Breaking News
Hiring Reporter’s For more Information Contact Above Number 876 225 4007 . Program producer
Home / ಅಪರಾಧ / ಬೆಂಗಳೂರು / ಖಾಸಗಿ ಕಂಪನಿಯಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ : ಕುಟುಂಬಸ್ಥರು, ಗ್ರಾಮಸ್ಥರಿಂದ ಪ್ರತಿಭಟನೆ

ಖಾಸಗಿ ಕಂಪನಿಯಲ್ಲಿ ಮೇಲಾಧಿಕಾರಿಗಳಿಂದ ಕಿರುಕುಳ : ಕುಟುಂಬಸ್ಥರು, ಗ್ರಾಮಸ್ಥರಿಂದ ಪ್ರತಿಭಟನೆ

ಬೆಂಗಳೂರು :- ಕಂಪನಿಯಲ್ಲಿ ಕಿರುಕುಳ ನೀಡುತ್ತಿದ್ದಾರೆಂದು ಮಹಿಳೆ ಬೇಸತ್ತು ವಿಷ ಕುಡಿದು ಆತ್ಮಹತ್ಯೆಗೆ ಯತ್ನಸಿದ ಘಟನೆ ಹಿನ್ನಲೆಯಲ್ಲಿ ಆಕ್ರೋಶಗೊಂಡ ಕುಟುಂಬಸ್ಥರು ಹಾಗು ಗ್ರಾಮಸ್ಥರು ಕಂಪನಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಮಯಸಂದ್ರದಲ್ಲಿ ನಡೆದಿದೆ.

ಮಯಸಂದ್ರ ಬಳಿ‌ ಇರುವ ಡಿಹೆಚ್ಎಲ್ ಕಂಪನಿಯಲ್ಲಿ ಕಳೆದ ಐದು ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಚಮಾನಹಳ್ಳಿ ನಿವಾಸಿ ಉಷಾರಿಗೆ ಕಂಪನಿಯ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದರು ಎನ್ನಲಾಗಿದ್ದು, ಈ ಹಿನ್ನಲೆಯಲ್ಲಿ ನಿನ್ನೆ ರಾತ್ರಿ ಕೆಲಸ ಮುಗಿಸಿ ಮನೆಗೆ ಹೋದ ಉಷಾ, ಡೆತ್ ನೋಟ್ ಬರೆದಿದ್ದಾರೆ ಅದರಲ್ಲಿ ಕಿರುಕುಳ ನೀಡುತ್ತಿದ್ದ ಕಂಪನಿಯ ರಮೇಶ್, ಗಾಂಧಿ, ಪುಷ್ಪ, ನಾಗರಾಜು ಹಾಗು ಬಾಲರಾಜು ಎಂಬುವವರ ಹೆಸರುಗಳನ್ನು ಬರೆಯಲಾಗಿದ್ದು, ಇವರುಗಳು ನನಗೆ ಕೊಟ್ಟ ಕಷ್ಟವನ್ನು ಬೇರೆ ಯಾರಿಗೂ ಕೊಡಬೇಡಿ ಎಂದು ಬರೆದಿದ್ದಾರೆ. ನಂತರ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಕುಟುಂಬದವರು ಉಷಾ ರನ್ನು ನೋಡಿ ಆತ್ಮಹತ್ಯೆಯಿಂದ ಬಚಾವ್ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಖಾಸಗಿ‌ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಇನ್ನು ಇದೇ ರೀತಿ ಕಳೆದ ಮೂರು ತಿಂಗಳ ಹಿಂದೆಯೂ ಸಹ ಬೆಸ್ತಮಾನಹಳ್ಳಿ ಗ್ರಾಮದ ಮಹಿಳೆಯೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದು, ಕಂಪನಿಯಲ್ಲಿ ಕೆಲಸಗಾರರ ಮೇಲೆ ನಿರಂತರ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಆಕ್ರೋಶಗೊಂಡ ಕುಟುಂಬದವರು ಹಾಗು ಗ್ರಾಮಸ್ಥರು ಕಂಪನಿಯ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಹಿಳೆಗೆ ಕಿರುಕುಳ ನೀಡಿದವರಿಗೆ ತಕ್ಕ ಶಿಕ್ಷೆ ಆಗಬೇಕು. ಉಷಾ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

Share

About solaragoppa

Check Also

Featured Video Play Icon

ರಾಸಲೀಲೆ ಪ್ರಕರಣ ಕೃಷಿ ಸಚಿವರು ಏನ ಅಂದ್ರು ನೋಡಿ | MINISTER BC PATIL | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!