Breaking News
Hiring Reporter’s For more Information Contact Above Number 876 225 4007 . Program producer
Home / ಕ್ರೀಡೆ / ಕ್ರಿಕೆಟ್ / ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭರ್ಜರಿ ಏರಿಕೆ ಕಂಡ ಮಯಾಂಕ್- ರೋಹಿತ್ .

ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಭರ್ಜರಿ ಏರಿಕೆ ಕಂಡ ಮಯಾಂಕ್- ರೋಹಿತ್ .

ಮುಂಬೈ: ನೂತನ ಐಸಿಸಿ ಟೆಸ್ಟ್​ ರ‍್ಯಾಂಕಿಂಗ್ ಪ್ರಕಟವಾಗಿದ್ದು, ದಕ್ಷಿಣ ಆಫ್ರಿಕಾ ​ವಿರುದ್ಧದ ಮೊದಲ ಟೆಸ್ಟ್​ನಲ್ಲಿ​ ಅಬ್ಬರಿಸಿದ್ದ ಮಯಾಂಕ್​ ಹಾಗೂ ರೋಹಿತ್​ ರ‍್ಯಾಂಕಿಂಗ್​ನಲ್ಲಿ ಭಾರಿ ಏರಿಕೆ ಕಂಡಿದ್ದಾರೆ.ಆರಂಭಿಕನಾಗಿ ಕಣಕ್ಕಿಳಿದ ಪಂದ್ಯದಲ್ಲೇ ಎರಡೂ ಇನ್ನಿಂಗ್ಸ್​ನಲ್ಲೂ ಶತಕ ಸಿಡಿಸಿದ್ದ ರೋಹಿತ್​ ಶರ್ಮಾ (176+127) ರ‍್ಯಾಂಕಿಂಗ್​ನಲ್ಲಿ 36 ಸ್ಥಾನ ಜಿಗಿತ ಕಂಡು 17ನೇ ಸ್ಥಾನಕ್ಕೇರಿದ್ದಾರೆ. ದ್ವಿಶತಕ ಸಿಡಿಸಿದ್ದ ಮತ್ತೊಬ್ಬ ಆರಂಭಿಕ ಬ್ಯಾಟ್ಸ್​ಮನ್ ಕನ್ನಡಿಗ​ ಮಯಾಂಕ್​ ಅಗರ್​ವಾಲ್ (215) 38 ಸ್ಥಾನ ಜಿಗಿತ ಕಂಡು 25ನೇ ಸ್ಥಾನಕ್ಕೇರಿದ್ದಾರೆ. ಆದರೆ ಎರಡೂ ಇನ್ನಿಂಗ್ಸ್​ನಲ್ಲಿ 20, 31 ರನ್ ​ಗಳಿಸಿದ್ದ ಕೊಹ್ಲಿ 900 ಅಂಕಗಳಿಂದ ಕೆಳಗಿಳಿದಿದ್ದಾರೆ. ಆದರೆ ಎರಡನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಕೊಹ್ಲಿ ಇದೀಗ ಮೊದಲ ಸ್ಥಾನದಲ್ಲಿರುವ ಸ್ಟಿವ್ ಸ್ಮಿತ್​ಗಿಂತ 38 ಅಂಕ ಹಿಂದಿದ್ದಾರೆ.ಇನ್ನು ಬೌಲರ್​ಗಳಲ್ಲಿ ಅಶ್ವಿನ್​ 14ನೇ ಸ್ಥಾನದಿಂದ 10ನೇ ಸ್ಥಾನಕ್ಕೆ, ಶಮಿ 18ರಿಂದ 14ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಜಡೇಜಾ ಆಲ್​ರೌಂಡರ್​ ವಿಭಾಗದಲ್ಲಿ ಶಕಿಬ್​ ಅಲ್​ ಹಸನ್​ ಹಿಂದಿಕ್ಕಿ 2ನೇ ಸ್ಥಾನಕ್ಕೇರಿದ್ದಾರೆ.

Share

About Shaikh BIG TV NEWS, Hubballi

Check Also

ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಕ್ರಿಕೆಟಿಗ.

ರಾವಲ್ಪಿಂಡಿ : ಪಾಕಿಸ್ತಾನದ ವಿರುದ್ಧ ರಾವಲ್ಪಿಂಡಿಯಲ್ಲಿ ಟಿ20 ಸರಣಿ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಮಾಜಿ ನಾಯಕ ಹಾಗೂ ಅನುಭವಿ ಆಲ್​ರೌಂಡರ್ ಎಲ್ಟನ್ ಚಿಗುಂಬುರ …

Leave a Reply

Your email address will not be published. Required fields are marked *

error: Content is protected !!