Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಕ್ರಿಕೆಟ್ ನಿಂದ ಸಿನೆಮಾ ಜಗತ್ತಿಗೆ ಕಾಲಿಡಲಿದ್ದಾರಾ ಇರ್ಫಾನ್‌​​​ ಪಠಾಣ್‌??

ಕ್ರಿಕೆಟ್ ನಿಂದ ಸಿನೆಮಾ ಜಗತ್ತಿಗೆ ಕಾಲಿಡಲಿದ್ದಾರಾ ಇರ್ಫಾನ್‌​​​ ಪಠಾಣ್‌??

ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಇರ್ಫಾನ್ ಪಠಾಣ್‌ ಕ್ರಿಕೆಟ್‌ ಕ್ರೀಸ್‌ನಿಂದ ಇದೀಗ ಸಿಲ್ವರ್‌ ಸ್ಕ್ರೀನ್‌ಗೆ ಎಂಟ್ರಿಕೊಡುವ ಸಿದ್ದತೆಯಲ್ಲಿದ್ದಾರೆ. ಟೀಂ ಇಂಡಿಯಾದ ವೇಗಿಯಾಗಿ ಮಿಂಚಿದ ಪಠಾಣ್‌ ಸಿನಿಮಾದಲ್ಲಿ ಖಡಕ್ ಪೊಲೀಸ್​ ಅಧಿಕಾರಿಯಾಗಿ ಕಾಣಿಸಿಕೊಂಡರೆ ಹೇಗಿರುತ್ತೆ? ಈ ಕುರಿತ ಇಂಟ್ರೆಸ್ಟಿಂಗ್‌ ವಿಚಾರಗಳು ಇಲ್ಲಿವೆ ಓದಿ.ಇರ್ಫಾನ್​ ಪಠಾಣ್‌​ ತಮಿಳು ಸಿನಿಮಾದಲ್ಲಿ ನಟಿಸಲು ಆಸಕ್ತಿ ತೋರಿಸಿದ್ದಾರಂತೆ. ತಮಿಳು ನಿರ್ದೇಶಕ ಜ್ಞಾನ ಮುತ್ತು ‘ವಿಕ್ರಮ್​ 58’ ಎಂಬ ಸಿನಿಮಾ ಮಾಡುತ್ತಿದ್ದು, ಇದ್ರಲ್ಲಿ ಪೊಲೀಸ್​ ಅಧಿಕಾರಿಯಾಗಿ ಪಠಾಣ್​​ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.ಇರ್ಫಾನ್ ಪಠಾಣ್ಈ ಬಗ್ಗೆ ಸ್ವತ: ಅಭಿಪ್ರಾಯ ಹಂಚಿಕೊಂಡಿರುವ ಕ್ರಿಕೆಟಿಗ, ನಿರ್ದೇಶಕರು ನನ್ನ ಬಳಿ ಬಂದು ನೀವು ಸಿನಿಮಾದಲ್ಲಿ ಪೊಲೀಸ್​​ ಅಧಿಕಾರಿ ಪಾತ್ರ ನಿರ್ವಹಿಸುತ್ತೀರಾ? ಎಂದು ಕೇಳಿದ್ರು. ಅದಕ್ಕೆ ನಾನು, ನಾನಾ? ಎಂದು ಪ್ರಶ್ನಿಸಿದ್ದೆ. ಇದಕ್ಕೆ ಉತ್ತರಿಸಿದ ನಿರ್ದೇಶಕರು, ಹೌದು ಈ ಪಾತ್ರವನ್ನು ನೀವು ನಿರ್ವಹಸಿದರೆ ಸೂಟ್‌​ ಆಗುತ್ತದೆ ಎಂದಿದ್ದಾರೆ. ಇದಕ್ಕೆ ನಾನು ಸ್ವಲ್ಪ ದಿನ ಕಾಲಾವಕಾಶ ಪಡೆದು ಉತ್ತರಿಸುವುದಾಗಿ ತಿಳಿಸಿದ್ದೇನೆ ಎಂದು ಹೇಳಿದ್ದಾರೆ.ಇರ್ಫಾನ್ ಪಠಾಣ್‌ತಮಿಳಿನಲ್ಲಿ ನಿರ್ದೇಶಕ ಜ್ಞಾನಮುತ್ತು ಮಾಡುತ್ತಿರುವ ಮೂರನೇ ಸಿನಿಮಾ ಇದಾಗಿದ್ದು, ಮೊದಲು ‘ಡೆಮೋಂಟ್​ ಕಾಲೋನಿ’ ಮತ್ತು ‘ಇಮೈಕ್ಕ ನೋಡಿಗಲ್’​​ ಸಿನಿಮಾ ಮಾಡಿದ್ದರು. ತಮಿಳುನಾಡಿಗೂ ಇರ್ಫಾನ್​ ಪಠಾಣ್‌ಗೂ ವಿಶೇಷ ನಂಟಿದೆ. ಐಪಿಎಲ್​​ನಲ್ಲಿ ಚೆನ್ನೈ ಸೂಪರ್​​ ಕಿಂಗ್ಸ್​​ ತಂಡವನ್ನು ಪ್ರತಿನಿಧಿಸಿದ್ದರು. ಈ ಹಿನ್ನೆಲೆಯಲ್ಲಿಯೂ ಅಭಿಮಾನಿಗಳನ್ನು ಸೆಳೆಯಲು ನಿರ್ದೇಶಕ ಈ ಪ್ಲಾನ್​ ಮಾಡಿದ್ದರೂ ಆಶ್ಚರ್ಯವಿಲ್ಲ ಎನ್ನಲಾಗುತ್ತಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!