Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಗುಂಡಿ ಮುಚ್ಚುವಂತೆ ಅಟೋ ಚಾಲಕರಿಂದ ಪ್ರತಿಭಟನೆ

ಗುಂಡಿ ಮುಚ್ಚುವಂತೆ ಅಟೋ ಚಾಲಕರಿಂದ ಪ್ರತಿಭಟನೆ

Spread the love

ಹುಬ್ಬಳ್ಳಿ;- ನಗರದಲ್ಲಿ ಸಂಚಾರ ಮಾಡುತ್ತಿರುವ ವಾಹನ ಸವಾರರು, ರಸ್ತೆಯ ಮೇಲೆ ವಾಹನಗಳು ಸಂಚರಿಸುತ್ತವೆಯೋ, ಅಥವಾ ರಸ್ತೆಯೇ ತಗ್ಗು ಗುಂಡಿಗಳಲ್ಲಿವೆಯೋ ಎಂದು ಅನುಮಾನ ಮೂಡಿಸುತ್ತಿದೆ ಕೂಡಲೇ ಈ ‌ರಸ್ತೆಗಳನ್ನು ದುರಸ್ತಿ ಮಾಡಬೇಕು ಎಂದು ಅಟೋ ಚಾಲಕ ಮಾಲೀಕರು ನಗರದಲ್ಲಿ ಪ್ರತಿಭಟನೆ ಮಾಡಿದರು. ಇತ್ತೀಚೆಗೆ ಸುರಿದ ಮಳೆಯಿಂದ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ರಸ್ತೆಯ ಮಧ್ಯೆದಲ್ಲಿ ಆಳವಾದ ಗುಂಡಿಗಳು ನಿರ್ಮಾಣವಾಗಿವೆ. ವಾಹನ ಸವಾರರ ಅನುಕೂಲಕ್ಕಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಮಹಾನಗರ ಪಾಲಿಕೆ ಮುಂದಾಗಬೇಕು. ಇಲ್ಲಿನ ನಿರಂಜನ್ ರಸ್ತೆ ,ಚೆನ್ನಮ್ಮ ವೃತ್ತದಲ್ಲಿ ಗುಂಡಿಗಳು ಬಿದ್ದು ವಾಹನ ಸವಾರರು ಗುಂಡಿಗಳಲ್ಲಿ ಎದ್ದು ಬಿದ್ದು ಜೀವವನ್ನು ಕೈಯಲ್ಲಿ ಹಿಡಿದು ಸಂಚರಿಸುತ್ತಿದ್ದಾರೆ. ಅಲ್ಲದೇ ಈ ರಸ್ತೆಯಲ್ಲಿ ಕುದ್ದು ಅಧಿಕಾರಿಗಳು, ಜನ ಪ್ರತಿನಿಧಿಗಳೇ ಓಡಾಟ ನಡೆಸುತ್ತಾರೆ. ಆದರೆ ಈ ರಸ್ತೆಯಲ್ಲಿ ಬಿದ್ದ ಗುಂಡಿಗಳ ಮುಚ್ಚುವ ಕಾರ್ಯ ನಡೆದಿಲ್ಲವೆಂದರೆ ವಿಪರ್ಯಾಸವೇ ಸರಿ. ಇದರಿಂದ ಪಾಲಿಕೆ ಎಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದೆ ಎಂದು ಸುಳ್ಳು ಹೇಳಿತಿದ್ದಾರೆ. ಮಳೆಯಿಂದ ಕೆಸರುಗದ್ದೆಯಂತೆ ಆಗಿದ್ದ ರಸ್ತೆಗಳೀಗ ಧೂಳುಮ ಯವಾಗಿವೆ. ಕೂಡಲೇ ಅಧಿಕಾರಿಗಳು, ಜನಪ್ರತಿನಿಧಿಗಳು ಜನಗಳ ಕಷ್ಟವನ್ನು ಅರ್ಥ ಮಾಡಿಕೊಂಡು ಉತ್ತಮ ರಸ್ತೆಗಳ ನಿರ್ಮಾಣ ಮಾಡಿ ಜನಗಳಿಗೆ ಅನುಕೂಲ ಮಾಡಿಕೊಡಬೇಕೆಂಬುದ ಆಗ್ರಹಿಸಿದರು.

Check Also

‘ಸರ್ಕಾರಿ ನೌಕರ’ರಿಗೆ ಗುಡ್ ನ್ಯೂಸ್

Spread the loveತಮಿಳುನಾಡು : ರಾಜ್ಯದ ಸರ್ಕಾರಿ ಕಚೇರಿಗಳು 2021ರ ಜನವರಿ 1ರಿಂದ ವಾರದಲ್ಲಿ ಐದು ದಿನ ಮಾತ್ರವೇ ಕೆಲಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!