Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕ್ರೈಂ ಕಥೆ ಆಧಾರಿತ "ಸಾರ್ವಜನಿಕರಲ್ಲಿ ವಿನಂತಿ" ಚಿತ್ರ ಮಾರ್ಚ್ ಕೊನೆವಾರ ತೆರೆಗೆ….

ಕ್ರೈಂ ಕಥೆ ಆಧಾರಿತ "ಸಾರ್ವಜನಿಕರಲ್ಲಿ ವಿನಂತಿ" ಚಿತ್ರ ಮಾರ್ಚ್ ಕೊನೆವಾರ ತೆರೆಗೆ….

Spread the love

ಹುಬ್ಬಳ್ಳಿ: ಇತ್ತೀಚಿನ ಸಮಾಜದಲ್ಲಿ ನಡೆಯುತ್ತಿರುವ ಕ್ರೈಂ ಆಧಾರಿತ “ಸಾರ್ವಜನಿಕರಲ್ಲಿ ವಿನಂತಿ” ಚಲನಚಿತ್ರ ಇದೇ ಮಾರ್ಚ್ ಕೊನೆಯ ವಾರ ರಾಜ್ಯಾಧ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರ ನಿರ್ದೆಶಕ ಕೃಪಾಸಾಗರ್ ಟಿ.ಎನ್‌. ತಿಳಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ಸಮಾಜದಲ್ಲಿ ಕ್ರೈಂ ಎಂಬುವಂತದ್ದು, ದಿನದಿಂದ ದಿನಕ್ಕೆ ವೃದ್ಧಿಯಾಗುತ್ತಿದೆ. ಸರಗಳ್ಳತನ, ಕೊಲೆ, ದರೋಡೆ, ಅತ್ಯಾಚಾರ ಸೇರಿದಂತೆ ಹಲವಾರು ಪ್ರಕರಣಗಳನ್ನು ಬೇದಿಸುವಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುವ ಕಥೆ ಆಧಾರಿತ ಚಿತ್ರ ಇದಾಗಿದ್ದು, ಪ್ರಸ್ತುತ ದಿನಮಾನಗಳಲ್ಲಿ ಜನರಲ್ಲಿ ಎಚ್ಚರಿಕೆ ನೀಡುವ ಹಾಗೂ ಒಂದು ಸಮಾಜಿಕ ಸಂದೇಶಗಳನ್ನು ನೀಡುವ ಹಿನ್ನೆಲೆಯಲ್ಲಿ ಚಿತ್ರವನ್ನು ಚಿತ್ರಿಕರಿಸಲಾಗಿದೆ ಎಂದರು. ಅಷ್ಟೇ ಅಲ್ಲದೇ ನಮ್ಮ ಬೆನ್ನ ಹಿಂದೆ ನಡೆಯುವ ಕ್ರೈಂಗಳ ಬಗ್ಗೆ ಕೂಡ ಕನ್ನಡಿಯನ್ನು ಹಿಡಿಯಲಾಗಿದೆ‌. ಸಮಾಜದಲ್ಲಿ ಕ್ರೈಂ ನಿಯಂತ್ರಣ ಮಾಡಲು ಚಿತ್ರ ಪೂರಕವಾಗಿದೆ ಎಂದು ಅವರು ತಿಳಿಸಿದರು. ಚಿತ್ರದ ನಿರ್ದೇಶನವನ್ನು ಕೃಪಾಸಾಗರ, ಚಿತ್ರದ ನಿರ್ಮಾಪಕರಾಗಿ ಉಮಾ ನಂಜುಂಡರಾವ್ ಕಾರ್ಯ ನಿರ್ವಹಿಸಿದ್ದು, ಸಹ ನಿರ್ಮಾಪಕರಾಗಿ ರಾಘವೇಂದ್ರ ಎಂ ಅವರು ಕೂಡ ಚಿತ್ರ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ ಎಂದರು. ಚಿತ್ರದ ಸಂಗೀತ ಸಂಯೋಜನೆಯನ್ನು ಅನಿಲ ಸಿ.ಜೆ, ಸಂಕಲನ ಹಾಗೂ ಛಾಯಾಗ್ರಹಣವನ್ನು ಅನೀಲಕುಮಾರ ಕೆ, ಚಿತ್ರ ಸಂಭಾಷಣೆಯನ್ನು ಸಂತೋಷ ಮುಂದಿನಮನೆ ಅವರು ರಚಿಸಿದ್ದಾರೆ ಎಂದು ಅವರು ಹೇಳಿದರು. ಚಿತ್ರದಲ್ಲಿ ನಾಯಕನಾಗಿ ಮದನರಾಜ್, ನಾಯಕಿಯಾಗಿ ಅಮೃತಾ ಕೆ.ಎಲ್,ಮಂಡ್ಯ ರಮೇಶ, ರಮೇಶ ಪಂಡಿತ, ನಾಗೇಶ ಮಯ್ಯಾ, ಜ್ಯೋತಿ ಮರೂರು, ಕಾಮಿಡಿ ಕಿಲಾಡಿ ಸಂಜು ಬಸಯ್ಯ ಅಭಿನಯಿಸಿದ್ದಾರೆ ಎಂದರು. ಚಿತ್ರವನ್ನು ತುಮಕೂರು ಜಿಲ್ಲೆಯ ದೊಡ್ಡಪಾಲನಹಳ್ಳಿ, ಗೊರವನಹಳ್ಳಿ, ಕೊರಟಗೇರಿ, ಬೆಂಗಳೂರು ಗ್ರಾಮಾಂತರ, ಮೆಜೆಸ್ಟಿಕ್ ಸೇರಿದಂತೆ ಹಲವಾರು ಕಡೆಗಳಲ್ಲಿ ಚಿತ್ರೀಕರಿಸಲಾಯಿತು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ನಾಯಕ ಮದನರಾಜ್, ನಾಯಕಿ ಅಮೃತಾ ಕೆ.ಎಲ್, ಉಮಾ ನಂಜುಂಡರಾವ್ ಸೇರಿದಂತೆ ಇತರರು ಇದ್ದರು.

Check Also

‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್

Spread the loveತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!