Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಉತ್ತರಪ್ರದೇಶ ಪೊಲೀಸ್​ ಹತ್ಯೆ ಕೇಸ್​: ಐವರ ಬಂಧನ

ಉತ್ತರಪ್ರದೇಶ ಪೊಲೀಸ್​ ಹತ್ಯೆ ಕೇಸ್​: ಐವರ ಬಂಧನ

ಲಖನೌ: ಉತ್ತರಪ್ರದೇಶದ ಬುಲಂದ್​ಶಹರ್​​ನಲ್ಲಿ ನಿನ್ನೆ ಪೊಲೀಸ್​ ಅಧಿಕಾರಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಯೋಗೇಶ್​​ ರಾಜ್​​​​​ ಬಜರಂಗದಳ ಕಾರ್ಯಕರ್ತನಾಗಿದ್ದು, ಗೋಹತ್ಯೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದು ಈತನೇ ಎಂದು ವರದಿಯಾಗಿದೆ. ಅರಣ್ಯದಲ್ಲಿ 25 ಗೋವುಗಳ ಮೃತದೇಹಗಳು ಪತ್ತೆಯಾದ ಹಿನ್ನೆಲೆಯಲ್ಲಿ ಯೋಗೇಶ್​​ ರಾಜ್​​ ಗೋಹತ್ಯೆ ಬಗ್ಗೆ ದೂರು ದಾಖಲಿಸಿದ್ದ.ನಿನ್ನೆ ಬುಲಂದ್​​ಶಹರ್​​​ನಲ್ಲಿ ಅಕ್ರಮ ಕಸಾಯಿಖಾನೆ ವಿರುದ್ಧ ಸ್ಥಳೀಯರು ಪ್ರತಿಭಟನೆಗಿಳಿದಿದ್ದರು. ಈ ವೇಳೆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ, ಉದ್ರಿಕ್ತರು ಪೊಲೀಸ್ ಇನ್ಸ್​ಪೆಕ್ಟರ್ ಸುಬೋಧ್ ಕುಮಾರ್ ಅವರನ್ನ ಹತ್ಯೆ ಮಾಡಿದ್ದಾರೆ. ಉದ್ರಿಕ್ತ ಪ್ರತಿಭಟನಾಕಾರರ ಗುಂಪು, ಪ್ರತಿಭಟನೆ ನಿಯಂತ್ರಿಸಲು ಮುಂದಾದ ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿತ್ತು. ಅಲ್ಲದೇ ಪೊಲೀಸ್​ ವಾಹನ ಹಾಗೂ ಪೊಲೀಸ್ ಠಾಣೆಗೂ ಬೆಂಕಿ ಹಚ್ಚಿದ್ದರು. ಈ ಗಲಭೆಯಲ್ಲಿ ಜನರನ್ನ ನಿಯಂತ್ರಿಸಲು ಯತ್ನಿಸಿದ ​ಇನ್ಸ್​ಪೆಕ್ಟರ್ ಸುಬೋಧ್ ಕುಮಾರ್ ಮೇಲೂ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರು. ಬಳಿಕ ಸುಬೋಧ್​ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, 27 ಜನರನ್ನ ಹೆಸರಿಸಿದ್ದಾರೆ. ಜೊತೆಗೆ 60 ಅಪರಿಚಿತ ಆರೋಪಿಗಳ ವಿರುದ್ಧ ಕೇಸ್​ ದಾಖಲಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!