Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಖೈದಿಗಳ ಕೈಗೆ ಹಾಕಬೇಕಾದ ಬೇಡಿಗಳನ್ನು ವಾಹನಕ್ಕೆ ಹಾಕಿದ ಪೊಲೀಸರು

ಖೈದಿಗಳ ಕೈಗೆ ಹಾಕಬೇಕಾದ ಬೇಡಿಗಳನ್ನು ವಾಹನಕ್ಕೆ ಹಾಕಿದ ಪೊಲೀಸರು

Spread the love

ಹುಬ್ಬಳ್ಳಿ: ಅಪರಾಧಿಗಳ ಕೈಗಳಿಗೆ ಹಾಕಬೇಕಿದ್ದ ಬೇಡಿಗಳು ಈಗ ಪೊಲೀಸ್ ಠಾಣೆಯ ಎದುರಿನ ಗಾಡಿಗಳಿಗೆ ಬಂಧಿಸಲು ಉಪಯೋಗಿಸಲಾಗುತ್ತಿದೆ.ಯಾವ ವಸ್ತುಗಳನ್ನು ಯಾವ ಕೆಲಸಕ್ಕೆ ಬಳಸಬೇಕೆಂಬ ಪರಿಜ್ಞಾನ ಕೂಡ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಇಲ್ಲವಾಗಿದೆ.
ಹೌದು‌. ಹುಬ್ಬಳ್ಳಿಯ ಕಸಬಾ ಪೊಲೀಸ್ ಠಾಣೆಯಪೊಲೀಸರು ಅಪರಾಧಿಗಳಿಗೆ ಹಾಕುವ ಬೇಡಿಗಳಿಂದ ವಾಹನಗಳನ್ನು ಬಂಧಿ ಮಾಡಿದ್ದಾರೆ.ಜಪ್ತಿ ಮಾಡಿ ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಲಾಗಿರುವ ವಾಹನಗಳನ್ನು ಯಾರು ತಗೆದುಕೊಂಡು ಹೋಗಬಾರದು ಎಂಬ ಕಾರಣಕ್ಕೆ ಈ ಬೇಡಿಗಳನ್ನು ಹಾಕಲಾಗಿದೆ ಎನ್ನಲಾಗುತ್ತಿದೆ. ಅಪರಾಧಿಗಳ ಕೈ ಸೇರಬೇಕಾದ ಬೇಡಿಗಳು ಮಾತ್ರ ವಾಹನಗಳನ್ನು ಕಾವಲು ಕಾಯುತ್ತಿರುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.ಪೊಲೀಸ್ ಇಲಾಖೆಯಲ್ಲಿ ಬೇಡಿಗಳಿಗೆ ತನ್ನದೆಯಾದ ಮಹತ್ವವಿದೆ. ಠಾಣೆಯ ಒಳಗೆ ಇರುವ ಬೇಡಿಗಳನ್ನು ಸರಿಯಾಗಿ ಕಾಯ್ದಿಟ್ಟಿಕೊಳ್ಳಬೇಕು. ಎಲ್ಲೆಂದರಲ್ಲಿ ಎಸೆಯುವದು. ಸಾರ್ವಜನಿಕವಾಗಿ ಕಟ್ಟುವದು ಮಾಡಬಾರದು. ಆದರೆ, ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ ವಾಹನಗಳಿಗೆ ಹಾಕುವುದರ ಮೂಲಕ ಬೇಡಿಯ ಮಹತ್ವವನ್ನು ಕಡಿಮೆ ಮಾಡಲಾಗುತ್ತಿದ್ದು, ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ಬೇಡಿಗಳನ್ನು ವಾಹನಗಳಿಂದ ಬೆರ್ಪಡಿಸಿ ಬೇಡಿಯ ಮಹತ್ವವನ್ನು ಕಾಪಾಡಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Check Also

ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ, ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ: ಪ್ರಮೋದ್​ ಮುತಾಲಿಕ್​

Spread the loveವಿಜಯಪುರ: ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆ ಮಾಡೇ ಮಾಡ್ತೀವಿ. ತಾಕತ್ತಿದ್ದರೆ ನಮ್ಮನ್ನು ಬಂಧಿಸಲಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!