Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಎಕರೆ ರೂಪದಲ್ಲಿ ನೆರೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತ ಸಂಘಗಳಿಂದ ಪ್ರತಿಭಟನೆ

ಎಕರೆ ರೂಪದಲ್ಲಿ ನೆರೆ ಪರಿಹಾರ ಒದಗಿಸುವಂತೆ ಆಗ್ರಹಿಸಿ ರೈತ ಸಂಘಗಳಿಂದ ಪ್ರತಿಭಟನೆ

ಬೆಳಗಾವಿ:- ನೆರೆ ಬಂದು ರೈತರ ಸಂಪೂರ್ಣ ಬೆಳೆಹಾನಿಯಾಗಿದ್ದು, ಹೆಕ್ಟೇರ್ ಬದಲು ಏಕರೆ ರೂಪದಲ್ಲಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನಗರದಲ್ಲಿಂದು ಪ್ರತಿಭಟನೆ ಮಾಡಿತ್ತು. ನಗರದ ಚನ್ನಮ್ಮ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ಪ್ರತಿಭಟನಾಕಾರರು, ಬೆಳೆ ಪರಿಹಾರವನ್ನು ಹೆಕ್ಟೇರ್ ಹೊರತುಪಡಿಸಿ ಎಕರೆ ರೂಪದಲ್ಲಿ ನೀಡಬೇಕು. ಅಲ್ಲದೇ ಈ ಹಿಂದೆ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ರೈತರ ಮೇಲೆ ದಾಖಲಿಸಿದ ಮೊಕ್ಕದ್ದಮೆಗಳನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಚುನಪ್ಪಾ ಪೂಜಾರಿ ಮಾತನಾಡಿ, ಬೆಳೆ ಪರಿಹಾರ ನೀಡುವಂತೆ ರೈತರು ಮುಖ್ಯಮಂತ್ರಿಗಳನ್ನು ಆಗ್ರಹಿಸಲು ಮುಂದಾದಾಗ ಪೊಲೀಸರು ಬಂದಿಸಿದರು. ಕಾರ್ಯಕ್ರಮದಲ್ಲಿ ಮಾತನಾಡುವಾಗ ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಅವರು ನನಗೂ 80 ಲಕ್ಷ ಪರಿಹಾರ ಕೊಡಬೇಕು ಅಂದಿದ್ದಾರೆ ಅದಕ್ಕೆ ರೈತರು 180 ರೂಪಾಯಿ ಕೂಡಿಸಿ ಕೊಡಲು ಮುಂದಾಗಿದ್ದೆವೆ ಅವರು ಹಾನಿಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಬಾರದು ಎಂದು ವ್ಯಂಗ್ಯವಾಡಿದರು. ಈ ಸಂದರ್ಭದಲ್ಲಿ ಜಾವಿದ ಮುಲ್ಲಾ, ಜಯಶ್ರೀ ಗುರನ್ಮವರ, ಪ್ರಕಾಶ ನಾಯ್ಕ ಸೇರಿದಂತೆ ಮೊದಲಾದವರು ಭಾಗಿಯಾಗಿದ್ದರು.

Share

About Site Default

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!