Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ ವಸೂಲಿಯಲ್ಲಿ ಪಾಲಿಕೆ ಅವ್ಯವಹಾರ ನಡೆಸುತ್ತಿದೆ : ಬುರಬುರೆ

ಕರ ವಸೂಲಿಯಲ್ಲಿ ಪಾಲಿಕೆ ಅವ್ಯವಹಾರ ನಡೆಸುತ್ತಿದೆ : ಬುರಬುರೆ

Spread the love

ಹುಬ್ಬಳ್ಳಿ;ಪಾಲಿಕೆ ಮೇಲಾಧಿಕಾರಿಗಳು 20 ಲಕ್ಷ ರೂ ಆಸ್ತಿಕರ ಬಾಕಿ ಉಳಿಸಿಕೊಂಡ ಬಾಕಿದಾರರಿಂದ ಕೇವಲ ಸಾವಿರಾರು ರೂಪಾಯಿ ನಾಮಕವಸ್ತೆ ವಸೂಲಿ ಮಾಡಿ ಬೀಗ ಜಡಿದು ಸೀಜ್ ಮಾಡಿದ ಮಳಿಗೆಗಳನ್ನು ಮತ್ತೆ ಮುಕ್ತಗೊಳಿಸುವ ಮೂಲಕ ಪಾಲಿಕೆ ಅಧಿಕಾರಿಗಳು ಕರ ವಸೂಲಾತಿಯಲ್ಲಿ ತೀವ್ರ ತಾರತಮ್ಯ ಎಸಗುತ್ತಿದ್ದಾರೆಂದು ಸಾಮಾಜಿಕ ಹೋರಾಟಗಾರ ಪ್ರಕಾಶ ಬುರಬುರೆ ಆರೋಪಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿನ ದುರ್ಗದ್ ಬೈಲ್ ನಲ್ಲಿರುವ ಮುನಸಿಪಲ್ ವಾರ್ಡ್ ನಂ 45 ರಲ್ಲಿ ನ ಪಿಐಡಿ ನಂಬರ್ 517, 519, 520 ರಲ್ಲಿನ ಕಟ್ಟಡದ ಆಸ್ತಿಕರವನ್ನು ದಶಕಗಳಿಂದ ತುಂಬದೇ ಬಾಕಿ ಉಳಿಸಿಕೊಂಡಿದ್ದು, ಇದೀಗ ಕರದ ಬಾಕಿ ಹಣ 20 ಲಕ್ಷ ದಾಟಿದೆ.‌ ಅಲ್ಲದೇ ಇತ್ತಿಚೆಗೆ ಪಾಲಿಕೆ ಅಧಿಕಾರಿಗಳು ಅವಳಿನಗರದ ಅನಧಿಕೃತ ಅಂಗಡಿಗಳಿಗೆ ನೋಟಿಸ್ ನೀಡಿ ಅಂಗಡಿಗಳನ್ನು ಸೀಜ್ ಮಾಡಿ ಬೀಗ್ ಜಡಿದಿದ್ದರು. ಆದರೆ ಕೆಲ ಬಿಲ್ಡರ್, ಜನಪ್ರತಿನಿಧಿಗಳು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಒತ್ತಡ ಹಾಗೂ ಲಂಚದ ಆಸೆಗಾಗಿ ಪಾಲಿಕೆ ಅಧಿಕಾರಿಗಳು ಲಕ್ಷಾಂತರ ರೂ ವಸೂಲಿ ಮಾಡಬೇಕಾದ ಕರ ಬಾಕಿದಾರರಿಂದ ಕೇವಲ ನಾಮಕಾವಸ್ತೆಗೆ ಸಾವಿರಾರು ರೂಪಾಯಿ ಪಾವತಿ ಮಾಡಿಕೊಂಡು ಅಂಗಡಿ ನಡೆಸಲು ಅನುಮತಿ ನೀಡುವ ಹುನ್ನಾರದಲ್ಲಿದ್ದಾರೆಂದು ಆರೋಪಿಸಿದ್ದಾರೆ. ಇನ್ನೂ ಜನನಿಬೀಡ ಪ್ರದೇಶದ ದುರ್ಗದ್ ಬೈಲ್ ನ ಕಟ್ಟಡವೊಂದು ಶಿಥೀಲಾವಸ್ತೆಯಲ್ಲಿದ್ದು, ಯಾವಾಗ ಬೇಕಾದರೂ ನೆಲಕಚ್ಚಲಿದೆ. ಇದರಿಂದಾಗಿ ಹಲವಾರು ಆಸ್ತಿ, ಜೀವಹಾನಿ ಸಂಭವಿಸಬಹುದಾಗಿದೆ. ಆದರೆ ಈವರೆಗೆ ಪಾಲಿಕೆ ಅಧಿಕಾರಿಗಳು ಮಾತ್ರ ಶಿಥಿಲಾವಸ್ತೆಯಕಟ್ಟಡವ ತೆರವುಗೊಳಿಸಿಲ್ಲ. ಇನ್ನೂ ಕಟ್ಟಡದ ಮಾಲೀಕರು ಅನಧಿಕೃತವಾಗಿ ಫುಟ್ ಪಾತ್ ಮೇಲಿನ ವ್ಯಾಪಾರಸ್ಥರಿಗೆ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಒದಗಿಸುತ್ತಿದ್ದಾರೆ. ಇಷ್ಟೇಲ್ಲಾ ಅವ್ಯವಹಾರಗಳು ನಡೆಯುತ್ತಿದ್ದರೂ ಪಾಲಿಕೆ ಮತ್ತು ಹೆಸ್ಕಾಂ ಅಧಿಕಾರಿಗಳು ಜಾನ ಮೌನ ವಹಿಸುತ್ತಿದ್ದು. ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಮುಂದಾಗುವ ಅನಾಹುತಗಳನ್ನು ಅರಿತು ಶಿಥಿಲಗೊಂಡ ಕಟ್ಟಡಗಳನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕು. ಅಲ್ಲದೇ ಕಾನೂನು ಬಾಹಿರವಾಗಿ ವಿದ್ಯುತ್ ಸಂಪರ್ಕ ಕಲ್ಪಿಸುವ ಅಂಗಡಿಕಾರರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲದೇ ಹೋದರೆ ಕಾನೂನು ಹೋರಾಡ ಮಾಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಹನುಮಂತಪ್ಪ ಸಾ ನಿರಂಜನ ಇದ್ದರು.

Check Also

ಮೈಸೂರಿಗೆ ಆಗಮಿಸಿದ ಸಿಎಂ ಬಿಎಸ್​ವೈ: ಮುಂದಿನ ವರ್ಷ ಅದ್ಧೂರಿ ದಸರಾ ಭರವಸೆ

Spread the loveಮೈಸೂರು: ವಿಶ್ವ ವಿಖ್ಯಾತ ನಾಡ ಹಬ್ಬ ಜಂಜೂ ಸವಾರಿಗೆ ಕ್ಷಣ ಗಣೆನೆ ಆರಂಭವಾಗಿದ್ದು, ಸಿಎಂ ಯಡಿಯೂರಪ್ಪ ಕೂಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!