Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಕುಮಾರಸ್ವಾಮಿ ಏನು ಪ್ರಧಾನಿಮಂತ್ರಿನಾ ಬಿಎಸ್ ವೈ ವಾಗ್ದಾಳಿ

ಕುಮಾರಸ್ವಾಮಿ ಏನು ಪ್ರಧಾನಿಮಂತ್ರಿನಾ ಬಿಎಸ್ ವೈ ವಾಗ್ದಾಳಿ

ಚಿತ್ರದುರ್ಗ:- ಕುಮಾರಸ್ವಾಮಿ ಒಬ್ಬರು ಮಾಜಿ ಮುಖ್ಯಮಂತ್ರಿ ಆಗಿ ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯ, ಅವರು ಅತೃಪ್ತಿಯಿಂದ ಮನ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ. ರಾಜ್ಯಕ್ಕೆ ನೆರೆ ಪರಿಹಾರ ವಿಷಯದಲ್ಲಿ ಎರಡನೇ ಕಂತು ರಾಜ್ಯಕ್ಕೆ ಬರುವುದು ಸಂದೇಹ ಎಂಬ ಕುಮಾರಸ್ವಾಮಿ ಹೇಳಿಕೆಗೆ ನಗರದಲ್ಲಿಂದು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಪ್ರಧಾನಿಯಲ್ಲಾ? ಅವರಿಗೆಲ್ಲಾ ಅತೃಪ್ತಿ ಅಸಮಾಧಾನ ಇದೆ. ಮಾಜಿ ಮುಖ್ಯಮಂತ್ರಿ ಆಗಿ ಬೇಜವಬ್ದಾರಿ ತನದ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಮನ ಬಂದಂತೆ ಮಾತನಾಡುವುದು ಎಷ್ಟರ ಮಟ್ಟಿಗೆ ಅವರಿಗೆ ಶೋಭೆ ತರುತ್ತೆ ಎಂಬುವುದನ್ನು ಯೋಚನೆ ಮಾಡಲಿ ಎಂದರು. ನೆರೆ ಪರಿಹಾರದ ಎರಡನೇ ಕಂತು ಬರಲ್ಲ ಅನ್ನೋಕೆ ಅವರ್ಯಾರು. ಅವರಿಗೆ ಏನು ಅಧಿಕಾರ ಇದೆ, ಇದು ಕುಮಾರ ಸ್ವಾಮಿ ತೀರ್ಮಾನವೋ, ಕೇಂದ್ರ ತೀರ್ಮಾನವೋ ಎಂದು ಹರಿ ಹಾಯ್ದ ಅವರು, ಕೇಂದ್ರ ಸರ್ಕಾರ ಎರಡನೇ ಕಂತಿನ ಹಣವನ್ನು ಶೀಘ್ರದಲ್ಲೇ ಬಿಡುಗಡೆ ಮಾಡುತ್ತದೆ. ಇದೀಗ ಮಧ್ಯಂತರ ಬಂದಿರುವ 1200 ಕೋಟಿ ಪರಿಹಾರ ಹಣವನ್ನು ಸ್ವಾಗತಿಸುವ ಮನಸ್ಥಿತಿ ಕುಮಾರಸ್ವಾಮಿ ಅವರಿಗಿಲ್ಲ ಎಂದರು.

Share

About CHANNABASAVAIAH BIG TV NEWS, Chitradurga

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!