Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; 1000 ಯುವಕರನ್ನು ಉದ್ಯಮಿಗಳಾಗಿಸಲಿದೆ ಈ ಕಂಪನಿ!

ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಸಿಹಿ ಸುದ್ದಿ; 1000 ಯುವಕರನ್ನು ಉದ್ಯಮಿಗಳಾಗಿಸಲಿದೆ ಈ ಕಂಪನಿ!

ನವದೆಹಲಿ: ಕ್ಯಾಬ್ ಸೇವೆಯಲ್ಲಿ ಆಗ್ರಾ ಸ್ಥಾನದಲ್ಲಿರುವ ವಿದೇಶಿ ಕಂಪನಿ ಊಬರ್(Uber) ಜೊತೆ ಒಪ್ಪಂದ ಮಾಡಿಕೊಂಡಿರುವ ತಮಿಳುನಾಡು ಸರ್ಕಾರ, ಎಸ್ಸಿ/ಎಸ್ಟಿ ನಿರುದ್ಯೋಗಿಗಳಿಗೆ ಉತ್ತಮ ಯೋಜನೆಯೊಂದನ್ನು ಹಮ್ಮಿಕೊಂಡಿದೆ. 
ಈ ಯೋಜನೆ’ಯಡಿ ಊಬರ್ 1000 ಎಸ್ಸಿ/ಎಸ್ಟಿ ಚಾಲಕರಿಗೆ ತರಬೇತಿ ನೀಡಲಿದ್ದು, ಇದಕ್ಕಾಗಿ ತಮಿಳುನಾಡು ಸರ್ಕಾರ 5 ಲಕ್ಷ ರೂ.ಗಳವರೆಗೆ ಧನ ಸಹಾಯ ಒದಗಿಸಲಿದೆ. ಅಲ್ಲದೆ, ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ಡಾ.ಅಂಬೇಡ್ಕರ್ ಅಭಿವೃದ್ಧಿ ಸಂಸ್ಥೆ ಸಹಯೋಗದೊಂದಿಗೆ ಎಸ್ಸಿ/ಎಸ್ಟಿ ಸಮುದಾಯದವರಿಗೆ ಸಣ್ಣ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹ ನೀಡಲಾಗುವುದು. 
ಈ ಯೋಜನೆಯಡಿ ನೋಂದಣಿ ಮಾಡಿಕೊಂಡವರಿಗೆ ಊಬರ್ ತನ್ನ ಆಪ್’ನಲ್ಲಿ ಡ್ರೈವರ್ ಆಗಿ ರಿಜಿಸ್ಟರ್ ಮಾಡಲಿದೆ. ಜತೆಗೆ ಅವರಿಗೆ ತರಬೇತಿ ನೀಡಿ ಉದ್ಯೋಗ ನೀಡುವುದರೊಂದಿಗೆ, ಆದಾಯ ದೊರೆಯುವಂತೆ ಮಾಡಲಿದೆ. ಅಷ್ಟೇ ಅಲ್ಲದೆ, ಎಸ್ಸಿ/ಎಸ್ಟಿ ನಿರುದ್ಯೋಗಿಗಳನ್ನು ಗುರುತಿಸುವಲ್ಲಿಯೂ ಊಬರ್, ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!