Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಚಿಕ್ಕನಗೌಡರ ಬೆಂಬಲಿಸಿ ಅಭಿವೃದ್ಧಿಗೆ ಕೈ ಜೋಡಿಸಿ: ಬಾಬುಗೌಡ ಪಾಟೀಲ ..

ಚಿಕ್ಕನಗೌಡರ ಬೆಂಬಲಿಸಿ ಅಭಿವೃದ್ಧಿಗೆ ಕೈ ಜೋಡಿಸಿ: ಬಾಬುಗೌಡ ಪಾಟೀಲ ..

Spread the love

ಹುಬ್ಬಳ್ಳಿ: ಕುಂದಗೋಳ ವಿಧಾನಸಭಾ ಉಪಸಮರದಲ್ಲಿ ಅಭಿವೃದ್ಧಿ ಹರಿಕಾರ, ಭಾರತೀಯ ಜನತಾ ಪಾರ್ಟಿಯ ಜನಪ್ರೀಯ ನಾಯಕ ಎಸ್.ಐ.ಚಿಕ್ಕನಗೌಡರ ಅವರಿಗೆ ಮತ ನೀಡುವ ಮೂಲಕ ಎಸ್.ಐ.ಚಿಕ್ಕನಗೌಡರ ಅವರನ್ನು ಮತ್ತೊಮ್ಮೆ ಕುಂದಗೋಳ ಕ್ಷೇತ್ರದ ಶಾಸಕರನ್ನಾಗಿ‌ ಆಯ್ಕೆ ಮಾಡಬೇಕೆಂದು ಕುಂದಗೋಳ ತಾಲೂಕಿನ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾದ ಬಾಬುಗೌಡ ಪಾಟೀಲ ಒತ್ತಾಯಿಸಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂದಗೋಳ ಕ್ಷೇತ್ರಕ್ಕೆ ಅಭಿವೃದ್ಧಿ ಯೋಜನೆಗಳು ಅವಶ್ಯವಾಗಿದ್ದು, ಪೂರಕ ಯೋಜನೆಗಳಿಂದ ಸಾರ್ವಜನಿಕ ಹಿತಾಸಕ್ತಿ ಕಾಪಾಡುವ ನಾಯಕ ಎಸ್.ಐ.ಚಿಕ್ಕನಗೌಡರ ಅವರಿಗೆ ಕುಂದಗೋಳ ಮತಕ್ಷೇತ್ರದ ಜನತೆ ತಮ್ಮ ಅಮೂಲ್ಯವಾದ ಮತವನ್ನು ನೀಡುವ ಮೂಲಕ ತಮ್ಮ ಸೇವೆಗೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.2013ರಲ್ಲಿ ಸಿದ್ಧರಾಮಯ್ಯನವರು ಸಿಎಂ ಆಗಿದ್ದಾಗ ಕುಂದಗೋಳ ಕ್ಷೇತ್ರದಲ್ಲಿ ದಿ.ಸಿ.ಎಸ್.ಶಿವಳ್ಳಿಯವರು ಶಾಸಕರಾಗಿದ್ದರೂ ಆದರೇ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಸಿದ್ಧರಾಮಯ್ಯನವರ ಮಾಡಿಲ್ಲ. ಆದರೇ ಎಸ್.ಐ.ಚಿಕ್ಕನಗೌಡರ ಶಾಸಕರಾಗಿದ್ದ ಸಂದರ್ಭದಲ್ಲಿ ಯಡಿಯೂರಪ್ಪನವರು ಸಿಎಂ ಆಗಿದ್ದರು ಆಗ ಹಲವಾರು ಜನಪರ‌ ಯೋಜನೆಗಳನ್ನು ಕುಂದಗೋಳ ಕ್ಷೇತ್ರಕ್ಕೆ ತರುವ ಮೂಲಕ ಕುಂದಗೋಳ ಅಭಿವೃದ್ದಿಗೆ ಶ್ರಮಿಸಿದ್ದಾರೆ. ಸಾರ್ವಜನಿಕರ ಪ್ರತಿಯೊಂದು ಸಮಸ್ಯೆಗಳಿಗೆ ಪೂರಕವಾಗಿ ಸಹೃದಯತೆಯಿಂದ ಸ್ಪಂಧಿಸುವ ಎಸ್.ಐ.ಚಿಕ್ಕನಗೌಡರ ಈ ಬಾರಿ ಶಾಸಕರಾಗುವುದು ನಿಶ್ಚಿತವಾಗಿದೆ. ಈ ಬಾರಿ ಫಲಿತಾಂಶದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಯಡಿಯೂರಪ್ಪ ಅವರು ಖಂಡಿತವಾಗಿ ಸಿಎಂ ಅಗಲಿದ್ದಾರೆ. ಜನರು ಸ್ವಯಂ ಪ್ರೇರಣೆಯಿಂದ ಎಲ್ಲ ವರ್ಗದ ಜನರು ಭಾರತೀಯ ಜನತಾ ಪಾರ್ಟಿಯ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ದೇಶದಲ್ಲಿ ಮೋದಿ ಅಲೆ‌ ಇರುವುದರಿಂದ ಬಿಜೆಪಿ ಅಭ್ಯರ್ಥಿ ಚಿಕ್ಕನಗೌಡರ ಗೆಲವು ನೂರಕ್ಕೆ‌ ನೂರರಷ್ಟು ಯಶಸ್ವಿಯಾಗಲಿದೆ. ಈಗಾಗಲೇ ಕುಂದಗೋಳ ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಬೆಂಬಲ ಬಿಜೆಪಿಗೆ‌ ದೊರತಿದ್ದು, ಜನರು ಭಾರತೀಯ ಜನತಾ ಪಾರ್ಟಿ ಅಧಿಕಾರಕ್ಕೆ ತರುವ ಆಶಾ ಭಾವನೆ ಹೊಂದಿದ್ದಾರೆ. ಎಸ್‌.ಐ.ಚಿಕ್ಕನಗೌಡರ ಅವರು, ಮಲಪ್ರಭಾ ನದಿಯಿಂದ ಕುಂದಗೋಳ ತಾಲೂಕಿನ ಯರಗುಪ್ಪಿ, ಚಿಕ್ಕನೇರ್ತಿ, ಹಿರೇನೇರ್ತಿ, ರೊಟ್ಟಿಗವಾಡ, ನಾರಾಯಣಪೂರ, ಬಸಾಪೂರ, ಬೆನಕನಹಳ್ಳಿ ಸೇರಿದಂತೆ ಇತರ ಗ್ರಾಮಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರಕಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರು ಸಿಎಂ ಆಗಿದ್ದ ಸಂದರ್ಭದಲ್ಲಿ ಚಿಕ್ಕನಗೌಡರ ನೇತೃತ್ವದಲ್ಲಿ ಏಂಟನೂರು ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಬಿಜೆಪಿ ಮಾಡಿದೆ. ಹುಬ್ಬಳ್ಳಿ-ಲಕ್ಷ್ಮೇಶ್ವರ ರಸ್ತೆ ನಿರ್ಮಾಣ, ಕುಂದಗೋಳದ ಸವಾಯಿ ಗಂಧರ್ವ ಹಾಲ ನಿರ್ಮಾಣ ಹೀಗೆ ಹತ್ತು ಹಲವಾರು ಜನಪರ ಕಾರ್ಯಗಳನ್ನು ಬಿಜೆಪಿ ಮಾಡಿದೆ ಅದೇ ರೀತಿಯಾಗಿ ಜನರು ಈ ಬಾರಿ ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಪಣತೊಟ್ಟಿದ್ದಾರೆ ಎಂದು ಅವರು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಮಾರುತಿ ಕಲಘಟಗಿ,ಮುತ್ತು ಚಕಾರಿ, ಎಂ.ಎನ್‌.ಹುತ್ತನಗೌಡರ, ಯಲ್ಲಪ್ಪ ಶಿಗ್ಗಾಂವಿ ಇದ್ದರು.

Check Also

ಹುಬ್ಬಳ್ಳಿಯಲ್ಲಿ ಮೀತಿಮಿರಿದ ಕಳ್ಳರ ಹಾವಳಿ: ಗಾಜು ಒಡೆದು ಉಪಕರಣ ದೋಚುವ ಕಳ್ಳರು

Spread the loveಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಕಳ್ಳತನ ಪ್ರಕರಣಗಳು ದಿನದಿಂದ‌ ದಿನಕ್ಕೆ ಹೆಚ್ಚಾಗುತ್ತಿದ್ದು,ಇಷ್ಟು ದಿನ ಸರಗಳ್ಳತನ, ಬೈಕ್ ಕಳ್ಳತನ, ಕಾರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!