Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಐಟಿ ದಾಳಿ ಬಿಜೆಪಿಯವರ ಮೇಲೂ ಆಗಿದೆ : ಜೋಶಿ.

ಐಟಿ ದಾಳಿ ಬಿಜೆಪಿಯವರ ಮೇಲೂ ಆಗಿದೆ : ಜೋಶಿ.

ಹುಬ್ಬಳ್ಳಿ: ಐಟಿ ದಾಳಿ ಕೇವಲ ಕಾಂಗ್ರೆಸ್ ಮುಖಂಡರ ಮೇಲಷ್ಟೇ ಆಗದೇ ಬಿಜೆಪಿಯವರ ಮೇಲೂ ಆಗಿದೆ ಆ ಬಗ್ಗೆ ಕಾಂಗ್ರೆಸ್ ನವರು ನೋಡಿಕೊಂಡು ಮಾತನಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದಲ್ಲಿಂದು ಬಿಜೆಪಿ ಕಚೇರಿಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಐಟಿ ದಾಳಿ ಮತ್ತು ರಾಜಕೀಯಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಜೀ ಪರಮೇಶ್ವರ ಅವರೇ ಸ್ಪಷ್ಟ ಪಡಿಸಿದ್ದಾರೆ. ಹಾಗಾಗಿ ಇದರ ಬಗ್ಗೆ ಪ್ರತಿಕ್ರಿಯೆ ನೀಡುವ ಅಗತ್ಯ ವಿಲ್ಲ. ಬಹಳ ದೊಡ್ಡ ಪ್ರಮಾಣದಲ್ಲಿ ಐಟಿ ಮಾಹಿತಿಗಳನ್ನು ಕಲೆ ಹಾಕಿದ್ದು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸೇರಿದಂತೆ ಅನ್ಯ ರಾಜ್ಯ ಗಳಲ್ಲಿನ ನೀಟ್ ಸೇಲ್ ಗಳು, ಕಾಲೇಜಿನ ಕೆಲವು ಆಡಳಿತ ಮಂಡಳಿಗಳು ಸೇರಿ ಮ್ಯಾನೇಜ್ಮೆಂಟ್ ಸೀಟ್ ಗಳಾಗಿ ಪರಿವರ್ತನೆ ಮಾಡಿ, ಕೋಟ್ಯಾಂತರ ರೂಪಾಯಿ ಹಣ ಗಳಿಸುವ ಕೆಲಸ ಮಾಡಲಾಗುತ್ತಿತ್ತು. ಇದು ಮಾಧ್ಯಮಗಳಲ್ಲೂ ಬಂದಿದೆ ಎಂದರು. ಐಟಿ ದಾಳಿ ಕೇವಲ ಕಾಂಗ್ರೆಸ್ ನವರ ಮೇಲೆ ಅಷ್ಟೇ ಆಗಿಲ್ಲ. ಬಿಜೆಪಿಯ 10 ಜನರ ಮೇಲೂ ಆಗಿದೆ. ಅವರ ಹೆಸರು ಕೂಡಾ ಹೇಳಬಲ್ಲೇ, ಆದರೆ ಈಗ ಅದನ್ನು ಹೇಳುವುದು ಸರಿಯಲ್ಲ. ಕಾಂಗ್ರೆಸ್ ಆರೋಪಿಸುವ ಹೇಳಿಕೆಯನ್ನು ನಂಬುವದಕ್ಕಿಂತ ಮೋದಿ ಸರ್ಕಾರ ಬಂದ ನಂತರ ಕರ್ನಾಟಕದಲ್ಲಿ ಎಷ್ಟು ಬಾರಿ ಐಟಿ ದಾಳಿ ಆಗಿದೆ ಎಂಬುದನ್ನು ತಿಳಿದು ಕಾಂಗ್ರೆಸ್ ನವರು ಮಾತನಾಡಲಿ ಎಂದರು. ಇನ್ನೂ ಜೀ ಪರಮೇಶ್ವರ ಪಿಎ ರಮೇಶ ಆತ್ಮಹತ್ಯೆ ವಿಚಾರ ದುರ್ದೈವದ ಸಂಗತಿಯಾಗಿದ್ದು, ಅವರಿಗೆ ಸಣ್ಣ ಸಣ್ಣ ಮಕ್ಕಳಿದ್ದಾರೆ ಆ ಬಗ್ಗೆ ಸಿಂಪತಿ ಇದೆ. ಅವರು ಆ ರೀತಿ ಕ್ರಮತೆಗೆದುಕೊಳ್ಳಬಾರದಿತ್ತು. ಅವರ ಮಕ್ಕಳಿಗೆ ಕುಟುಂಬಕ್ಕೆ ಸಾಂತ್ವನ ಹೇಳುವೆ. ಅಲ್ಲದೇ ರಮೇಶ ಮನೆ ಮೇಲೆ ಐಟಿ ದಾಳಿ ಆಗಿದೆ ಎಂಬುದೇ ಖಚಿತ ಆಗಿಲ್ಲ. ಪರಮೇಶ್ವರ ಅವರ ಜೊತೆಗೆ ಬಹಳ ಕಾಲ ಇದ್ದರು ಎಂಬ ಕಾರಣಕ್ಕೆ ಮತ್ತು ದಾಖಲೆಗಳಲ್ಲಿ ಅವರ ಹೆಸರು ಬಂದ ಹಿನ್ನೆಲೆ ಅವರ ಮನೆ ಪರಿಶೀಲನೆ ಮಾಡಲು ಐಟಿ ಮುಂದಾಗಿರಬಹುದು ಅದನ್ನು ಐಟಿ ದಾಳಿ ಎಂದು ಯಾಕೆ ತಿರ್ಮಾಣ ಮಾಡಬೇಕು. ದೇಶದಲ್ಲಿ ಬಲಿಷ್ಠ ಕಾನೂನು ವ್ಯವಸ್ಥೆ ಇದೆ. ರಮೇಶ ಮನೆ ಮೇಲೆ ಐಟಿ ದಾಳಿ ಮಾಡಲಾಗಿದೆ ಎಂಬುದನ್ನು ನಾನು ಒಪ್ಪುವುದಿಲ್ಲ ಎಂದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!