Breaking News
Hiring Reporter’s For more Information Contact Above Number 876 225 4007 . Program producer
Home / ಕರ್ನಾಟಕ ರಾಷ್ಟ್ರ ಸಮಿತಿ ಮುಂದಿನ ಎಲ್ಲ ಚುನಾವಣೆಗೆ ಸ್ಪರ್ಧಿಸಲಿದೆ : ರೆಡ್ಡಿ

ಕರ್ನಾಟಕ ರಾಷ್ಟ್ರ ಸಮಿತಿ ಮುಂದಿನ ಎಲ್ಲ ಚುನಾವಣೆಗೆ ಸ್ಪರ್ಧಿಸಲಿದೆ : ರೆಡ್ಡಿ

ಹುಬ್ಬಳ್ಳಿ:- ಕರ್ನಾಟಕ ರಾಷ್ಟ್ರ ಸಮಿತಿಯು ರಾಜ್ಯದಲ್ಲಿ ಮುಂಬರುವ ಎಲ್ಲ ಚುನಾವಣೆಗಳಲ್ಲಿ ಸ್ಪರ್ಧಿಸಲಿದ್ದು, ಅದಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣ ರೆಡ್ಡಿ ಹೇಳಿದರು‌.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಚ್ಛ, ಪ್ರಮಾಣಿಕ, ಜನಪರ ರಾಜಕಾರಣಕ್ಕಾಗಿ ಸ್ಥಾಪನೆಗೊಂಡ ಪಕ್ಷ ಕರ್ನಾಟಕ ರಾಷ್ಟ್ರ ಸಮಿತಿ. ಪಕ್ಷ ಸ್ಥಾಪನೆಗೊಂಡು ಕೇಲವೇ ಕೇಲವು ತಿಂಗಳು ಆಗಿದ್ದರು. ಸಮಾಜಪರ ಹೋರಾಟ ಮಾಡುವ ಮೂಲಕ‌ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದು, ಪಕ್ಷವನ್ನು ರಾಜ್ಯದಲ್ಲಿ ವಿಸ್ತರಿಸುವ ಹಿನ್ನಲೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಈಗಾಗಲೇ ಘೋಷಿಸಿರುವ ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಲಿದ್ದು, ಪಕ್ಷವು ಈಗಾಗಲೇ ಸಂಭವನೀಯ ಅಭ್ಯರ್ಥಿಗಳನ್ನು ಗುರುತಿಸಿದ್ದು, ಮಹಾಲಕ್ಷ್ಮೀ ಲೇಔಟ್, ಕೆ.ಆರ್.ಪುರ, ಹಿರೇಕೆರೂರ, ವಿಜಯನಗರ ಮತ್ತು ಕಾಗವಾಡ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಉಳಿದ ಕ್ಷೇತ್ರಗಳ ಅಭ್ಯರ್ಥಿಗಳನ್ನು ಮುಂದಿನ ದಿನಗಳಲ್ಲಿ ಇನ್ನೊಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದರು.

ರಾಜ್ಯ ಚುನಾವಣೆ ಆಯೋಗವು ಘೋಷಿಸಿರುವ 14 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷದ ಅಭ್ಯರ್ಥಿಗಳನ್ನು ನಿಲ್ಲಿಸಲಾಗುತ್ತಿದ್ದು, ಅದರಂತೆ ಹು-ಧಾ ಮಹಾನಗರ ಪಾಲಿಕೆಯ ಎಲ್ಲ ವಾರ್ಡ್ ಗಳಿಂದಲೂ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಲಾಗುವುದು. ಈ ಹಿನ್ನಲೆಯಲ್ಲಿ ಹಳೇಹುಬ್ಬಳ್ಳಿಯ ಕೃಷ್ಣಪುರದಲ್ಲಿ ಪಕ್ಷದ ಕಚೇರಿಯನ್ನು ತೆರೆಯಲಾಗಿದೆ ಎಂದರು.

ಇನ್ನೂ ಧಾರವಾಡ ಜಿಲ್ಲೆಯ ಕುಂದಗೋಳ ಪಟ್ಟಣ ಪಂಚಾಯಿತಿಗೆ ಕರ್ನಾಟಕ ರಾಷ್ಟ್ರ ಸಮತಿಯಿಂದ ಒಟ್ಟು 19 ವಾರ್ಡ್ ಗಳಿಗೂ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲ್ಲಿಸಲಾಗುತ್ತಿದ್ದು, ಪಕ್ಷದ ಸಿದ್ದಾಂತಗಳನ್ನು ಒಪ್ಪಿದ ವ್ಯಕ್ತಿಗಳು ಪಕ್ಷದಿಂದ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು. ಆಸಕ್ತರು ಧಾರವಾಡ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಜಕ್ಕಣ್ಣವರ ಮೊ. 8971867175 ಗೆ ಸಂಪರ್ಜಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಧಾರವಾಡ ಜಿಲ್ಲಾ ಪ್ರದಾನಕಾರ್ಯದರ್ಶಿ ಚಂದ್ರಶೇಖರ ಮಠದ, ಹು-ಧಾ ಮಹಾನಗರದ ಅಧ್ಯಕ್ಷ ಈರಪ್ಪ ಎಮ್ಮಿ, ಪ್ರದಾನ ಕಾರ್ಯದರ್ಶಿ ದೀಪಕ ಸಿಮಾನ, ಹು-ಧಾ ಗೌರವ ಅಧ್ಯಕ್ಷ ಪ್ರಭುಲಿಂಗ ನಾಚೇಕರ, ಧಾರವಾಡ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಕ್ಕಪ್ಪನ್ನವರ, ಹು-ಧಾ ಗ್ರಾಮೀಣ ಕಾರ್ಯಾಧ್ಯಕ್ಷ ಸೈದಾಪೂರ, ಹು-ಧಾ ಘಟಕದ ಪ್ರದಾನ ಕಾರ್ಯದರ್ಶಿ ಸೋಮಶೇಖರ್ ಯಾದವ, ಹುಬ್ಬಳ್ಳಿ ತಾಲೂಕು ಅಧ್ಯಕ್ಷ ಗುರುನಾಥ ಶಿವರಾಜ ಸೇರಿದಂತೆ ಮುಂತಾದವರು ಇದ್ದರು.

For thousands of high school students, the ideal essay writing service on the internet which will assist you with any essay writing homework quickly, cheaply, and without a great deal of effort is a paper writing service. High school students can write their essay or assignment paper writer in only two days from when they publish an application to the newspaper writing aid site. There are no deadlines to meet, no long forms to complete, and you don’t have to proofread anything. The article writer can spend just as much time on getting your essay written as he/she does on its conclusion. Paper help website writers can get your essay composed in 1 day and generally even quicker, than you can yourself.

Share

Leave a Reply

Your email address will not be published. Required fields are marked *

error: Content is protected !!