Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ : ಶೆಟ್ಟರ್ ವ್ಯಂಗ್ಯ.

ಕಾಂಗ್ರೆಸ್ ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ : ಶೆಟ್ಟರ್ ವ್ಯಂಗ್ಯ.

ಹುಬ್ಬಳ್ಳಿ: ಐಟಿ, ಇಡಿ ದಾಳಿ ವಿಚಾರವಾಗಿ ಕಾಂಗ್ರೆಸ್ ನವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದೆ ಎಂದು ಸಚಿವ ಜಗದೀಶ್ ಶೆಟ್ಟರ್ ಆರೋಪಿಸಿದ್ದಾರೆ. ನಗರದಲ್ಲಿಂದು ಬಿಜೆಪಿ ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಆಚರಣೆ ಮಾಡಿದ ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಈಗಾಗಲೇ ಜೀ. ಪರಮೇಶ್ವರ ಅವರು ಹೇಳಿರುವಂತೆ ಐಟಿ ದಾಳಿಯಲ್ಲಿ ರಾಜಕೀಯ ಯಾವುದು ಇಲ್ಲ. ಅಲ್ಲದೇ ಕಾಂಗ್ರೆಸ್ ನವರು ಕೇವಲ ರಾಜಕಾರಣ ಸಲುವಾಗಿ ಟೀಕೆ ಮಾಡುತ್ತಿದ್ದಾರೆ. ಈ ಹಿಂದೆ ಡಿಕೆಶಿವಕುಮಾರ ಅವರ ಮೇಲೂ ಇಡಿ ದಾಳಿ ಮಾಡಿ, ಕೇಸ್, ತನಿಖೆ ನಡೆಸಿದಾಗಲೂ ಕಾಂಗ್ರೆಸ್ ಟೀಕೆ ಮಾಡುತ್ತಾ ಬಂದಿತ್ತು. ಇದೀಗ ಜೀ.ಪರಮೇಶ್ವರ ಆಸ್ತಿಗಳ ಮೇಲೆ ಐಟಿ ದಾಳಿ ಆಗಿದೆ ಅದನ್ನು ಕೂಡಾ ಕಾಂಗ್ರೆಸ್ ಟೀಕಿಸುತ್ತಿದೆ ಎಂದರು. ಇನ್ನೂ ಜೀ ಪರಮೇಶ್ವರ ಹೇಳಿರುವಂತೆ ಐಟಿ ದಾಳಿಯಲ್ಲಿ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ, ಮತ್ತೊಂದು ಇಲ್ಲ. ಕಾನೂನು ಬದ್ದವಾಗಿ ನಡೆಸಲಾಗುತ್ತಿದೆ ಅದನ್ನು ಬದ್ದವಾಗಿ ಎದುರಿಸುತ್ತೇನೆ. ಎಂದು ಹೇಳಿದ್ದಾರೆ. ಆದರೂ ಕೂಡಾ ಕಾಂಗ್ರೆಸ್ ನವರು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅವರಲ್ಲಿ ಮಾತನಾಡಲು ಯಾವುದೇ ವಿಷಯ ವಿಲ್ಲ, ಹೀಗಾಗಿ ಐಟಿ ವಿಚಾರವನ್ನಿಟ್ಟುಕೊಂಡು ಬಿಜೆಪಿ, ಮೋದಿ ಅಮಿತ್ ಷಾ ವಿರುದ್ಧ ಮಾತನಾಡುತ್ತಿದ್ದಾರೆ. ಐಟಿ ಇಲಾಖೆ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದು, ಅವರನ್ನು ಪ್ರೋತ್ಸಾಹ ಮಾಡುವ ಕೆಲಸ ಆಗಬೇಕು ಅದನ್ನು ಬಿಟ್ಟು ತಪ್ಪು ಮುಚ್ಚಿಕೊಳ್ಳು ಟೀಕೆ ಮಾಡುವುದು ಸರಿಯಲ್ಲ. ಪರಮೇಶ್ವರ ಪಿಎ ರಮೇಶ ಆತ್ಮಹತ್ಯೆ ವಿಚಾರವಾಗಿ ತನಿಖೆಯನ್ನು ಪೋಲಿಸ ಇಲಾಖೆ ನಡೆಸುತ್ತಿದ್ದು, ಇದು ದಾಳಿಯ ಮಾರ್ಗವನ್ನು ತಪ್ಪಿಸುವ ಪ್ರಯತ್ನಗಳಾಗಿವೆ. ತನಿಖೆ ನಂತರ ನಿಜವಾದ ಸತ್ಯ ಹೊರಬರಲಿದೆ ಎಂದರು.*ಮಹರ್ಷಿ ವಾಲ್ಮೀಕಿ ಮಹಾನ್‌ ವ್ಯಕ್ತಿ:* ಹಿಂದೂಳಿದ ವರ್ಗ, ಶೋಷಿತ ಸಮಾಜದಲ್ಲಿ ಹುಟ್ಟಿ ಬೆಳೆದ ಮಹರ್ಷಿ ವಾಲ್ಮೀಕಿ ಮಾನಸಿಕವಾಗಿ ಬದಲಾವಣೆ ಮಾಡಿಕೊಂಡು, ಹೆಚ್ಚಿನ ರೀತಿ ಅಧ್ಯಯನ ಮಾಡಿ ವಾಲ್ಮೀಕಿ ರಾಮಾಯಣಯನ್ನು ಬರೆದಿದ್ದಾರೆ. ಅಲ್ಲದೇ ಅವರೊಬ್ಬ ಆದರ್ಶ ಪ್ರಾಯ ವ್ಯಕ್ತಿ. ಒಂದೇ ಸಮಾಜಕ್ಕೆ ಸೀಮಿತರಾಗದೇ ಎಲ್ಲ ಸಮಾಜಕ್ಕೂ ಬೇಕಾದವವರು ಮಹರ್ಷಿ ವಾಲ್ಮೀಕಿ, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ವಾಲ್ಮೀಕಿ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಣೆ ಮಾಡುವುದಕ್ಕೆ ಚಾಲನೆ ನೀಡಲಾಗಿತ್ತು. ಈ ಮೂಲಕ ವಾಲ್ಮೀಕಿ ಅವರಿಗೆ ಗೌರವ ಸಲ್ಲಿಸುವ ಕೆಲಸವಾಗುತ್ತಿದೆ ಎಂದರು.

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!