Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಗಾಂಧಿ ಜಯಂತಿ: ಬೆಳ್ಳಿ ಪರದೆ ಮೇಲೆ ‘ಮಹಾತ್ಮಾ’ರಾದವರು

ಗಾಂಧಿ ಜಯಂತಿ: ಬೆಳ್ಳಿ ಪರದೆ ಮೇಲೆ ‘ಮಹಾತ್ಮಾ’ರಾದವರು

ನವದೆಹಲಿ: ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರು 1948 ರ ಜನವರಿ 30 ರಂದು ಕೊನೆಯುಸಿರೆಳೆದರು. ಬ್ರಿಟಿಷ್ ಆಡಳಿತದ ಸಂಕೋಲೆಗಳಿಂದ ಸ್ವಾತಂತ್ರ್ಯ ಪಡೆಯಲು ಗಾಂಧಿಜಿ ಹೋರಾಡಿದರು. ಇಂದಿಗೂ ಸಹ ಅವರು ಅಹಿಂಸೆ ಮತ್ತು ಸತ್ಯದ  ಹಾದಿಯಲ್ಲಿ ಸಾಗಲು ಎಲ್ಲರಿಗೂ ಮಾರ್ಗದರ್ಶಕರಾಗಿದ್ದಾರೆ. ಇಂದು ಅವರ ಜನ್ಮದಿನ. ಬೆಳ್ಳಿ ಪರದೆಯ ಈ ಮಹಾತ್ಮನ ಪಾತ್ರವನ್ನು ನಿರ್ವಹಿಸಿದ ನಟರ ಪಟ್ಟಿಯ ಒಂದು ಕಿರುನೋಟ. 
1)ಜೆ.ಎಸ್.ಕಶ್ಯಪ್:1963 ರ ಚಿತ್ರ ನೈನ್ ಅವರ್ಸ್ ಟು ರಾಮ ಚಿತ್ರದಲ್ಲಿ ಮಹಾತ್ಮಾ ಗಾಂಧಿ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು 9 ಗಂಟೆಗಳ ಪೂರ್ವದಲ್ಲಿ ಗಾಂಧಿ ಹತ್ಯೆಗೂ ಮೊದಲು ನಾಥೂರಾಮ್ ಗೋಡ್ಸೆ ಜೀವನವನ್ನು ತೋರಿಸುತ್ತದೆ. ಇಲ್ಲಿ ಹೋರ್ಸ್ಟ್ ಬುಚೋಲ್ಜ್ ನಾಥೂರಾಮ್ ಗೋಡ್ಸೆ ಪಾತ್ರವನ್ನು ನಿರ್ವಹಿಸಿದ್ದಾರೆ.
2) ಬೆನ್ ಕಿಂಗ್ಸ್ಲೆ:1982 ರಲ್ಲಿ ಬಿಡುಗಡೆಯಾದ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರದಲ್ಲಿ ಮಹಾತ್ಮ ಪಾತ್ರದಲ್ಲಿ ಬೆನ್ ಕಿಂಗ್ಸ್ಲೆ ಅದ್ಬುತವಾಗಿ ಅಭಿನಯಿಸಿದ್ದರು.
3)ಆನು ಕಪೂರ್:ಸರ್ದಾರ್ ಚಿತ್ರ 1993 ರಲ್ಲಿ ಹೊರಬಂದಿತು,ಈ ಚಿತ್ರ ಪ್ರಮುಖವಾಗಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜೀವನ ಕುರಿತಾಗಿ   ಚಿತ್ರಿಸಲಾಗಿತ್ತು. ಪರೇಶ್ ರಾವಲ್ ಅವರು ಚಿತ್ರದಲ್ಲಿ ಸರ್ದಾರ್ ಪಟೇಲ್ ಪಾತ್ರವನ್ನು ನಿರ್ವಹಿಸಿದರು ಮತ್ತು ಆಂಧ್ರ ಕಪೂರ ಅವರು  ಗಾಂಧೀಜಿಯ ಪಾತ್ರವನ್ನುನಿರ್ವಹಿಸಿದ್ದರು.
4)ರಜಿತ್ ಕಪೂರ್:1996 ರಲ್ಲಿ ಶ್ಯಾಮ್ ಬೆನೆಗಲ್ ನಿರ್ದೇಶನದ ದಿ ಮೇಕಿಂಗ್ ಆಫ್ ದಿ ಮಹಾತ್ಮಾ ಚಿತ್ರದಲ್ಲಿ ಗಾಂಧೀಜಿಯವರ ಪಾತ್ರದಲ್ಲಿ  ರಜಿತ ಕಪೂರ್ ಅವರ ನಟನೆ ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿತ್ತು ಅಲ್ಲಗೆ ಹಲವು ಪ್ರಶಸ್ತಿಗಳನ್ನು ಈ ಚಿತ್ರ ಪಡೆದುಕೊಂಡಿತ್ತು.
5)ದರ್ಶನ್ ಜರಿವಾಲಾ: ಗಾಂಧಿ, ಮೈ ಫಾದರ್ 2007 ರಲ್ಲಿ ಹೊರಬಂದಿತು ಮತ್ತು ದರ್ಶನ್ ಜರಿವಾಲಾ ಅವರು ಗಾಂಧೀಜಿಯವರ ಪಾತ್ರದಲ್ಲಿ ನಟಿಸಿದರೆ  ಅವರ ಮಗ-ಹರಿಲಾಲ್ ಪಾತ್ರದಲ್ಲಿ ಅಕ್ಷಯ್ ಖನ್ನಾ ನಟಿಸಿದ್ದರು.ಈ ಚಿತ್ರವನ್ನು ಅನಿಲ್ ಕಪೂರ್ ನಿರ್ಮಿಸಿದ್ದರು.
6)ನಾಸೀರುದ್ದೀನ್ ಷಾ: ಹಿರಿಯ ನಟ ನಸೀರುದ್ದೀನ್ ಷಾ ಅವರು 2000 ದಲ್ಲಿ ಬಿಡುಗಡೆಯಾದ ಹೇ ರಾಮ್ ಚಿತ್ರದಲ್ಲಿ ಗಾಂಧೀಜಿಯ ಪಾತ್ರವನ್ನು ಅಭಿನಯಿಸಿದರು. ಈ ಚಲನಚಿತ್ರವು ಭಾರತದ ವಿಭಜನೆ ಮತ್ತು ನಾಥೂರಾಮ್ ಗೋಡ್ಸೆ ಅವರಿಂದ ಮಹಾತ್ಮ ಗಾಂಧಿಯವರ ಹತ್ಯೆ ಘಟನೆಯನ್ನು ಆಧರಿಸಿ ತಯಾರಿಗಿದೆ .
7) ದಿಲೀಪ್ ಪ್ರಭಾವಲ್ಕರ್: ಲಗೆ ರಹೋ ಮುನ್ನಾ ಭಾಯಿ ಚಿತ್ರದಲ್ಲಿ, ದಿಲೀಪ್ ಗಾಂಧೀಜಿಯ ಪಾತ್ರದಲ್ಲಿ ನಟಿಸಿ ಗಮನ ಸೆಳೆದಿದ್ದರು. ಈ ಚಿತ್ರವು 2006 ರಲ್ಲಿ ಹೊರಬಂದಿತು ಮತ್ತು ಸಂಜಯ್ ದತ್ ಅವರು   ವೈದ್ಯ-ಮುನ್ನಾ ಭಾಯಿ ಪಾತ್ರದಲ್ಲಿ ಮಿಂಚಿದ್ದರು.
8) ಶ್ರೀಕಾಂತ್:2009 ರಲ್ಲಿ ಬಿಡುಗಡೆಯಾದ ಮಹಾತ್ಮ ಎಂಬ ತೆಲುಗು ಚಿತ್ರ,ಈ ಚಿತ್ರದಲ್ಲಿ  ನಟ ಶ್ರೀಕಾಂತ್ ಅವರು ಗಾಂಧೀಜಿಯ ಪಾತ್ರವನ್ನು ನಿರ್ವಹಿಸಿದ್ದರು . ಈ ಚಿತ್ರ ರೌಡಿಯೋಬ್ಬನು ಗಾಂಧಿ ಮಾರ್ಗವನ್ನು ಅನುಸರಿಸಿ  ರೂಪಂತರವಾಗುವ ಕಥಾ ಹಂದರವನ್ನು ಹೊಂದಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!