Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಏಷ್ಯಾದ ಅತಿ ದೊಡ್ಡ ತಾಲೂಕು ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿದ ಮುಖ್ಯ ನ್ಯಾ.ದೀಪಕ್ ಮಿಶ್ರಾ

ಏಷ್ಯಾದ ಅತಿ ದೊಡ್ಡ ತಾಲೂಕು ನ್ಯಾಯಾಲಯ ಸಂಕೀರ್ಣ ಉದ್ಘಾಟಿಸಿದ ಮುಖ್ಯ ನ್ಯಾ.ದೀಪಕ್ ಮಿಶ್ರಾ

ಇಡೀ ನ್ಯಾಯಾಂಗ ವ್ಯವಸ್ಥೆಯಲ್ಲಿಯೇ ಅಪರೂಪದಲ್ಲಿ ಅಪರೂಪದ ಪ್ರಸಂಗಕ್ಕೆ ಇವತ್ತು ಹುಬ್ಬಳ್ಳಿ ಸಾಕ್ಷಿಯಾಗ್ಬಿಡ್ತು. ಆರೂಢರ ಹೂಬಳ್ಳಿ ಹುಬ್ಬಳ್ಳಿಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳೇ ಬಂದ್ಬಿಟ್ಟಿದ್ರು. ಬಂದಿದ್ದು ನ್ಯಾಯಾಲಗಳ ಸಂಕೀರ್ಣ ಉದ್ಘಾಟನೆಗೇ ಆದ್ರೂ ಹೃದಯವಂತಿಕೆಯುಳ್ಳ ನಡೆಯಿಂದ ಎಲ್ರನ್ನೂ ಸೆಳೆದ್ರು. ಇತಿಹಾಸದ ಪುಟಗಳಲ್ಲಿ ವಾಣಿಜ್ಯನಗರಿ ಅಚ್ಚಳಿಯದೇ ಉಳಿದುಬಿಡೋವಂತೆ ಮಾಡಿದ್ರು.
ಎದುರು-ಬದುರು ಗಂಡ-ಹೆಂಡ್ತಿ ಇವರಿಬ್ಬರ ವಿಚಾರಣೆ ನಡೆಸ್ತಿದ್ದವರು ಸಾಮಾನ್ಯರಾಗಿರಲಿಲ್ಲ. ಗಂಡ-ಹೆಂಡ್ತಿಯ ಇಬ್ಬರ ವಾದ ಆಲಿಸಿ ತೀರ್ಪು ಇತ್ತರು. ಹಾಗೇ ಐತಿಹಾಸಿಕ ತೀರ್ಪು ನೀಡಿದವರು ಸುಪ್ರೀಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ.. ಈ ಪ್ರಸಂಗಕ್ಕೆ ಸಾಕ್ಷಿ ಹುಬ್ಬಳ್ಳಿಯ ಹೊಸ ನ್ಯಾಯಾಲಯಗಳ ಸಂಕೀರ್ಣವಾಯಿತು. ಒಡೆದು ಹೋಗಿದ್ದ ಮನಸುಗಳನ್ನ ಸೇರಿಸಿ ಮಕ್ಕಳಿಗೆ ಸಿಹಿ ತಿನ್ನಿಸಿದ್ದು ಕೂಡ ಮಗು ಮನಸಿನ ಸಿಜೆಐ ದೀಪಕ್ ಮಿಶ್ರಾ. ಇದನ್ನ ನೋಡ್ತಿದ್ದವರ ಕಣ್ಣಾಲಿಗೆಗಳು ತುಂಬಿ ಬಂದಿದ್ವು. ಜಗದೀಶ ಶೆಲಗಿ-ಪಾರ್ವತಿ ಶೆಲಗಿ ಮಧ್ಯೆದ ಕಲಹದಿಂದ ಡಿವೋರ್ಸ್ ಗಾಗಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ರು. ಇದರ ತೀರ್ಪು ನೀಡಿದ್ದು ಮಾತ್ರ ಸಿಜೆಐ. ಇಬ್ಬರನ್ನೂ ಮತ್ತೆ ಒಂದಾಗಿಸಿ ತಾವೇ ಸಂಭ್ರಮಿಸಿದ್ದಲ್ಲದೇ ದಂಪತಿಯ ಮಕ್ಕಳಾದ ರೋಹಿತ್, ನಂದನಿ, ರಕ್ಷಿತಾ ಹಾಗೂ ಸಿದ್ಧಾರ್ಥ ಎಂಬ ನಾಲ್ವರಿಗೂ ಸಿಹಿ ತಿನ್ನಿಸಿದ್ರು. ತಾಲೂಕಾ ಕೋರ್ಟ್ ನಲ್ಲಿ ಸಿಜೆಐ ಬಂದು ತೀರ್ಪು ನೀಡಿರೋದು ಇದೇ ಮೊದಲು. ವಿಶೇಷ ಅಂದ್ರೇ ಸಿಜೆಐ ಪತ್ನಿ ಕೂಡ ಇದನ್ನ ಕಣ್ಣಾರೆ ಕಂಡ್ರು. ಅಷ್ಟೇ ಅಲ್ಲ, ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯೊಬ್ಬರು ತಾಲೂಕು ಕೋರ್ಟ್ ಸಂಕೀರ್ಣ ಉದ್ಘಾಟನೆಗೆ ಬಂದಿದ್ರು. ಅಷ್ಟರಮಟ್ಟಿಗೆ ಹುಬ್ಬಳ್ಳಿಯ ಈ ಅತ್ಯಾಧುನಿಕ ಕೋರ್ಟ್ ಕಾಂಪ್ಲೆಕ್ಸ್ ಇತಿಹಾಸದ ಪುಟ ಸೇರಿತು. ತಮ್ಮ ನೆನಪಿಗಾಗಿ ಕೋರ್ಟ್ ಆವರಣದಲ್ಲಿಯೇ ಗಿಡ ಕೂಡ ನೆಟ್ರು. ಇದೆಲ್ಲ ಮುಖ್ಯಮಂತ್ರಿ ಕುಮಾರಸ್ವಾಮಿ, ಸುಪ್ರೀಂಕೋರ್ಟ್ ನ ಇಬ್ಬರು ಜಡ್ಜ್ ಗಳು, ಸಚಿವ ಹೆಚ್ ಡಿ ರೇವಣ್ಣ, ಹೈಕೋರ್ಟ್ ನ 36 ನ್ಯಾಯಮೂರ್ತಿಗಳೂ ಇದ್ರು. ಬಳಿಕ ಏಷ್ಯಾದ ಅತ್ಯಾಧುನಿಕ ತಾಲೂಕು ನ್ಯಾಯಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನಾ ಭಾಷಣ ಮಾಡಿದ ಸಿಜೆಐ ದೀಪಕ್ ಮಿಶ್ರಾ, ಮಾತೃಭಾಷೆ, ತಾಯ್ನೆಲ ಸ್ವರ್ಗಕ್ಕಿಂತಲೂ ಮಿಗಿಲು ಅಂದ್ರು. ಈಗಿನ ನ್ಯಾಯಾಂಗ ವ್ಯವಸ್ಥೆ ಹೆಚ್ಚು ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನ ಹೊಂದಬೇಕಿದೆ. ತಂತ್ರಜ್ಞಾನ ಇಲ್ಲದ ನ್ಯಾಯಾಂಗ ವ್ಯವಸ್ಥೆಯನ್ನ ಕಲ್ಪಿಸಿಕೊಳ್ಳೋಕು ಸಾಧ್ಯವಿಲ್ಲ. ಇಂಥ ಗ್ರೇಟ್ ಕಟ್ಟಡದ ಉದ್ಘಾಟನೆಗೆ ಬಂದಿರೋದಕ್ಕೆ ತುಂಬಾ ಸಂತಸವಾಗಿದೆ. ಕೋರ್ಟ್ ಒಂದು ಮನೆಯಿದ್ದಂತೆ. ವಾದ-ಪ್ರತಿವಾದ ಮಾಡೋರೆಲ್ಲ ಕುಟುಂಬ ಸದಸ್ಯರೇ.. ಕೋರ್ಟ್ ಗೆ ಬರೋರು ಇದನ್ನ ದೇವಾಲಯವೆಂದೇ ಅಂದ್ಕೊಬೇಕಿದೆ. ನ್ಯಾಯಾಂಗ ವ್ಯವಸ್ಥೆಯ ಮೇಲಿನ ವಿಶ್ವಾಸ ಉಳಿಯಬೇಕಾದ್ರೇ, ನ್ಯಾಯದಾನ ಪ್ರಕ್ರಿಯೆ ತ್ವರಿತವಾಗಿ ಆಗ್ಬೇಕಿದೆ ಅಂದ್ರು.
ದೀಪಕ್ ಮಿಶ್ರಾ, ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳು ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನ ಜಡ್ಜ್ ಗಳಾದ ನ್ಯಾ. ಮೋಹನ ಶಾಂತನಗೌಡ,ನ್ಯಾ. ಅಬ್ದುಲ್ ನಜೀರ್ ಕನ್ನಡದಲ್ಲಿಯೇ ಮಾತಾಡಿದ್ರು. ಹುಬ್ಬಳ್ಳಿಯಲ್ಲಿ ತಾವು ಆರಂಭದ ದಿನಗಳಲ್ಲಿ ಪ್ರಾಕ್ಟೀಸ್ ಮಾಡಿದ ಕಾಲವನ್ನ ನೆನೆದ್ರು. ಅಷ್ಟೇ ಅಲ್ಲ, ಕಕ್ಷಿದಾರರಿಗೆ ಆರ್ಥಿಕ ಹೊರೆಯಾಗದಂತೆ ಪ್ರತಿ ನ್ಯಾಯವಾದಿ ಇರಬೇಕು ಅಂತ ಅಬ್ಬುಲ್ ನಜೀರ್ ಹೇಳಿದ್ರೇ, ಹುಬ್ಬಳ್ಳಿಯ ಐತಿಹಾಸಿಕ ಕೋರ್ಟ್ ನ ಸ್ವಚ್ಛತೆ ಹಾಗೂ ಘನತೆಯನ್ನ ಎತ್ತಿ ಹಿಡಿಯುವ ಕಾರ್ಯವನ್ನ ಮಾಡ್ಬೇಕು ಅಂತ ಮೋಹನ್ ಶಾಂತನಗೌಡರ ಸಲಹೆ ನೀಡಿದ್ರು.  ಮೋಹನ್ ಶಾಂತನಗೌಡರ, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಸುಪ್ರೀಂಕೋರ್ಟ್ ಇಬ್ಬರು ಜಡ್ಜ್ ಗಳೇ ಕನ್ನಡದಲ್ಲಿ ಮಾತನಾಡಿದ ಮೇಲೆ ಮಾತಿಗೆ ನಿಂತ ಸಿಎಂ ಕುಮಾರಸ್ವಾಮಿ, ಅಧಿಕಾರಿಗಳು ತಮಗೆ ಇಂಗ್ಲೀಷ್ ಭಾಷಣ ಬರೆದುಕೊಟ್ಟಿದ್ರೂ ಕನ್ನಡದಲ್ಲಿಯೇ ಮಾತು ಆರಂಭಿಸಿದ್ರು. ಅಷ್ಟೇ ಅಲ್ಲ, ಅಖಂಡ ಕರ್ನಾಟಕದ ಆಶಯದೊಂದಿಗೇ, ಉತ್ತರಕರ್ನಾಟಕ ತಾರತಮ್ಯ ನಿವಾರಣೆಯ ಮಾತಾಡಿದ್ರು. ನ್ಯಾಯಾಂಗ ವ್ಯವಸ್ಥೆ ಗಟ್ಟಿಗೊಳಿಸುವ, ರಾಜ್ಯದ ಎಲ್ಲ ಕೋರ್ಟ್ ಗಳಿಗೂ ಸ್ವಂತ ಕಟ್ಟಡ ಹಾಗೂ ಮೂಲಸೌಕರ್ಯ ಕಲ್ಪಿಸಲು ತಮ್ಮ ಸರ್ಕಾರ ಬದ್ಧ ಅಂದ್ರು. ಇತ್ತೀಚೆಗೆ ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಪ್ರಕರಣ ಹೆಚ್ಚುತ್ತಿವೆ. ಅದಕ್ಕಾಗಿ ಕಠಿಣ ಕಾನೂನು ತರಲು ಮುಂದಾಗಲು ಸುಪ್ರೀಂಕೋರ್ಟ ಜಡ್ಜ್ ಗಳ ನೆರವು ಕೋರಿದ್ರು.
ಹೆಚ್ ಡಿ ಕುಮಾರಸ್ವಾಮಿ, ಮುಖ್ಯಮಂತ್ರಿ
122 ಕೋಟಿ ರೂ. ವೆಚ್ಚದಲ್ಲಿ ಈ ಐತಿಹಾಸಿಕ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣವಾಗಿದೆ. ಈ ಕಾರ್ಯಕ್ರಮಕ್ಕೂ ಕೂಡ ರಾಜಕೀಯ ಸೋಂಕು ತಗುಲಿತ್ತು. ಶಿಷ್ಟಾಚಾರ ಪಾಲಿಸಿಲ್ಲ ಅನ್ನೋ ಕಾರಣಕ್ಕೆ ಕಾಂಗ್ರೆಸ್ ನ ಶಾಸಕರು, ಸಚಿವರು ಐತಿಹಾಸಿಕ ಕಾರ್ಯಕ್ರಮದಿಂದ ದೂರವೇ ಉಳಿದ್ರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ ದೇಶಪಾಂಡೆ, ಹಾಗೂ ಕಾನೂನು ಸಚಿವ ಕೃಷ್ಣ ಬೈರೇಗೌಡ ಗೈರು ಹಾಜರಿ ಎದ್ದು ಕಾಣ್ತಾಯಿತ್ತು. ಅದೇನೇ ಇದ್ರೂ ಏಷ್ಯಾದ ಅತಿ ದೊಡ್ಡ ಅತ್ಯಾಧುನಿತ ಕೋರ್ಟ್ ಕಾಂಪ್ಲೆಕ್ಸ್ ಅನ್ನೋ ಗರಿ ಹುಬ್ಬಳ್ಳಿಗೆ ಮೂಡಿದಂತಾಗಿದೆ. 

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!