Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಗುಡುಗು ಸಹಿತ ಮಳೆ : ಕೆರೆಯಂತಾದ ರಸ್ತೆ ಗುಂಡಿಗಳು

ಗುಡುಗು ಸಹಿತ ಮಳೆ : ಕೆರೆಯಂತಾದ ರಸ್ತೆ ಗುಂಡಿಗಳು

ಹುಬ್ಬಳ್ಳಿ:- ನಗರದಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಗುಡುಗು – ಸಿಡಿಲು ಮಿಶ್ರಿತ ಮಳೆಗೆ ಗಟಾರುಗಳು ಹಾಗೂ ಒಳಚರಂಡಿಗಳು ತುಂಬಿ ಹರಿದ ಪರಿಣಾಮ ಮಳೆ ನೀರೆಲ್ಲಾ ರಸ್ತೆ ಮೇಲೆ ಹರಿಯಿತು. ಪರಿಣಾಮ ರಸ್ತೆ ಗುಂಡಿಗಳು ಮತ್ತೆ ಬಾಯಿ ತೆರೆದಿವೆ. ಮಂಗಳವಾರ ಸುರಿದ ಬಾರಿ ಮಳೆಗೆ ಒಳಚರಂಡಿಗಳು ಮೊದಲೇ ಕಟ್ಟಿಕೊಂಡಿದ್ದರಿಂದ ಮಳೆ ನೀರು ಸೇರಿದಂತೆ ಕೊರಚೆ ನೀರು ಸರಿಯಾಗಿ ಹರಿಯಲು ಸ್ಥಳಾವಕಾಶವಿಲ್ಲದೇ ರಸ್ತೆ ಮೇಲೆ ಹರಿದವು. ಇದರಿಂದಾಗಿ ದಾಜಿಬಾನಪೇಟೆಯ ತುಳಜಾ ಭವಾನಿ ಗುಡಿ ಹತ್ತಿರದ ವೃತ್ತದಲ್ಲಿ ಮೊಣಕಾಲು ವರೆಗೂ ನೀರು ನಿಂತು ಪಲ್ಲಕ್ಕಿ ಉತ್ಸವ ಮೆರವಣಿಗೆಗೆ ಅಡ್ಡಿ ಉಂಟುಮಾಡಿತ್ತು. ಅಲ್ಲದೇ ಈ ಸಂದರ್ಭದಲ್ಲಿ ಕೇಲವರ ಮೊಬೈಲ್, ಹಣ, ಪರ್ಸ್ಗಳು,ಪರ್ಸ್ ಗಳು ನೀರಿನಲ್ಲಿ ತೇಲಿಕೊಂಡು ಹೋದವು. ಇನ್ನೂ ನಗರದ ಬಹುತೇಕ ಕಡೆ ರಸ್ತೆಗಳಲ್ಲಿ ತಗ್ಗು – ಗುಂಡಿಗಳು ಮತ್ತೆ ಬಿದ್ದಿದ್ದು, ಅದರಲ್ಲಿ ಮಳೆ ನೀರು ನಿಂತು ಕೊಳದಂತಾಗಿದ್ದವು. ಇದರಿಂದ ವಾಹನ ಸವಾರರು, ಪಾದಚಾರಿಗಳು, ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಗುತ್ತಿದ್ದವರು ಹರಸಾಹಸ ಪಡಬೇಕಾಯಿತು.‌ ವಿಜಯದಶಮಿ ನಿಮಿತ್ತ ಪಲ್ಲಕ್ಕಿ ಉತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವರು ರಭಸವಾಗಿ ಸುರಿಯುತ್ತಿದ್ದ ಮಳೆ ಲೆಕ್ಕಿಸದೇ ಮುಂದೆ ಸಾಗಿದರು.‌

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!