Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಕುಡಿಯೋದ್ ಬಿಟ್ರು, ಮನೆ‌ ಮಕ್ಕಳನ್ನ ನೆಮ್ಮದಿಯಾಗಿಟ್ರು.. ಇವರು ಶ್ರೀಕ್ಷೇತ್ರ‌ದಿಂದ ನವಜೀವನ ಕಂಡವರು..

ಕುಡಿಯೋದ್ ಬಿಟ್ರು, ಮನೆ‌ ಮಕ್ಕಳನ್ನ ನೆಮ್ಮದಿಯಾಗಿಟ್ರು.. ಇವರು ಶ್ರೀಕ್ಷೇತ್ರ‌ದಿಂದ ನವಜೀವನ ಕಂಡವರು..

ಬೆಂಕಿ ದೇಹ ಸುಟ್ರೇ, ಮದ್ಯ ದೇಹ-ಮನಸ್ಸನ್ನೂ ಸುಡುತ್ತೆ ಅಂತ ಮಹಾತ್ಮ ಗಾಂಧೀಜಿ ಹೇಳಿದ್ರೂ ಕುಡಿಯೋರ ಸಂಖ್ಯೆ ಹೆಚ್ತಾನೇ ಇದೆ. ಕುಡಿಯೋದಕ್ಕೆ ಆಳೋ ಸರ್ಕಾರಗಳೇ ಪ್ರೇರೇಪಿಸ್ತವೆ. ಮದ್ಯ ಇರದಿದ್ರೇ ಸರ್ಕಾರ ನಡೆಸೋದೇ ಕಷ್ಟ. ಇಂಥದರಲ್ಲಿ ಕುಡುಕರನ್ನ ಆ ವ್ಯಸನದಿಂದ ಮುಕ್ತಿ ಹಾಡುವಂತೆ ಮಾಡ್ತಿರೋ ಒಂದು ಸಂಸ್ಥೆ ಸದ್ದಿಲ್ಲದೇ ಸಾಧನೆ ಮಾಡ್ತಿದೆ.
ಖುಷಿ ಹೆಚ್ಚಿದೆ, ಆ ಖುಷಿ  ಹೆಚ್ಚುತ್ತಲೇ ಕಾಲು ಕುಣಿತೀವೆ. ಮೈ-ಮನ ಮರೆತು ಹಾಡ್ತಿದಾರೆ, ನಲೀತಿದಾರೆ. ಲಂಬಾಣಿ ಮಹಿಳೆಯರೇ ಇಷ್ಟೊಂದ್ ಸಂಭ್ರಮಿಸೋಕೆ ಒಂದ್ ಕಾರಣ ಬೇಕಲ್ವೇ.. ಹೆಂಗಳೆಯರೆಲ್ಲ ಸಡಗರ ಪಡುವಂತೆ ಮಾಡಿರೋದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಅದ್ಹೇಗೆ ಅಂತೀರಲ್ವಾ. ವಿಷ್ಯ ಇದೆ. ಈ ಮಹಿಳೆಯರ ಗಂಡನೋ, ತಮ್ಮನೋ, ಸೋದರನೋ ಇಲ್ಲ ಮಗನೋ ಕುಡಿತ ಚಟಕ್ಕೆ ದಾಸರಾಗಿದ್ರು. ಆದ್ರೇ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇದಕ್ಕಾಗಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ರೂಪಿಸಿತ್ತು. ಇದರಡಿಯಲ್ಲೇ ಮದ್ಯವ್ಯಸನ ಶಿಬಿರಗಳ ನಡೆಸಿ, ಕುಡಿಯೋರನ್ನ ಆ ಚಟದಿಂದ ಮುಕ್ತಗೊಳಿಸಿತ್ತು. ಕುಡುಕರೆಲ್ಲ ಮದ್ಯ ತ್ಯಜಿಸಿ ನೆಮ್ಮದಿಯ ಜೀವನ ನಡೆಸ್ತಿದಾರೆ. ಅದಕ್ಕಾಗಿ ಇವರೆಲ್ಲ ಸಂಭ್ರಮಿಸ್ತಿದಾರೆ. ದುಡಿದ ದುಡ್ಡನೆಲ್ಲ ಬರೀ ಕುಡಿಯೋಕೆ ಬಳಸ್ತಿದ್ದ ಗಂಡಸರೆಲ್ಲ ಈಗ ಅದಕ್ಕೆಲ್ಲ ಬೈ ಹೇಳಿ, ಭರವಸೆಯ ಬದುಕು ತಮ್ಮಂದಾಗಿಸಿಕೊಂಡಿದಾರೆ. ಹಾಗೇ ಕುಡಿತ ಬಿಟ್ಟವರೆನ್ನಲ್ಲ ಸೇರಿಸಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಜತೆಗೆ ವಿವಿಧ ಸಂಘಗಳ  ನೇತೃತ್ವದಲ್ಲಿ ಮದ್ಯ ವ್ಯಸನ ಮುಕ್ತರಿಗೆ ಅಭಿನಂದಿಸಲಾಯಿತು. ಧಾರವಾಡ ಜಿಲ್ಲೆ ಕಲಘಟಗಿಯ ಎಪಿಎಂಸಿ ಆವರಣ ಇಂಥ ಅಪರೂಪದ ಕಾರ್ಯಕ್ರಮಕ್ಕೆ ವೇದಿಕೆಯಾಯಿತು. 150ನೇ ಗಾಂಧೀಜಿ ಜಯಂತಿ ಪ್ರಯುಕ್ತ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾ ಈ ಸಮಾವೇಶ ಆಯೋಜಿಸಲಾಗಿತ್ತು. ಜಗದೀಶ ಮಲ್ಲಪ್ಪ ಬ್ಯಾಳಿ, ಮದ್ಯ ತ್ಯಜಿಸಿದವರು
ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಅಖಿಲ ಕರ್ನಾಟಕ ಜನಜಾಗೃತ ವೇದಿಕೆ 1992ರಲ್ಲಿ ಆರಂಭವಾಗಿದೆ. 1265ಕ್ಕಿಂತ ಹೆಚ್ಚು ಸಮುದಾಯ ಮತ್ತು ವಿಶೇಷ ಮದ್ಯವರ್ಜನ ಶಿಬಿರ ನಡೆಸಲಾಗಿದ್ದು, 93 ಸಾವಿರ ಜನ ಕುಡಿತದಿಂದ ಮುಕ್ತಿ ಕಂಡಿದಾರೆ. ಕುಡಿತಕ್ಕೆ ದಾಸರಾದವರಿಗೆ 8 ದಿನ ಮನಪರಿವರ್ತನೆಯ ಬೋಧನೆ, ಚಿಕಿತ್ಸೆ ಮೂಲಕ ವ್ಯಸನ ಮುಕ್ತರನ್ನಾಗಿಸಲಾಗ್ತಿದೆ. ಇದಷ್ಟೇ ಅಲ್ಲ, ರಾಜ್ಯಾದ್ಯಂತ 3 ಸಾವಿರಕ್ಕೂ ಹೆಚ್ಚು ನವಜೀವನ ಸಮಿತಿಗಳು, ಯುವಕರು-ವಿದ್ಯಾರ್ಥಿಗಳನ್ನ ಕುಡಿತದಿಂದ ಪಾರು ಮಾಡಿವೆ. 30 ಜಿಲ್ಲೆಯಲ್ಲಿ ಈ ವರ್ಷ ಗಾಂಧಿ ಜಯಂತಿ ಅಂಗವಾಗಿ ಬಾಪೂಜಿಯ ವಿಚಾರ ಧಾರೆಗಳನ್ನ ಪ್ರಚಾರ ಮಾಡಲಾಗ್ತಿದೆ. ಇದಕ್ಕಾಗಿ ಕಾರ್ಯಾಗಾರ, ಜನಜಾಗೃತಿ ಜಾಥಾ, ಸ್ವಚ್ಛತಾ ಕಾರ್ಯಕ್ರಮ, ಪಾನಮುಕ್ತ, ಮಹಿಳಾ ಸಮಾವೇಶ ನಡೆಸಿ ಮದ್ಯಪಾನದಿಂದಾಗುವ ದುಷ್ಪರಿಣಾಮ ಮತ್ತು ಅದನ್ನ ತ್ಯಜಿಸೋ ಬಗೆಗೆ ಕಾರ್ಯಕ್ರಮಗಳನ್ನ ನಡೆಸಲಾಗ್ತಿದೆ. ಮದ್ಯ ಬಿಟ್ಟವರೇ ನವಜೀವನ ಸಮಿತಿ ಮೂಲಕ ಇತರರಿಗೂ ಪ್ರೇರಣೆ ನೀಡ್ತಿದಾರೆ. 
ಎಂ. ದಿನೇಶ, ಜಿಲ್ಲಾ ನಿರ್ದೇಶಕ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಇದಷ್ಟೇ ಅಲ್ಲ, 2018-19ರಲ್ಲಿ 165 ಮದ್ಯ ವ್ಯಸನ ಮುಕ್ತ ಶಿಬಿರಗಳನ್ನ ನಡೆಸಿ 12 ಸಾವಿರ ಮಂದಿಯನ್ನ ಕುಡಿತದ ಚಟದಿಂದ ಮುಕ್ತಗೊಳಿಸೋ ಗುರಿ ಹಾಕಲಾಗಿದೆ. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ವ್ಯಸನಮುಕ್ತಿಗಾಗಿ ಉಜಿರೆಯಲ್ಲಿ ವ್ಯಸನಮುಕ್ತಿ ಮತ್ತು ಸಂಶೋಧನಾ ಕೇಂದ್ರ ತೆರೆಯಲಾಗಿದೆ. ಜತೆಗೆ ಸಂಪೂರ್ಣ ಮದ್ಯಪಾನ ನಿಷೇಧಕ್ಕಾಗಿ ಹೋರಾಟ ಮಾಡಲು ಈ ಸಮಾವೇಶದಲ್ಲಿ ನಿರ್ಣಯಕೈಗೊಳ್ಳಲಾಗಿದೆ. 
ಶ್ರೀಮತಿ ಪದ್ಮಲತಾ ನಿರಂಜನಕುಮಾರ್, ಶ್ರೀ ವೀರೇಂದ್ರ ಹೆಗ್ಗಡೆ ಸೋದರಿ
ಕುಡಿತ ನಿಜಕ್ಕೂ ಕುಡಿಯೋರನ್ನಷ್ಟೇ ಅಲ್ಲದೇ, ಇಡೀ ಕುಟುಂಬವನ್ನೇ ಸರ್ವನಾಶ ಮಾಡುತ್ತೆ. ಮನಸು, ಮನೆಹಾಳು ಮಾಡಿದ್ದ ಕುಡಿತದಿಂದ ರಾಜ್ಯ ಜನಜಾಗೃತಿ ವೇದಿಕೆಯು ಇವರನ್ನೆಲ್ಲ ಮುಕ್ತಗೊಳಿಸಿದೆ. ಮನೆ ಉಳಿದ ಖುಷಿ ಇರೋದ್ರಿಂದಲೇ ಈ ಮಹಿಳೆಯರೆಲ್ಲ ಕುಣಿತೀದಾರೆ, ಖುಷಿ ಪಡ್ತಿದಾರೆ. ಇದೇ ಖುಷಿ ಯಾವಾಗಲೂ ಇರಲಿ. 

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!