Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಉಪಚುನಾವಣೆ ಮುಂದೂಡಿಕೆ : ಬಿಜೆಪಿ ಕಾರ್ಯಕಾರಿ ಸಭೆ ರದ್ದು

ಉಪಚುನಾವಣೆ ಮುಂದೂಡಿಕೆ : ಬಿಜೆಪಿ ಕಾರ್ಯಕಾರಿ ಸಭೆ ರದ್ದು

Spread the love

ಹುಬ್ಬಳ್ಳಿ:- ವಿಧಾನಸಭೆ ಉಪ ಚುನಾವಣೆ ಮುಂದೂಡಿರುವ ಹಿನ್ನಲೆಯಲ್ಲಿ ಸೆ. 29 ರಂದು ನಗರದಲ್ಲಿ ನಡೆಯಬೇಕಿದ್ದ ರಾಜ್ಯ ಬಿಜೆಪಿ ಕಾರ್ಯಕಾರಿ ಸಭೆ ರದ್ದಾಗಿದೆ.‌ರಾಜ್ಯದ 15 ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಚುನಾವಣೆಗೆ ಸಕಲ ಸಿದ್ದತೆ ಮಾಡತೊಡಗಿತ್ತು. ಈ ಹಿನ್ನೆಲೆಯಲ್ಲಿ ಇಲ್ಲಿನ ಹೊಟೆಲ್ ಡೆನ್ನಿಸನ್ ನಲ್ಲಿ ಬಿಜೆಪಿ ಕಾರ್ಯಕಾರಿ ಸಭೆ ಆಯೋಜಿಸಲಾಗಿತ್ತು. ಇದಕ್ಕಾಗಿ ಹೋಟೆಲ್ ನ ಸಭಾಂಗಣ ಹಾಗೂ ಗಣ್ಯರಿಗಾಗಿ ರೂಮ್ ಗಳನ್ನು ಕಾಯ್ದಿರಿಸಲಾಗಿತ್ತು. ಆದರೆ, ವಿಧಾನಸಭೆ ಉಪ ಚುನಾವಣೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ ಸಭೆಯನ್ನು ರದ್ದುಗೊಳಿಸಲಾಯಿತು.
ಇನ್ನೂ ಸಭೆಯೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳೀನಕುಮಾರ ಕಟೀಲ್ ನೇತೃತ್ವದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಅನರ್ಹಗೊಂಡ 15 ಜನ ಶಾಸಕರು ಪಾಲ್ಗೊಳ್ಳುವವರಿದ್ದರು. ಡಿಸಿಎಂ ಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಡಾ.ಅಶ್ವಥ್ ನಾರಾಯಣ , ಸಚಿವರಾದ ಜಗದೀಶ್ ಶೆಟ್ಟರ್, ಶ್ರೀರಾಮುಲು, ಸಿ.ಟಿ.ರವಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಸುರೇಶ ಅಂಗಡಿ ಇತರರು ಭಾಗವಹಿಸುವವರಿದ್ದರು. ಆದರೆ ಉಪಚುನಾವಣೆ ಮುಂದೂಡಿಕೆ ಯಾದರಿಂದ ಕಾರ್ಯಕಾರಿ ಸಭೆಯನ್ನು ರದ್ದುಪಡಿಸಲಾಯಿತು.

Check Also

ಹುಬ್ಬಳ್ಳಿಯಲ್ಲಿ ಮೀತಿಮಿರಿದ ಕಳ್ಳರ ಹಾವಳಿ: ಗಾಜು ಒಡೆದು ಉಪಕರಣ ದೋಚುವ ಕಳ್ಳರು

Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಸರಗಳ್ಳತನ, ಬೈಕ್ ಕಳ್ಳತನ, ಕಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!