Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಈ ಪಿಂಕ್ ಡೈಮಂಡ್ ಬೆಲೆ ಜಸ್ಟ್ 360 ಕೋಟಿ 86 ಲಕ್ಷ ಓನ್ಲಿ..!

ಈ ಪಿಂಕ್ ಡೈಮಂಡ್ ಬೆಲೆ ಜಸ್ಟ್ 360 ಕೋಟಿ 86 ಲಕ್ಷ ಓನ್ಲಿ..!

ಜಿನೀವಾ: ಚಿನ್ನ ಖರೀದಿಸೋಕೆ ಹಿಂದೆ ಮುಂದೆ ನೋಡ್ಬೇಕಾದ ಬೆಲೆ ಮಾರುಕಟ್ಟೆಯಲ್ಲಿದೆ. ಹೀಗಿರುವಾಗ ಡೈಮಂಡ್​ ಖರೀದಿಸೋದು ಅಂದ್ರೆ ಮಧ್ಯಮ ತರಗತಿ ಜನಕ್ಕೆ ಕನಸೇ ಅನ್ನುವಂತಾಗಿದೆ. ಈ ಡೈಮಂಡ್ ಇಷ್ಟೊಂದು ದುಬಾರಿ ಆದ್ರೂ ಅದಕ್ಕಿರುವ ಡಿಮ್ಯಾಂಡ್ ಮಾತ್ರ ಕಡಿಮೆಯಾಗಿಲ್ಲ. ಇದಕ್ಕೆ ತಾಜಾ ಉದಾಹರಣೆ, ಜಿನೀವಾದಲ್ಲಿ ದಾಖಲೆಯ ಮೊತ್ತಕ್ಕೆ ಹರಾಜಾಗಿರುವ ಈ ವಜ್ರ.ಜಿನೀವಾದಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 19 ಕ್ಯಾರೆಟ್​ನ ಬಲು ಅಪರೂಪದ ಪಿಂಕ್​ ಡೈಮಂಡ್ ವಿಶ್ವದಾಖಲೆಯ 50 ಮಿಲಿಯನ್​ ಡಾಲರ್​ಗೆ ಬಿಕರಿಯಾಗಿದೆ. ಇಂಡಿಯನ್​ ಕರೆನ್ಸಿ ಪ್ರಕಾರ 50 ಮಿಲಿಯನ್​ ಡಾಲರ್ ಅಂದ್ರೆ ಬರೋಬ್ಬರಿ 360 ಕೋಟಿ 86 ಲಕ್ಷ ರೂಪಾಯಿ.ಅಮೆರಿಕಾದ ಲಕ್ಸುರಿ ಬ್ರ್ಯಾಂಡ್​ ಆಗಿರುವ ಹ್ಯಾರಿ ವಿನ್ಸ್​ಟನ್​ ಈ ಪಿಂಕ್​ ಡೈಮಂಡ್​ನ್ನು ವಿಶ್ವದಾಖಲೆಯ 50 ಮಿಲಿಯನ್​ ಡಾಲರ್​ಗೆ ಖರೀದಿಸಿದೆ. ಬಲು ಅಪರೂಪದ ಈ ಡೈಮಂಡ್​ ಬಿಕರಿಯಾದ ಮರುಕ್ಷಣವೇ ಇದನ್ನ ವಿನ್ಸ್​ಟನ್​ ಪಿಂಕ್​ ಲೆಗೆಸಿ ಅಂತ ಮರುನಾಮಕರಣ ಮಾಡಲಾಗಿದೆ. ಈ ಮೊದಲು ಈ ಡೈಮಂಡ್​ ದಶಕಗಳ ಕಾಲ ಓಪನ್ಹೀಮರ್ ವಂಶದ ಒಡೆತನದಲ್ಲಿತ್ತು.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!