Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಕರ್ನಾಟಕ / ದುರ್ಗೆಯ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಶ್ರೀ ಚೌಡೇಶ್ವರಿ ದೇವಿ.

ದುರ್ಗೆಯ ಅಲಂಕಾರದಲ್ಲಿ ಕಂಗೊಳಿಸಿದ ತಾಯಿ ಶ್ರೀ ಚೌಡೇಶ್ವರಿ ದೇವಿ.

ಮಂಡ್ಯ : ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಶರನ್ನವರಾತ್ರಿಯ ಅಂಗವಾಗಿ ತಾಯಿ ಶ್ರೀ ಚೌಡೇಶ್ವರಿ ಅಮ್ಮನವರನ್ನು ದುರ್ಗೆಯ ರೂಪದಲ್ಲಿ ವಿಶೇಷವಾಗಿ ಅಲಂಕರಿಸಲಾಗಿತ್ತು.ಆಯುಧ ಪೂಜೆಯ ಅಂಗವಾಗಿ ಇದೇ ಸಂದರ್ಭದಲ್ಲಿ ಕಾರು, ಮೋಟಾರ್ ಬೈಕುಗಳು ಹಾಗೂ ಲಾರಿಯನ್ನು ಪೂಜಿಸಲಾಯಿತು. ಶರನ್ನವರಾತ್ರಿಯ ಒಂಭತ್ತೂ ದಿನಗಳವರೆಗೆ ದೇವಿಗೆ ಒಂದೊಂದು ದಿನವೂ ಒಂದೊಂದು ಅಲಂಕಾರದಲ್ಲಿ ಸಿಂಗರಿಸಲಾಗಿತ್ತು.ಪ್ರತಿದಿನವೂ ಪ್ರಸಾದ ವಿನಿಯೋಗ, ವಿಶೇಷ ಪೂಜೆಗಳು ಹಾಗೂ ಅಭಿಷೇಕಗಳು ನಡೆದವು. ವೇದಬ್ರಹ್ಮ ಶ್ರೀ ಗೋಪಾಲಕೃಷ್ಣ ಅವಧಾನಿಗಳ ನೇತೃತ್ವದಲ್ಲಿ.ಪೂಜಾ ಕಾರ್ಯಕ್ರಮಗಳು ನಡೆದವು. ದೇವಸ್ಥಾನ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಕೆ.ನಾರಾಯಣ, ಮಾಜಿಅಧ್ಯಕ್ಷ ಕೆ.ಜೆ.ರಾಜಶೇಖರ, ಗೌರವಾಧ್ಯಕ್ಷ ಕೆ.ಆರ್.ನಾಗರಾಜಶೆಟ್ಟಿ, ಖಜಾಂಚಿ ಕೆ.ಆರ್.ಮಹೇಶ್, ಕಾರ್ಯದರ್ಶಿ ವಿದ್ಯಾರ್ಥಿ ಭಂಡಾರ್ ಸುರೇಶ್, ನಿರ್ದೇಶಕರಾದ ನಾಗರತ್ನಮ್ಮ, ಪರಿಮಳ, ಪ್ರೇಮ ಶ್ರೀಕೃಷ್ಣ ಸೇರಿದಂತೆ ನೂರಾರು ಜನರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share

About Bora nayak BIG TV NEWS, Mandya

Check Also

Featured Video Play Icon

ಎಲ್ಲಡೆ ಶಿವನ ಆರಾಧನೆ ಭಕ್ತಿಯಲ್ಲಿ ಮಿಂದೆದ್ದ ಹುಬ್ಬಳ್ಳಿಯ ಜನರು | MAHA SHIVARATRI | BIG TV NEWS

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!