Breaking News
Hiring Reporter’s For more Information Contact Above Number 876 225 4007 . Program producer
Home / Breaking News / ಕಾನ್​ಸ್ಟೆಬಲ್ ಅಪಹರಿಸಿ ಹತ್ಯೆಮಾಡಿದ ಉಗ್ರರು

ಕಾನ್​ಸ್ಟೆಬಲ್ ಅಪಹರಿಸಿ ಹತ್ಯೆಮಾಡಿದ ಉಗ್ರರು

ಶ್ರೀನಗರ: ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ವೆಹಿಲ್ ಚಟ್ವಾಟನ್​ನಲ್ಲಿ ಪೊಲೀಸ್ ಕಾನ್​ಸ್ಟೆಬಲ್ ಒಬ್ಬರನ್ನು ಅಪಹರಿಸಿ ಕೊಲೆ ಮಾಡಲಾಗಿದೆ.

ಔಷಧ ತರಲು ಮಳಿಗೆಗೆ ಹೋಗಿದ್ದ ಜಾವೇದ್ ಅಹಮ್ಮದ್ ದರ್ (27) ಅವರನ್ನು ಕೆಲ ದಿನಗಳ ಹಿಂದೆ ಉಗ್ರರು ಅಪಹರಣ ಮಾಡಿದ್ದರು. ಅವರ ಮೃತ ದೇಹ ಶೋಪಿಯಾನ್ ಹೊರ ವಲಯ ಪರಿವಾನ್​ನಲ್ಲಿ ಪತ್ತೆಯಾಗಿದೆ. ತೀವ್ರ ಹಿಂಸೆ ನೀಡಿ, ಬಳಿಕ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಜಾವೇದ್ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಾಲಿಂದರ್ ಮಿಶ್ರಾ ಅವರ ಭದ್ರತಾ ಅಧಿಕಾರಿಯಾಗಿದ್ದರು. ಇತ್ತೀಚೆಗೆ ಈದ್ ಹಬ್ಬಕ್ಕೆ ಮನೆಗೆ ಬರುತ್ತಿದ್ದ ಸೈನಿಕ ಔರಂಗಜೇಬ್​ರನ್ನು ಜಮ್ಮುವಿನಿಂದ ಉಗ್ರರು ಅಪಹರಿಸಿ, ಕೊಲೆ ಮಾಡಿದ್ದರು. ಕಳೆದ ತಿಂಗಳು ಪತ್ರಕರ್ತ ಶುಜಾತ್ ಬುಖಾರಿಯನ್ನು ಶ್ರೀನಗರದಲ್ಲಿ ಉಗ್ರರು ಹತ್ಯೆ ಮಾಡಿದ್ದರು. ಶಾಂತಿ ಕದಡುವ ಉದ್ದೇಶದಿಂದ ಉಗ್ರರು ಈ ರೀತಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. -ಏಜೆನ್ಸೀಸ್

Share

About Shaikh BIG TV NEWS, Hubballi

Check Also

ಡಿಕೆಶಿ ವಿರುದ್ಧ ಯಡಿಯೂರಪ್ಪ ಹೊಸ ಬಾಂಬ್

ದಾವಣಗೆರೆ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸ್ಪೋಟಕ ಆರೋಪ ಮಾಡಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಡಿ.ಕೆ. …

Leave a Reply

Your email address will not be published. Required fields are marked *

error: Content is protected !!