Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ

Spread the love

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಪತ್ರಕರ್ತರ ಸಂಘ ಹುಬ್ಬಳ್ಳಿಯ ನೂತನವಾಗಿ ಚುನಾಯಿತರಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಇಂದು ನಗರದ ಸ್ವರ್ಣಭವನದಲ್ಲಿ ಹಮ್ಮಿಕೊಳ್ಳಲಾಯಿತು.ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಸಂಜೆದರ್ಪಣ ಪತ್ರಿಕೆಯ ಗಣಪತಿ ಗಂಗೊಳ್ಳಿ, ಉಪಾಧ್ಯಕ್ಷರಾಗಿ ಆಯ್ಕೆಯಾದ ವಿಜಯವಾಣಿ ಪತ್ರಿಕೆಯ ಜಗದೀಶ ಬುರ್ಲಬಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಸಂಯುಕ್ತ ಕರ್ನಾಟಕ ಪತ್ರಿಕೆಯ ಸುಶೀಲೇಂದ್ರ ಕುಂದರಗಿ, ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಆಯ್ಕೆಯಾದ ಬಸವರಾಜ ಬಿಜಾಪುರ, ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾದ ಡಾ.ವಿರೇಶ ಹಂಡಗಿ, ಖಜಾಂಚಿಯಾಗಿ ಅವಿರೋಧವಾಗಿ ಆಯ್ಕೆಯಾದ ಗುರು ಭಾಂಡಗೆ, ಜಿಲ್ಲಾ ಕಾರ್ಯಕಾರ್ಯಣಿ‌ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾದ ಮಂಜುನಾಥ ಜರತಾರಘರ, ತನುಜಾ ನಾಯಕ, ಹೇಮಂತ ದೊಡ್ಡಮನಿ, ಗುರುರಾಜ ಹೂಗಾರ, ಪ್ರಕಾಶ ಶೇಟ್, ಬಸವರಾಜ ಹೂಗಾರ, ಪ್ರಕಾಶ ನೂಲ್ವಿ, ಅಶೋಕ ಘೋರ್ಪಡೆ, ಶಿವಶಂಕರ ಕಂಠಿ, ಸ್ಯಾಮುಯೆಲ್‌ ಪಟ್ಟಿ, ಶಿವಾಜಿ ಲಾತೂರಕರ, ಅಕ್ಬರ ಬೆಳಗಾಂವಕರ, ಗುರುರಾಜ ಸಿ.ಹೂಗಾರ, ಕೃಷ್ಣಾ ದಿವಾಕರ ಅವರಿಗೆ ಚುನಾವಣಾಧಿಕಾರಿ ಎಂ.ಎಂ.ಪಾಟೀಲ ಅವರು ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ ಮಾಡುವ ಮೂಲಕ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿದರು.ಕಾರ್ಯಕ್ರಮದಲ್ಲಿ ಚುನಾವಣಾಧಿಕಾರಿಗಳಾದ ಎಂ.ಎಂ.ಪಾಟೀಲ, ಮಯಾಚಾರ್ಯ್, ಪುಂಡಲೀಕ ಬಾಳೋಜಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.ಇದೇ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡು ನೂತನವಾಗಿ ಅಧಿಕಾರ ಸ್ವೀಕರಿಸಿದ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

Check Also

ಹುಬ್ಬಳ್ಳಿಯಲ್ಲಿ ಮೀತಿಮಿರಿದ ಕಳ್ಳರ ಹಾವಳಿ: ಗಾಜು ಒಡೆದು ಉಪಕರಣ ದೋಚುವ ಕಳ್ಳರು

Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಸರಗಳ್ಳತನ, ಬೈಕ್ ಕಳ್ಳತನ, ಕಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!