Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಜ್ಯೂನಿಯರ್ ವಿಷ್ಣು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ

ಜ್ಯೂನಿಯರ್ ವಿಷ್ಣು ಹೃದಯ ಶಸ್ತ್ರಚಿಕಿತ್ಸೆಗೆ ಸಹಾಯ ಹಸ್ತ

Spread the love

ಹುಬ್ಬಳ್ಳಿ: ಖ್ಯಾತ ಡಾ.ವಿಷ್ಣುವರ್ಧನ್ ಅವರ ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತ ರಾದ ಎಂ.ಡಿ.ಅಲಿ ಅವರ ಹೃದಯ ಶಸ್ತ್ರ ಚಿಕಿತ್ಸೆಯ ಸಹಾಯಕ್ಕಾಗಿ ರಾಜ್ ವಿಷ್ಣು ಸವಿನೆನಪು ಕಾರ್ಯಕ್ರಮವನ್ನು ಇಲ್ಲಿನ ನ್ಯೂ ಕಾಟನ್ ಮಾರ್ಕೆಟ್ ನ ಸಾಂಸ್ಕೃತಿಕ ಭವನದಲ್ಲಿ ಫೆ.೨೬ ರಂದು ಸಂಜೆ ೬:೩೦ ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಹಜರತಲಿ ದೊಡ್ಡಮನಿ ಹೇಳಿದರು.ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ್ಯೂನಿಯರ್ ವಿಷ್ಣುವರ್ಧನ್ ಎಂದೇ ಖ್ಯಾತರಾದ ಎಂ.ಡಿ.ಅಲಿ ಕಳೆದ ೩೫ ವರ್ಷಗಳಿಂದ ವಿಷ್ಣುವರ್ಧನ್ ಅವರ ವೇಷಭೂಷಣ ತೊಟ್ಟು ಅಭಿನಯ ಮಾಡುವದಲ್ಲದೇ ೩೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇದರಿಂದಲ್ಲೇ ಜನತೆಯ ಮೆಚ್ಚಿಗೆಗಳಾಗಿದ್ದಾರೆ. ಇಂತಹ ಎಂ.ಡಿ.ಅಲಿ ಯವರು ಇದೀಗ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದು, ಹೃದಯದ ನಾಲ್ಕು ರಂಧ್ರಗಳಲ್ಲಿ ಎರಡು ರಂಧ್ರಗಳು ಬ್ಲಾಕ್ ಆಗಿ ಬಹಳ ಅನಾರೋಗ್ಯದಿಂದ ಬಳಲುತ್ತಿದ್ದು, ಡಾಕ್ಟರ್ ಹೃದಯ ಶಸ್ತ್ರಚಿಕಿತ್ಸೆ ಮಾಡಲು ಹೇಳಿದ್ದಾರೆ. ಆದರೆ ಅಷ್ಟು ಹಣದ ಅಭಾವದ ಕಾರಣ ಅವರು ಸಹಾಯ ಹಸ್ತ ಕೇಳಿದ್ದಾರೆ. ಸಹಾಯ ಮಾಡುವವರು ಜ್ಯೂನಿಯರ್ ವಿಷ್ಣುವರ್ಧನ್ (ಎಂ.ಡಿ.ಅಲಿ) ೯೮೪೫೦೦೯೮೭೨ ಗೆ ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.ಪತ್ರಿಕಾಗೋಷ್ಠಿ ಬಸವರಾಜ ತೇರದಾಳ, ವೀರಣ್ಣಾ ನೀರಲಗಿ, ಎಮ್.ಎಮ್.ನದಾಫ, ಎನ್.ಎಪ್.ನದಾಫ ಇದ್ದರು‌.

Check Also

ಬ್ಯಾಂಕ್‌ಗಳ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ

Spread the loveನವದೆಹಲಿ: ನವರಾತ್ರಿ ಸಂದರ್ಭದಲ್ಲಿ ಸಾಲಗಾರರಿಗೆ ಕೇಂದ್ರ ಸರ್ಕಾರ ಶುಭ ಸುದ್ದಿ ನೀಡಿದೆ. ಮಾರ್ಚ್ 1ರಿಂದ ಆಗಸ್ಟ್ 31ರವರೆಗಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!