Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ದಾವೂದ್​ ಸೋದರನಿಗೆ ಹೈಫೈ ಸೌಲಭ್ಯ ಕೊಟ್ಟಿದ್ದಕ್ಕೆ ಐವರು ಪೊಲೀಸರು ಅಮಾನತು..

ದಾವೂದ್​ ಸೋದರನಿಗೆ ಹೈಫೈ ಸೌಲಭ್ಯ ಕೊಟ್ಟಿದ್ದಕ್ಕೆ ಐವರು ಪೊಲೀಸರು ಅಮಾನತು..

ಮುಂಬೈ: ಭೂಗತ ಪಾತಕಿ ದಾವೂದ್​ ಇಬ್ರಾಹಿಂ ಸಹೋದರ ಇಕ್ಬಾಲ್​ ಕಸ್ಕರ್​ನಿಗೆ ಜೈಲಿನಲ್ಲಿ ವಿಐಪಿ ಸೌಲಭ್ಯಗಳನ್ನ ನೀಡಿದ್ದ ಆರೋಪದಡಿ ಐವರು ಪೊಲೀಸ್​ ಅಧಿಕಾರಿಗಳನ್ನ ಅಮಾನತುಗೊಳಿಸಲಾಗಿದೆ.ಸುಲಿಗೆ ಪ್ರಕರಣವೊಂದರಲ್ಲಿ ಥಾಣೆ ಜೈಲು ಸೇರಿದ್ದ ಇಕ್ಬಾಲ್​​ ಕಸ್ಕರ್​, ಜೈಲಿನಲ್ಲೇ ವೆರೈಟಿ ಬಿರಿಯಾನಿ ತಿನ್ನುತ್ತಿರುವ ಹಾಗೂ ಪೊಲೀಸ್ರ ಜೊತೆಯಲ್ಲಿ ಖಾಸಗಿ ಕಾರಿನಲ್ಲಿ ಪ್ರಯಾಣಿಸುತ್ತಿರುವ ವಿಡಿಯೋಗಳು ವೈರಲ್​ ಆಗಿದ್ದವು. ಈ ಹಿನ್ನೆಲೆ ತನಿಖೆ ನಡೆಸಿದ ಥಾಣೆ ಪೊಲೀಸ್​ ಆಯುಕ್ತ ವಿವೇಕ್​ ಫನ್ಸಾಲ್ಕರ್​, ಜೈಲಿನಲ್ಲಿ ಕಸ್ಕರ್​ಗೆ ವಿಶೇಷ ಸೌಲಭ್ಯ ಒದಗಿಸಿದ್ದ, ಸಬ್​ ಇನ್ಸ್​ಪೆಕ್ಟರ್​​ ರೋಹಿದಾಸ್​ ದೊಂಗಾರ್​​ ಪವಾರ್​​, ಕಾನ್ಸ್​ಟೆಬಲ್​ ಪುಂಡಲೀಕ್​​ ಚಂದ್ರ, ವಿಜಯ್​ ನವಾಲ್​​, ಕುಮಾರ್​ ಹನುಮಂತ್​ ಪೂಜಾರ್​​ ಹಾಗೂ ಸೂರಜ್​​ ಪಾಂಡುರಂಗ ಎಂಬುವರನ್ನ ಅಮಾನತುಗೊಳಿಸಿದ್ದಾರೆ. ಅಲ್ಲದೇ ಈ ಬಗ್ಗೆ ಹೆಚ್ಚಿನ ತನಿಖೆಗೆ ವಿವೇಕ್​ ಫನ್ಸಾಲ್ಕರ್ ಆದೇಶಿಸಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!