ಕುಮಾರ್​ಗೆ ತಲುಪಿದೆ ಅಂತಾ ಆರೋಪಿಸಿದ್ದಾರೆ.‘ಸದ್ಯ ಸಿಸಿಬಿ ಮುಖ್ಯಸ್ಥರಿಂದ ನನಗೆ ಪ್ರಾಣ ಬೆದರಿಕೆ ಬಂದಿದೆ. ಕಳೆದ ಮೂರು ದಿನಗಳ ಹಿಂದೆ ನನ್ನ ಮನೆಗೆ ಬಂದ ಅಪರಿಚಿತರು ನನಗೆ ಜೀವ ಬೆದರಿಕೆ ಹಾಕ್ತಿದ್ದಾರೆ. ಯಾರೋ ಅಪರಿಚಿತರು ನನ್ನ ಬೆನ್ನ ಹಿಂದೆ ಬಿದ್ದಿದ್ದಾರೆ. ಸಿಸಿಬಿ ಫರೀದ್​ನನ್ನ ಬಂಧಿಸಿದ್ದೇ ಒಂದು ಕಣ್ಣೊರೆಸೋ ತಂತ್ರ. ಎರಡೇ ದಿನದಲ್ಲಿ ಫರೀದ್ ಹೇಗೆ ಬೇಲ್ ಪಡೆದ?. ಜನಾರ್ದನ್‌ ರೆಡ್ಡಿಯವರನ್ನ ಬಂಧಿಸಿದ್ದು ಪ್ರಕರಣದ ದಿಕ್ಕು ತಪ್ಪಿಸುವ ತಂತ್ರವಾಗಿತ್ತು. ಜನಾರ್ದನ್‌ ರೆಡ್ಡಿಯವರನ್ನ ಬಂಧಿಸುವಲ್ಲಿ ತೋರಿದ ಆಸಕ್ತಿ ಫರೀದ್ ಬಂಧಿಸಲು ಯಾಕೆ ತೋರಿಸಲಿಲ್ಲ’ ಅಂತಾ ಪ್ರಶ್ನಿಸಿದರು.‘₹900 ಕೋಟಿ ನುಂಗಿದ ಫರೀದ್​ನ ಆಸ್ತಿ ಯಾಕೆ ಜಪ್ತಿ ಮಾಡ್ತಿಲ್ಲ. ಫರೀದ್ ಜಾಮೀನು ಅರ್ಜಿ ವಜಾಕ್ಕೆ ಪ್ರಯತ್ನವನ್ನೇ ನಡೆಸದಿರುವುದು ಯಾಕೆ? ನಮ್ಮ ದುಡ್ಡು ಖಾಲಿ ಮಾಡಿ ಮಜಾ ಮಾಡಲಾಗ್ತಿದೆ. ತನಿಖೆ ಮಾಡಲಾಗದಿದ್ದರೆ ದಯವಿಟ್ಟು ಈ ಪ್ರಕರಣವನ್ನ ಸಿಬಿಐ ತನಿಖೆ ಒಪ್ಪಿಸಿ’ ಅಂತಾ ಮಾಧ್ಯಮಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ರು.ಇದು ದುರುದ್ದೇಶಪೂರಿತ ಆರೋಪ: ಅಲೋಕ್​ ಕುಮಾರ್​ ಸ್ಪಷ್ಟನೆತಮ್ಮ ವಿರುದ್ಧದ ಆರೋಪಗಳ ಕುರಿತು ಸಿಸಿಬಿ ಹೆಚ್ಚುವರಿ ಆಯುಕ್ತ ಅಲೋಕ್ ಕುಮಾರ್ ಫಸ್ಟ್​ ನ್ಯೂಸ್​ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಅಪ್ಪಟ್ಟ ಸುಳ್ಳು ಆರೋಪ. ಇದರ ಬಗ್ಗೆ ನಾನು ಸೂಕ್ತ ಕ್ರಮ ಕೈಗೊಳ್ತೀನಿ. ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗ್ತಿದೆ, ತನಿಖೆಯಲ್ಲಿ ಯಾವುದೇ ಲೋಪವಾಗ್ತಿಲ್ಲ. ಯಾವುದೋ ದುರುದ್ದೇಶದಿಂದ ಈ ರೀತಿ ಮಾಡಲಾಗ್ತಿದೆ. ಕಲಂದರ್ ಯಾರೆಂದು ನನಗೆ ಗೊತ್ತಿಲ್ಲ, ನನಗೂ ಆತನಿಗೂ ಸಂಬಂಧವೇ ಇಲ್ಲ. ಈಗಾಗಲೇ ಈ ಹಗರಣದಲ್ಲಿ ಫರೀದ್ ₹ 220 ಕೋಟಿ ಮೋಸದ ಲೆಕ್ಕ ತೋರಿಸಿದ್ದಾನೆ. ಆತನ ಜೊತೆ ಜನಾರ್ದನ್‌ ರೆಡ್ಡಿ, ಅಲಿಖಾನ್ ಸಹ ಅಫಿಡೆವಿಟ್ ಸಲ್ಲಿಸಿದ್ದಾರೆ. ಫರೀದ್ ನನ್ನ ಮೊದಲು ಬಂಧಿಸಿದ್ದೆ ನಾವು. ಬಳಿಕ ಆತನಿಗೆ ಸ್ಟೇಷನ್ ಬೇಲ್ ಆಯ್ತು. ನ್ಯಾಯಾಲಯದಲ್ಲಿ ಆತನಿಗೆ ಬೇಲ್ ಸಿಕ್ಕಿದೆ., ಆತ ಷರತ್ತುಗಳನ್ನ ಉಲ್ಲಂಘಿಸುತ್ತಿಲ್ಲ. ವಿಚಾರಣೆ ಅಗತ್ಯವಿದ್ದಾಗಲೆಲ್ಲಾ ಹಾಜರಾಗ್ತಿದ್ದಾನೆ. ಹೀಗಿರುವಾಗ ಆತನ ವಿರುದ್ಧ ಇನ್ನೇನೂ ಕ್ರಮ ಕೈಗೊಳ್ಳಲು ಸಾಧ್ಯ. ಸಿಸಿಬಿ ತನಿಖೆ ಸರಿಯಾಗಿಯೇ ನಡೆಯುತ್ತಿದೆ. ಇದೊಂದು ದುರುದ್ದೇಶಪೂರಿತ ಆರೋಪವಷ್ಟೆ’ ಅಂತಾ ತಮ್ಮ ವಿರುದ್ಧದ ಆರೋಪವನ್ನ ತಳ್ಳಿ ಹಾಕಿದ್ರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!