Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಕೆಜಿಎಫ್‍ನ 'ಸಂಭ್ರಮ್' ಕಾಲೇಜಿನ ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ದೋಖಾ.

ಕೆಜಿಎಫ್‍ನ 'ಸಂಭ್ರಮ್' ಕಾಲೇಜಿನ ಆಡಳಿತ ಮಂಡಳಿಯಿಂದ ವಿದ್ಯಾರ್ಥಿಗಳಿಗೆ ದೋಖಾ.

*ಕೋಲಾರದಲ್ಲಿ ನೂರಾರು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಂಚಿಸಿದ ಮೆಡಿಕಲ್ ಕಾಲೇಜು.*ಮೂಲಭೂತ ಸೌಕರ್ಯಗಳಿಲ್ಲದೆ ಶುರುವಾದ ಕಾಲೇಜಿನ ವಿರುದ್ದ ಕೋರ್ಟ್‍ನಲ್ಲಿ ದಾವೆ.ಕೋಲಾರ : ರಾಜ್ಯದ ಮತ್ತೊಂದು ಮೆಡಿಕಲ್ ಕಾಲೇಜು ವಂಚನೆಯ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಕೋಲಾರ ಜಿಲ್ಲೆಯಲ್ಲಿನ ಈ ಮೆಡಿಕಲ್ ಕಾಲೇಜು ನೂರಾರು ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡಿದೆ. ಈ ಮೆಡಿಕಲ್ ಕಾಲೇಜ್‍ನವರು ಕೊಟ್ಟ ದುಡ್ಡಿಗೆ ಕೈಯೊಡ್ಡಿದ ಸರ್ಕಾರಿ ಅಧಿಕಾರಿಗಳು ಮುಗ್ದ ವಿದ್ಯಾರ್ಥಿಗಳ ಬದುಕಿಗೆ ಕೊಳ್ಳಿಯಿರಿಸಿದ್ದಾರೆ. ಏನಿದು ವಂಚನೆ, ಎಷ್ಟು ವಿದ್ಯಾರ್ಥಿಗಳ ಬದುಕು ತೊಂದ್ರೆಗೆ ಸಿಕ್ಕಿದೆ ಅನ್ನೋದ್ರ ಸ್ಟೋರಿ ಇದು.ಒಂದು ವಾರದಿಂದಲೂ ರಾಜ್ಯದಲ್ಲಿ ಮೆಡಿಕಲ್ ಕಾಲೇಜುಗಳದ್ದೇ ಸುದ್ದಿ. ಐಟಿ ಅಧಿಕಾರಿಗಳು ರೇಡ್ ಮಾಡಿದ ಎರಡು ಮೆಡಿಕಲ್ ಕಾಲೇಜಿನ ಬಗ್ಗೆ ನಿರಂತರವಾಗಿ ವರದಿಗಳು ಪ್ರಸಾರವಾಗುತ್ತಿದೆ. ಮೆರಿಟ್ ಸೀಟುಗಳನ್ನು ಕೋಟಿಗಟ್ಟಲೆ ಹಣ ತರುವ ಮ್ಯಾನೇಜ್‍ಮೆಂಟ್ ಸೀಟುಗಳಾಗಿ ಬದಲಾಯಿಸಿಕೊಳ್ಳುವ ದಂಧೆಯ ಬಗ್ಗೆ ಸುದ್ದಿಗಳು ಬಿತ್ತರವಾಗುತ್ತಿವೆ. ಈ ಮಧ್ಯೆ, ಕೋಲಾರ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜೊಂದು ನೂರಿಪ್ಪತ್ತು ವಿದ್ಯಾರ್ಥಿಗಳನ್ನು ಅಕ್ಷರಶಃ ಬೀದಿಗೆ ತಳ್ಳಿರುವ ಸುದ್ದ ಲಭ್ಯವಾಗಿದೆ.ಕೋಲಾರದ ಕೆಜಿಎಫ್ ನಗರದಲ್ಲಿ ಸಂಭ್ರಮ್ ಮೆಡಿಕಲ್ ಕಾಲೇಜಿದೆ. ಮೂರು ವರ್ಷಗಳ ಹಿಂದೆ ಶುರುವಾದ ಈ ಮೆಡಿಕಲ್ ಕಾಲೇಜಿಗೆ ಇದುವರೆಗೂ ಭಾರತೀಯ ವೈದ್ಯಕೀಯ ಮಂಡಳಿಯ ಮಾನ್ಯತೆಯೇ ಸಿಕ್ಕಿಲ್ಲ. ಆದರೂ ಕೂಡಾ ಎಲ್ಲ ಸೌಕರ್ಯಗಳನ್ನು ಒದಗಿಸುವುದಾಗಿ ಈ ಮೆಡಿಕಲ್ ಕಾಲೇಜಿನವರಿಂದ ಕೇವಲ ಮುಚ್ಚಳಿಕೆ ಪತ್ರವನ್ನು ಬರೆಸಿಕೊಂಡು 2016-2017 ರಲ್ಲಿ ವಿದ್ಯಾರ್ಥಿಗಳ ಪ್ರವೇಶಕ್ಕೆ ಅನುಮತಿಯನ್ನು ಕೊಡಲಾಯ್ತು. ಇದರನ್ವಯ ಸಿಇಟಿ, ಕಾಮೆಡ್-ಕೆ ಹಾಗೂ ಮ್ಯಾನೇಜ್‍ಮೆಂಟ್ ಖೋಟಾದಲ್ಲಿ ಬರೋಬ್ಬರಿ 120 ವಿದ್ಯಾರ್ಥಿಗಳಿಗೆ ಪ್ರವೇಶವನ್ನು ಕೊಟ್ಟಾಯ್ತು. ಅಲ್ಲಿಂದಾಚೆಗೆ ಶುರುವಾದ ಇಲ್ಲಿನ ವಿದ್ಯಾರ್ಥಿಗಳು ಶೈಕ್ಷಣಿಕ ಬದುಕು ಅಕ್ಷರಶಃ ನರಕವಾಗಿದೆ.ಕೆಜಿಎಫ್‍ನ ಸಂಭ್ರಮ್ ಮೆಡಿಕಲ್ ಕಾಲೇಜಿನಲ್ಲಿ ತರಗತಿಗಳು ಶುರುವಾಗಿ ಒಂದು ವರ್ಷವಾಗುತ್ತಿದ್ದಂತೆಯೇ ವಿದ್ಯಾರ್ಥಿಗಳು ದಿಗಿಲು ಬಿದ್ದಿದ್ದಾರೆ. ಇಡೀ ಕಾಲೇಜಿನಲ್ಲಿ ಶೇಕಡ 46 ರಷ್ಟು ಬೋಧಕರ ನೇಮಕವಾಗಿರಲಿಲ್ಲ. ಶೇಕಡಾ 55 ರಷ್ಟು ಸ್ಥಾನೀಯ ವೈದ್ಯರ ಕೊರತೆಯಿತ್ತು. ಸಿಟಿ ಸ್ಕ್ಯಾನ್ ಇರಲಿಲ್ಲ, ಎಕ್ಸ್‍ರೇ ಮಿಷಿನ್‍ಗಳು ಕೆಲಸ ಮಾಡ್ತಿರಲಿಲ್ಲ. ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಒಳ ರೋಗಿಗಳಾಗಲೀ, ಹೊರ ರೋಗಿಗಳಾಗಲೀ ಇಲ್ಲವೇ ಇಲ್ಲ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸೋ ಸ್ಥಿತಿಯಲ್ಲಿ ಆಡಳಿತ ಮಂಡಳಿಯು ಇರಲಿಲ್ಲ. ತಾವೆಲ್ಲ, ಧನದಾಹಿ ಆಡಳಿತ ಮಂಡಳಿಯು ಹೆಣೆದ ಬಲೆಯಲ್ಲಿ ಸಿಲುಕಿದ್ದೇವೆ ಅಂತ ವಿದ್ಯಾರ್ಥಿಗಳಿಗೆ ಆಗಲೇ ಅರ್ಥವಾಗಿದ್ದು.ಸಂಭ್ರಮ್ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಅಲ್ಲಿಂದ ಧರಣಿ-ಪ್ರತಿಭಟನೆ ಅಂತೆಲ್ಲ ಹೋರಾಟ ಶುರುಮಾಡಿದ್ರೂ ಪ್ರಯೋಜನವಾಗಿಲ್ಲ. ಅತ್ತ ಅಗತ್ಯ ಕಲಿಕೆಯೂ ಇಲ್ಲದೆ, ಇತ್ತ ಮಾನ್ಯತೆಯೂ ಇಲ್ಲದಿರುವ ಸಂಭ್ರಮ್ ಕಾಲೇಜಿನ ಈ ವಿದ್ಯಾರ್ಥಿಗಳನ್ನು ಸೇರ್ಪಡೆ ಮಾಡಿಕೊಳ್ಳಲು ಬೇರೆ ಅರ್ಹ ಮೆಡಿಕಲ್ ಕಾಲೇಜಿನವ್ರು ಒಪ್ಕೊಳ್ಳಲಿಲ್ಲ. ಮಾನ್ಯತೆಯ ನವೀಕರಣ ಹಾಗೂ ವಿದ್ಯಾರ್ಥಿಗಳ ದೂರುಗಳ ಪರಿಶೀಲನೆಗೆ ಬಂದಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಅಧಿಕಾರಿಗಳಿಗೆ ಇವೆಲ್ಲ ಲೋಪಗಳು ಕಾಣಲೇ ಇಲ್ಲ. ಆದ್ರೆ, ಭಾರತೀಯ ವೈದ್ಯಕೀಯ ಮಂಡಳಿಯು ಮಾತ್ರ ಆ ನಂತ್ರದ ವರ್ಷಗಳಿಗೆ ಹೊಸ ವಿದ್ಯಾರ್ಥಿಗಳ ಪ್ರವೇಶವನ್ನು ನಿರ್ಬಂಧಿಸಿತು. ಈ ಎಲ್ಲ ಬೆಳವಣಿಗೆಯಿಂದ ಅತಂತ್ರವಾಗಿರುವ ಸಂಭ್ರಮ್ ಕಾಲೇಜಿನ ವಿದ್ಯಾರ್ಥಿಗಳು ಇದೀಗ ಕಾನೂನಿನ ಮೊರೆ ಹೋಗಿದ್ದಾರೆ.ಒಟ್ಟಿನಲ್ಲಿ, ಮೆರಿಟ್ ಸೀಟುಗಳನ್ನು ತಂತ್ರ-ಕುತಂತ್ರವೆಲ್ಲವನ್ನೂ ಬಳಸಿಕೊಂಡು ಆಡಳಿತ ಮಂಡಳಿಯ ಖೋಟಾ ಮಾಡಿಕೊಂಡು ಕೋಟಿಗಟ್ಟಲೆ ಸಂಪಾದಿಸೋದಿಕ್ಕೆ ಹರಸಾಹಸ ಮಾಡಬೇಕು. ಆದ್ರೆ, ಕೆಜಿಎಫ್‍ನ ಸಂಭ್ರಮ್ ಕಾಲೇಜಿನ ಆಡಳಿತ ಮಂಡಳಿ ಮಾತ್ರ ಯಾವುದೇ ಜಾದೂ ಮಾಡದೆ ಆರೆ-ಬರೆ ನಿರ್ಮಾಣವಾಗಿರುವ ಕಟ್ಟಡವೊಂದಕ್ಕೆ ಮೆಡಿಕಲ್ ಕಾಲೇಜು ಅಂತ ಬೋಡ್ ಹಾಕಿಕೊಂಡು ಕೋಟಿಗಟ್ಟಲೆ ಸಂಪಾದಿಸಿಕೊಂಡು ಗಪ್‍ಚುಪ್ ಅಂತ ಕುಳಿತಿದೆ. 120 ಮಂದಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ರಾಜ್ಯ ಸರ್ಕಾರ ಯಾವ ತೀರ್ಮಾಣವನ್ನು ತೆಗೆದುಕೊಳ್ಳುತ್ತೆ ಅಂತ ಕಾದುನೋಡಬೇಕಾಗಿದೆ.

Share

About ramu BIG TV NEWS, Kolar

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!