Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಒಟ್ಟು 300 ಕಾರು ಭಸ್ಮ, ಏರ್​ ಶೋ ಸ್ಥಳಕ್ಕೆ ಆಯುಕ್ತ ಸುನಿಲ್​ ಕುಮಾರ್ ಭೇಟಿ.

ಒಟ್ಟು 300 ಕಾರು ಭಸ್ಮ, ಏರ್​ ಶೋ ಸ್ಥಳಕ್ಕೆ ಆಯುಕ್ತ ಸುನಿಲ್​ ಕುಮಾರ್ ಭೇಟಿ.

ಬೆಂಗಳೂರು: ಯಲಹಂಕ ವಾಯುನೆಲೆ ಏರ್​ ಶೋ ಗೇಟ್​ ನಂ. 5ರಲ್ಲಿ ಅಗ್ನಿ ಅವಘಡ ಸಂಭವಿಸಿದ ಪರಿಣಾಮ150ಕ್ಕೂ ಹೆಚ್ಚು ಕಾರುಗಳು ಬೆಂಕಿಗಾಹುತಿಯಾಗಿವೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್​ ಆಯುಕ್ತ ಟಿ. ಸುನಿಲ್​ ಕುಮಾರ್ ಹಾಗೂ ಹೆಚ್ಚುವರಿ ಪೊಲೀಸ್​​ ಆಯುಕ್ತ ಸೀಮಂತ್​ ಕುಮಾರ್​ ಸಿಂಗ್​​​ ಸ್ಥಳಕ್ಕೆ ಭೇಟಿ ನೀಡಿದರು.ಒಟ್ಟು 50×6 ಕಾರು ಭಸ್ಮಏರ್​ಶೋ ಗೇಟ್​ ನಂ. 5 ಕ್ಕೆ ಭೇಟಿ ನೀಡಿದ ಪೊಲೀಸ್​ ಅಧಿಕಾರಿಗಳು ಕಾರು ಮಾಲೀಕರ ಜೊತೆ ಮಾತುಕತೆ ನಡೆಸಿದರು. ಕಾರಿನಲ್ಲಿ ಇಟ್ಟಿದ್ದ ದಾಖಲೆಗಳು, ಮನೆ ಕೀ, ವ್ಯಾಲೆಟ್​​ ಸೇರಿದಂತೆ ಬೆಲೆ ಬಾಳುವ ವಸ್ತುಗಳು ಬೆಂಕಿಯಲ್ಲಿ ಸುಟ್ಟು ಭಸ್ಮಗೊಂಡಿರುವ ಬಗ್ಗೆ ಕಾರು ಮಾಲೀಕರು ಅಳಲು ತೋಡಿಕೊಂಡರು. ಪಾರ್ಕಿಂಗ್​​ನಲ್ಲಿ ಒಂದು ಲೈನ್​​ನಲ್ಲಿ 50ರಂತೆ ಆರು ಲೈನ್​​ನಲ್ಲಿರುವ ಕಾರುಗಳು ಬಹುತೇಕ ಭಸ್ಮವಾಗಿವೆ ಎನ್ನಲಾಗಿದೆ.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!