Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಖಾಸಗಿ ಶಾಲೆಯ ಮುಖ್ಯಸ್ಥನಿಗೆ ಬಂತು ಬಾಂಬ್​ ಗಿಫ್ಟ್

ಖಾಸಗಿ ಶಾಲೆಯ ಮುಖ್ಯಸ್ಥನಿಗೆ ಬಂತು ಬಾಂಬ್​ ಗಿಫ್ಟ್

ಗುಜರಾತ್​​: ರಾಜ್​ಕೋಟ್ ಜಿಲ್ಲೆಯಲ್ಲಿರುವ ಖಾಸಗಿ ಶಾಲೆಯ ಮುಖ್ಯಸ್ಥನೊಬ್ಬನಿಗೆ ಅನಾಮಧೇಯ ವಿಳಾಸದಿಂದ ಗಿಫ್ಟ್​ ಬಾಕ್ಸೊಂದು ಬಂದಿತ್ತು. ಅದನ್ನು ತೆರೆದಾಗ ಆ ವ್ಯಕ್ತಿ ಬೆಚ್ಚಿ ಬಿದ್ದಿದ್ದರು.ಅಷ್ಟಕ್ಕೂ ಆ ಬಾಕ್ಸ್​ನಲ್ಲಿ ಗಿಫ್ಟ್​​ ಆಗಿ ಬಂದಿದ್ದು ಬಾಂಬ್​..! ಶ್ರೀಕೃಷ್ಣಾ ಶಾಲೆಯ ಮುಖ್ಯಸ್ಥ ವಿಠಲ್​​ ದೊಬಾರಿಯಾ ಅವರಿಗೆ ಜಿಲೆಟಿನ್​ ಕಡ್ಡಿಗಳಿಂದ ತಯಾರಿಸಲಾಗಿದ್ದ ಬಾಂಬ್​ ಬಂದಿತ್ತು. ಇದನ್ನು ಕಂಡು ಶಾಕ್ ಆದ ವಿಠಲ್​ ದೊಬಾರಿಯಾ, ತಕ್ಷಣವೇ ಬಾಂಬ್​ ನಿಷ್ಕ್ರಿಯ ದಳಕ್ಕೆ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಬಂಬ್​ ನಿಷ್ಕ್ರಿಯಗೊಳಿಸಿ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ.ಅಕ್ಟೋಬರ್ 12ಕ್ಕೆ ಕೈ ಸೇರಿದ ಗಿಫ್ಟ್​​ ಬಾಕ್ಸ್​ನಲ್ಲಿ ಅಕ್ಟೋಬರ್​ 14ನೇ ತಾರೀಕಿನಂದು ಬಾಕ್ಸ್​​ ಓಪನ್​​ ಮಾಡುವಂತೆ ಬರೆಯಲಾಗಿತ್ತು. ಅದರಂತೆ 14ರಂದು ಓಪನ್​ ಮಾಡಿದಾಗ ಬಾಂಬ್​ ಇರುವುದು ಗೊತ್ತಾಗಿದೆ. ಇನ್ನು ಬಾಂಬ್​ ಕಳುಹಿಸಿದ್ದು ಯಾರೆಂದು ಇನ್ನೂ ತಿಳಿದುಬಂದಿಲ್ಲ. ವಿಠಲ್​ ದೊಬಾರಿಯಾ ಕೂಡ ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಆದರೆ ಆ ಗಿಫ್ಟ್ ಬಾಕ್ಸ್ ಮೇಲೆ ನಾನು ಈ ಶಾಲೆಯ ಹಳೇ ವಿದ್ಯಾರ್ಥಿ, ದಬೋರಿಯಾ ನನಗೆ ನೀಡಿದ ಸಹಕಾರಕ್ಕೆ ಧನ್ಯವಾದ ತಿಳಿಸಲು ಇದನ್ನ ಕಳಿಸಿದ್ದೇನೆ ಅಂತ ಬರೆದಿದೆ. ಆದ್ರೆ ಆ ವ್ಯಕ್ತಿ ತನ್ನ ಗುರುತನ್ನ ಮಾತ್ರ ಹೇಳಿಲ್ಲ. ಹೀಗಾಗಿ ಗಿಫ್ಟ್ ಬಾಕ್ಸ್​​ನಲ್ಲಿ ಬಾಂಬ್ ಕಳಿಸಿದ ಅನಾಮಧೇಯ ವ್ಯಕ್ತಿಗಾಗಿ ಪೊಲೀಶರು ಶೋಧ ನಡೆಸುತ್ತಿದ್ದು, 4 ವಿಶೇಷ ತಂಡಗಳನ್ನ ರಚಿಸಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!