Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ಟ್ವಿಟರ್​ ಇಂಡಿಯಾಗೆ ಚುನಾವಣಾ ಆಯೋಗದ ಖಡಕ್ ಸೂಚನೆ

ಟ್ವಿಟರ್​ ಇಂಡಿಯಾಗೆ ಚುನಾವಣಾ ಆಯೋಗದ ಖಡಕ್ ಸೂಚನೆ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಇನ್ನೂ ಒಂದು ಹಂತದ ಮತದಾನ ಬಾಕಿಯಿರುವಾಗಲೇ ಯಾರು ದೆಹಲಿ ಗದ್ದುಗೆ ಏರ್ತಾರೆ ಅನ್ನೋ ಬಗ್ಗೆ ಬಿಸಿಬಿಸಿ ಚರ್ಚೆಗಳು ನಡೆಯುತ್ತಿವೆ. ಜೊತೆಗೆ ಟ್ವಿಟರ್​ನಲ್ಲೂ ಈ ಬಗ್ಗೆ ಸಾಕಷ್ಟು ಸಮೀಕ್ಷೆಗಳ ಟ್ವೀಟ್ಸ್​ ಹರಿದಾಡುತ್ತಿವೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗವು ಟ್ವಿಟರ್ ಇಂಡಿಯಾಗೆ ಖಡಕ್ ಸಂದೇಶ ರವಾನಿಸಿದೆ. ನೆಟ್ಟಿಗರು ಚುನಾವಣಾ ಸಮೀಕ್ಷೆ ಬಗ್ಗೆ ಪ್ರಕಟಿಸಿದ ಎಲ್ಲಾ ಟ್ವೀಟ್ಸ್​ಗಳನ್ನು ಡಿಲಿಟ್ ಮಾಡುವಂತೆ ಟ್ವಿಟರ್​ ಇಂಡಿಯಾಗೆ ಹೇಳಿದೆ. ಚುನಾವಣೆ ಮುಕ್ತಾಯಗೊಳ್ಳುವ ಮೊದಲು ಯಾವುದೇ ಫಲಿತಾಂಶದ ಸಮೀಕ್ಷೆ ಪ್ರಕಟಿಸಬಾರದು ಅಂತಾ ಚುನಾವಣಾ ಆಯೋಗ ಈ ಮೊದಲು ಕಡ್ಡಿ ಮುರಿದಂತೆ ಹೇಳಿತ್ತು. ಆದ್ರೂ ಟ್ವಿಟರ್​ ಬಳಕೆದಾರರು ಸಮೀಕ್ಷೆ ಬಗ್ಗೆ ಪೋಸ್ಟ್ ಮಾಡಿದ್ದರು. ಸೆಕ್ಷನ್​ 126 ‘ಎ’ ಪ್ರಕಾರ ಚುನಾವಣೆ ಮುಗಿಯದ ಹೊರತು ಯಾವ ವ್ಯಕ್ತಿಯೂ ಸಮೀಕ್ಷೆ ನಡೆಸಬಾರದು ಹಾಗೂ ಪ್ರಕಟಗೊಳಿಸಬಾರದು. ಒಂದು ವೇಳೆ ಇದರ ವಿರುದ್ಧವಾಗಿ ನಡೆದುಕೊಂಡ್ರೆ 2 ವರ್ಷ ಜೈಲು ಶಿಕ್ಷೆ ಅಥವಾ ದಂಡ ವಿಧಿಸುವ ಶಿಕ್ಷೆಯೂ ಕೂಡ ಈ ನಿಯಮ ಒಳಗೊಂಡಿದೆ. ಈಗ ಚುನಾವಣಾ ಆಯೋಗ ಈ ಆದೇಶ ನೀಡಿರುವುದರಿಂದ ಸಮೀಕ್ಷೆ ಬಗ್ಗೆ ನೆಟ್ಟಿಗರು ಪ್ರಕಟಿಸಿದ ಎಲ್ಲಾ ಟ್ವೀಟ್​ಗಳನ್ನು ಡಿಲಿಟ್ ಮಾಡುವ ಹೊಣೆಗಾರಿಕೆ ಟ್ವಿಟರ್ ಮೇಲೆ ಬಿದ್ದಿದೆ

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!