Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಖಾಕಿ ಮಾಸ್ಟರ್ ಪ್ಲಾನ್..

ಡ್ರಗ್ಸ್ ಮಾಫಿಯಾ ಮಟ್ಟ ಹಾಕಲು ಖಾಕಿ ಮಾಸ್ಟರ್ ಪ್ಲಾನ್..

ಅತ್ತ ರಾಪರ್ ಚಂದನ್ ಶೆಟ್ಟಿ ಗಾಂಜಾ ಸಾಂಗ್ ಹಾಡಿನ ರಾದ್ಧಾಂತ ಈಗ ತಣ್ಣಗಾಗಿದೆ. ಆದ್ರೇ, ಹುಬ್ಬಳ್ಳಿ-ಧಾರವಾಡದಲ್ಲೂ ಗಾಂಜಾ, ಡ್ರಗ್ಸ್ ಜಾಲ ಇರೋದೇನೂ ಸುಳ್ಳಲ್ಲ. ಏನೇ ಮುಂಜಾಗರೂಕತಾ ಕ್ರಮಕೈಗೊಂಡ್ರೂ ಯುವಕರೂ ಇದರ ಬಲೆಗೆ ಬೀಳೋದನ್ನ ತಪ್ಪಿಸೋದಕ್ಕಾಗ್ತಿಲ್ಲ. ಆದ್ರೀಗ ಹುಬ್ಬಳ್ಳಿ-ಧಾರವಾಡ ಪೊಲೀಸರು ಮಾದಕ ದ್ರವ್ಯ ಜಾಲಕ್ಕೆ ಕೊಳ್ಳಿ ಇಡೋಕೆ ಮುಂದಾಗಿದಾರೆ.
ಧಮ್ ಮಾರೋ ಧಮ್.. ಅಂತ ಹಾಡು ಕೇಳೋಕೆ ಚೆಂದಗಿದ್ರೂ ಧಮ್ ಜಾಸ್ತಿ ಹೊಡೆದ್ರೇ ಹೊಗೆ ಹಾಕಿಸಿಕೊಳ್ಳೋದ್ ಗ್ಯಾರಂಟಿ. ಅರಿವಿನ ಕೊರತೆಯೋ ವ್ಯಸನದ ಸೆಳೆತವೋ ಇಲ್ಲ ಪ್ರಭಾವವೋ ಯುವಕರು ಮಾದಕ ವ್ಯಸನಿಗಳಾಗ್ತಿರೋದು ಸುಳ್ಳೇನಲ್ಲ. ಹುಬ್ಬಳ್ಳಿ-ಧಾರವಾಡದಲ್ಲೂ ಇದರ ಜಾಲ ಇರೋದನ್ನ ಪೊಲೀಸರೇ ಒಪ್ಕೋತಾರೆ.  ಅದಕ್ಕಾಗಿಯೇ ಈಗ ಪ್ರತಿ ಶಾಲೆ-ಕಾಲೇಜುಗಳಿಗೆ ತೆರಳಿ ಈ ಬಗ್ಗೆ ಪೊಲೀಸರು ಜಾಗೃತಿ ಮೂಡಿಸ್ತಿದಾರೆ. ಯಾವುದಾದರೂ ವಿದ್ಯಾರ್ಥಿ ಅಂತರ್ಮುಖಿಯಾಗಿದ್ರೇ, ಒಬ್ಬನೇ ಇರೋದ್ ಬಯಸ್ತಿದ್ರೇ, ತುಂಬಾ ಸೈಲೆಂಟಾಗಿದ್ರೇ, ಡಲ್ಲಾಗಿರ್ತಿದ್ರೇ ಏನೋ ತಪ್ರು ನಡೀತಿದೆ ಅಂತಾನೇ ಅರ್ಥ. ಅಂಥ ವಿದ್ಯಾರ್ಥಿ ಕಂಡ್ರೇ ಬರೀ ಪೋಷಕರಿಗಷ್ಟೇ ಅಲ್ಲ, ಪೊಲೀಸರ ಗಮನಕ್ಕೂ ತನ್ನಿ ಅಂತ ವಿದ್ಯಾರ್ಥಿಗಳಿಗೆ ತಿಳುವಳಿಕೆ ಮೂಡಿಸ್ತಿದಾರೆ. ವಿದ್ಯಾರ್ಥಿ ಇಲ್ಲ, ಯಾರೇ ಆಗಲಿ ಡ್ರಗ್ಸ್ ಮಾಫಿಯಾ ಕುರಿತಂತೆ ಪೊಲೀಸರಿಗೆ ಮಾಹಿತಿ ನೀಡಿದ್ರೇ ಅಂಥವರ ಬಗೆಗೆ ಗೌಪ್ಯತೆ ಕಾಪಾಡೋ ಬಗ್ಗೆ ಪೊಲೀಸರು ವಾಗ್ದಾನ ಕೂಡ ಮಾಡಿದಾರೆ. ಸಾಮಾಜಿಕ ಅನಿಷ್ಟಗಳಾದ ಮಟ್ಕಾ, ಗ್ಯಾಬ್ಲಿಂಗ್, ವೇಶ್ಯಾವಾಟಿಕೆ, ಮಾದಕ ವ್ಯಸನಗಳೆಲ್ಲ ಸಾಮಾಜಿಕ ಅನಿಷ್ಟಗಳಾಗಿವೆ. ಇದರ ವಿರುದ್ಧ ಅವಳಿನಗರ ಪೊಲೀಸರು ಸಮರ ಸಾರಿದಾರೆ. ಅದಕ್ಕಾಗಿ ಪೊಲೀಸ್ ಬೀಟ್ ವ್ಯವಸ್ಥೆಗೆ ಇನ್ನಷ್ಟು ಚುರುಕು ಮೂಡಿಸ್ತಿದಾರೆ.
ಎಂ.ಎನ್ ನಾಗರಾಜ, ನಗರ ಪೊಲೀಸ್ ಆಯುಕ್ತ ಡ್ರಗ್ಸ್ ಮಾಫಿಯಾ ಹತ್ತಿಕ್ಕೋದು ಪೊಲೀಸರಿಗೆ ದೊಡ್ಡ ಸವಾಲು. ಅದಕ್ಕಾಗಿಯೇ ಪ್ರತಿ ಠಾಣೆಯಿಂದಲೂ ಕೆಲವರನ್ನ ಆಯ್ಕೆ ಮಾಡಲಾಗಿದೆ. ಪ್ರತಿ ವಾರ್ಡ್ ಗೆ 10 ಮಂದಿಯನ್ನ ಇದಕ್ಕಾಗಿ ಆಯ್ಕೆ ಮಾಡಿದ್ದು, ಡ್ರಗ್ಸ್ ಮಾಫಿಯಾ ಬಗ್ಗೆ ಸುಳಿವು ಸಿಕ್ರೇ ಹೇಗೆ ಪೊಲೀಸರಿಗೆ ಮಾಹಿತಿ ನೀಡ್ಬೇಕು ಅಂತ ಬೀಟ್ ಸಿಸ್ಟಂನಲ್ಲಿ ಇನ್ಫಾರ್ಮ್ ಗಳಿಗೆ ಪೊಲೀಸ್ ಕಮೀಷನರ್ ಎಂ.ಎನ್ ನಾಗರಾಜ ತರಬೇತಿ ನೀಡಿದಾರೆ. ಪ್ರತಿ ವಾರ್ಡ್ ಬೀಟ್ ಗೆ 10 ಮಂದಿ ಇರ್ತಾರೆ. ಅಂದ್ರೇ ಹುಬ್ಬಳ್ಳಿ-ಧಾರವಾಡ ಸೇರಿ 700 ಮಂದಿಯನ್ನ ಗುರುತಿಸಲಾಗಿದೆ. ವಿಶೇಷವಾಗಿ ಮಾದಕ ವಸ್ತುಗಳಾದ ಗಾಂಜಾ, ಚರಸ್, ಕೋಪಿಯಂ, ಬ್ರೌನ್ ಶುಗರ್ ವ್ಯಸನ, ಮಾರಾಟದ ಬಗ್ಗೆ ಸುಳಿವು ಸಿಕ್ರೇ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡುವ ಬಗ್ಗೆ ಜನಸಂಪರ್ಕ ಸಭೆಯಲ್ಲಿ ಇವರಿಗೆಲ್ಲ ತರಬೇತಿ ನೀಡಿದಾರೆ. ಹಾಗೇ ಸಭೆ ನಡೆಸೋವಾಗಲೇ ಕೆಲವರು ಡ್ರಗ್ಸ್ ಮಾಫಿಯಾ ಬಗೆಗೆ ಮಾಹಿತಿ ಕೂಡ ನೀಡಿದಾರೆ. ಅದನ್ನ ಹತ್ತಿಕ್ಕಲು ಪೊಲೀಸರು ಈಗಾಗಲೇ ಮುಂದಾಗಿದಾರೆ. ಎಲ್ಲ ಶಾಲೆಗಳು-ಅದರಲ್ಲೂ ಇಂಜಿನಿಯರಿಂಗ್, ಮೆಡಿಕಲ್ ಕಾಲೇಜುಗಳಲ್ಲೂ ಜಾಗೃತಿ ಮೂಡಿಸಲಾಗ್ತಿದೆ. ಆದ್ರೇ, ಶಾಲಾ-ಕಾಲೇಜುಗಳಲ್ಲಿ ಮಾದಕ ದ್ರವ್ಯ ಪ್ರಕರಣ ದಾಖಲಾಗಿಲ್ಲ. ಕೆಲ ರಿಮೋಟ್ ಏರಿಯಾಗಳಲ್ಲಿ ಸಣ್ಣದಾಗಿ ಗಾಂಜಾ ಮಾರಾಟ ಜಾಲವಿದೆ. ಒಂದು ವರ್ಷದಲ್ಲಿ ಆರಕ್ಕೂ ಹೆಚ್ಚು ಡ್ರಗ್ಸ್ ಮಾರಾಟ ಕೇಸ್ ಗಳನ್ನ ಪತ್ತೆ ಹಚ್ಚಲಾಗಿದೆ. ಇವೆಲ್ಲ ಕೇಸ್ ಗಳಲ್ಲೂ ಬೇರೆಡೆಯಿಂದ ಡ್ರಗ್ಸ್ ತಂದು ಇಲ್ಲಿ ಮಾರಾಟ ಮಾಡಲಾಗ್ತಾಯಿತ್ತು.
ಎಂ.ಎನ್ ನಾಗರಾಜ, ನಗರ ಪೊಲೀಸ್ ಆಯುಕ್ತ
ಮಾದಕ ವ್ಯಸನ ಬರೀ ಮನುಷ್ಯರನ್ನಷ್ಟೇ ಅಲ್ಲ ಇಡೀ ಮನೆತನಗಳನ್ನೇ ಮುರಿದು ಬಿಡುತ್ತೆ. ಹಾಗಾಗಿ ಪೊಲೀಸರು ಈ ಸಾಮಾಜಿಕ ಅನಿಷ್ಟಗಳನ್ನ ಮಟ್ಟ ಹಾಕ್ತಿದಾರೆ. ಇದರಲ್ಲಿ ಜನರ ಪಾತ್ರವೂ ಅಷ್ಟೇ ಮುಖ್ಯ..

Share

About Shaikh BIG TV NEWS, Hubballi

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!