Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಉಪಚುನಾವಣೆಗೆ ಜೆಡಿಎಸ್ ಪದಾಧಿಕಾರಿಗಳು ನೇಮಕ.

ಉಪಚುನಾವಣೆಗೆ ಜೆಡಿಎಸ್ ಪದಾಧಿಕಾರಿಗಳು ನೇಮಕ.

ಮಂಡ್ಯ: ಜಿಲ್ಲೆಯ ಕೃಷ್ಣರಾಜಪೇಟೆ ಉಪ ಸಮರದ ಚುನಾವಣೆಗೆ ಜೆಡಿಎಸ್ ಪಕ್ಷದ ವತಿಯಿಂದ ಪದಾಧಿಕಾರಿಗಳ ನೇಮಕ ಮಾಎಲಾಯಿತು. ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ತಾಲೂಕು ಪಂಚಾಯಿತಿ ಸದಸ್ಯ ಜಾನಕೀರಾಂ ಅವರನ್ನು ಜೆಡಿಎಸ್ ವರಿಷ್ಠರು ಕೆ.ಆರ್.ಪೇಟೆ ಜೆಡಿಎಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.ತಾಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘಟನಾ ಚತುರ ಅಘಲಯ ಜಾನಕೀರಾಂ ನೇಮಕಗೊಂಡಿದ್ದರೆ, ಕಾರ್ಯಾಧ್ಯಕ್ಷರಾಗಿ ಬಲ್ಲೇನಹಳ್ಳಿ ರಾಮಚಂದ್ರನ್, ಉಪಾಧ್ಯಕ್ಷರಾಗಿ ಸಂಗಾಪುರದ ಪುಟ್ಟಸ್ವಾಮಿಗೌಡ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿಪುರಸಭೆಯ ಮಾಜಿಅಧ್ಯಕ್ಷ ಕೆ.ಟಿ.ಗಂಗಾಧರ ಅವರನ್ನು ನೇಮಕಮಾಡಿ ಉಪ ಚುನಾವಣಾ ಸಮರದಲ್ಲಿ ಪಕ್ಷಕ್ಕೆ ಕೈಕೊಟ್ಟು ಹೋಗಿರುವ ಅನರ್ಹ ಶಾಸಕ ನಾರಾಯಣಗೌಡ ಅವರನ್ನು ಸೋಲಿಸಿ ತಕ್ಕಪಾಠ ಕಲಿಸಲು ತಂತ್ರಗಾರಿಕೆ ನಡೆಸಿದ್ದಾರೆ.ನೂತನ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ ಹಾಗೂ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಜೆಡಿಎಸ್ ಮುಖಂಡ ಜಿ.ಪಂ ಸದಸ್ಯ ಬಿ.ಎಲ್.ದೇವರಾಜು ಕೆ.ಆರ್.ಪೇಟೆಯ ಜೆಡಿಎಸ್ ಪಕ್ಷವು ಬಲಿಷ್ಠವಾಗಿದೆ.ನಾರಾಯಣಗೌಡ ಅವರಂತಹವರು ನೂರು ಜನರು ಪಕ್ಷಬಿಟ್ಟು ಹೋದರೂ ನಿಷ್ಠಾವಂತ ಕಾರ್ಯಕರ್ತರ ಪಡೆಯೇ ತಾಲೂಕಿನಲ್ಲಿದೆ. ಆದ್ದರಿಂದ ಸಮರೋಪಾಧಿಯಲ್ಲಿ ಪಕ್ಷದ ಸಂಘಟನೆ ಮಾಡಿ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಗೆಲ್ಲಿಸಿ ವಿಜಯಮಾಲೆಯನ್ನು ತೊಡಿಸುವ ಮೂಲಕ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲಾಗುವುದು ಎಂದು ದೇವರಾಜು ಹೇಳಿದರು.ಈ ಸಂದರ್ಭದಲ್ಲಿ ಶೀಳನೆರೆ ಹೋಬಳಿ ಅಧ್ಯಕ್ಷ ಕೃಷ್ಣೇಗೌಡ, ಸಂತೇಬಾಚಹಳ್ಳಿ ಹೋಬಳಿ ಅಧ್ಯಕ್ಷ ಗೊರವಿಮಂಜಣ್ಣ, ಬೂಕನಕೆರೆ ಹೋಬಳಿ ಅಧ್ಯಕ್ಷ ನಂದೀಶ್, ಅಕ್ಕಿಹೆಬ್ಬಾಳು ಹೋಬಳಿ ಅಧ್ಯಕ್ಷ ಕೋಟಿ ಸುಬ್ಬೇಗೌಡ, ಕಸಬಾ ಹೋಬಳಿಯ ಅಧ್ಯಕ್ಷ ಮಾಕವಳ್ಳಿ ವಸಂತಕುಮಾರ್, ಮುಖಂಡರಾದ ವಿಠಲಾಪುರ ಸುಬ್ಬೇಗೌಡ, ಬೆಳತೂರು ಪುಟ್ಟೇಗೌಡ, ಜಿ.ಪಂ ಮಾಜಿಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ, ಸದಸ್ಯ ರಾಮದಾಸು, ತಾ.ಪಂ ಸದಸ್ಯರಾದ ಮೋಹನ್, ವಿಜಯಕುಮಾರ್, ಎಪಿಎಂಸಿ ಮಾಜಿಅಧ್ಯಕ್ಷ ನಾಗರಾಜೇಗೌಡ, ಉಪಾಧ್ಯಕ್ಷ ಅಶೋಕ್ ಸೇರಿದಂತೆ ನೂರಾರು ಜನರು ಉಪಸ್ಥಿತರಿದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!