Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ತಮಿಳುನಾಡಿನಲ್ಲಿ ಮದುವೆಗೆ 5 ಲೀಟರ್​ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತ

ತಮಿಳುನಾಡಿನಲ್ಲಿ ಮದುವೆಗೆ 5 ಲೀಟರ್​ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತ

ತಮಿಳುನಾಡಿನಲ್ಲಿ ಮದುವೆಗೆ 5 ಲೀಟರ್​ ಪೆಟ್ರೋಲ್​ ಗಿಫ್ಟ್​ ಕೊಟ್ಟ ಸ್ನೇಹಿತ
ಕುಡಲೋರ್​ (ಸೆ. 17): ಸ್ನೇಹಿತರದ್ದೋ, ಕುಟುಂಬದವರದ್ದೋ ಮದುವೆಗೆ ಯಾವ ಉಡುಗೊರೆ ಕೊಡಬೇಕೆಂಬುದೇ ಹಲವರ ತಲೆಬಿಸಿ. ಇಲ್ಲೊಬ್ಬ ತನ್ನ ಗೆಳೆಯನ ಮದುವೆಗೆ 5 ಲೀಟರ್​ ಪೆಟ್ರೋಲ್​ ಉಡುಗೊರೆ ನೀಡುವ ಮೂಲಕ ಶುಭಾಶಯ ಕೋರಿದ್ದಾನೆ.
ಪೆಟ್ರೋಲ್​, ಡೀಸೆಲ್​ ಬೆಲೆ ಗಗನಕ್ಕೇರುತ್ತಿರುವುದಿಂದ ಉಡುಗೊರೆಯಾಗಿ ಪೆಟ್ರೋಲ್​ ಕ್ಯಾನ್​ ನೀಡಿದ್ದಾನೆ ತಮಿಳುನಾಡಿನ ವ್ಯಕ್ತಿ. ಇದರಿಂದ ಒಮ್ಮೆ ಆಶ್ಚರ್ಯಕ್ಕೀಡಾದ ಮದುಮಗ ನಂತರ ಸುಧಾರಿಸಿಕೊಂಡು ಉಡುಗೊರೆಯನ್ನು ಪಡೆದುಕೊಂಡಿದ್ದಾನೆ. ಈ ವಿಡಿಯೋ ಕ್ಲಿಪ್​ ಈಗ ಎಲ್ಲೆಡೆ ಹರಿದಾಡುತ್ತಿದ್ದು, ಸದ್ಯದ ಪರಿಸ್ಥಿತಿಯನ್ನು ಗೇಲಿ ಮಾಡುವಂತಿದೆ.
ಹಿಂದೊಮ್ಮೆ ಈರುಳ್ಳಿ ಬೆಲೆ ಶತಕ ಬಾರಿಸುವ ಸನ್ನಾಹದಲ್ಲಿದ್ದಾಗ ಗೆಳೆಯರೆಲ್ಲ ಸೇರಿ ತಮ್ಮ ಸ್ನೇಹಿತನ ಮದುವೆಯಲ್ಲಿ ಈರುಳ್ಳಿ ಹಾರ ಮಾಡಿಸಿ ಹಾಕಿ ತಮ್ಮ ದುಬಾರಿ ಸ್ನೇಹ’ವನ್ನು ಸಾಬೀತುಪಡಿಸಿದ್ದ ವಿಡಿಯೋ ಕೂಡ ವೈರಲ್​ ಆಗಿತ್ತು.
ತಮಿಳುನಾಡಿನಲ್ಲಿ ಪೆಟ್ರೋಲ್ ದರ ಲೀಟರ್​ಗೆ 85.15 ರೂ. ಆಗಿದೆ. ಈ ಹಿನ್ನೆಲೆಯಲ್ಲಿ 5 ಲೀಟರ್​ನ ಪೆಟ್ರೋಲ್​ ನೀಡಿದ್ದಾಗಿ ಸ್ನೇಹಿತ ಹೇಳಿದ್ದಾನೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!