Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ದೇವಸ್ಥಾನಕ್ಕೆ ಹಣಕೊಡದಿದ್ದಕ್ಕೆ ಮಗನಿಗೆ ಬಾಬನಿಂದ ನರಬಲಿಯ ಶಿಕ್ಷೆ

ದೇವಸ್ಥಾನಕ್ಕೆ ಹಣಕೊಡದಿದ್ದಕ್ಕೆ ಮಗನಿಗೆ ಬಾಬನಿಂದ ನರಬಲಿಯ ಶಿಕ್ಷೆ

ಬಿಹಾರ್​​: ಬಾಬನೊಬ್ಬ ದೇವರಿಗೆ ತನ್ನ ಮಗನನ್ನೇ ನರಬಲಿ ಕೊಡೋದಿಕ್ಕೆ ಮುಂದಾಗಿದ್ದ ಘಟನೆ ಬಿಹಾರ್‌ನ ಮೋಹನ್‌ಪುರ್‌ನಲ್ಲಿ ನಡೆದಿದೆ. ಪುತ್ರನನ್ನು ನರಬಲಿ ನೀಡೋಕೆ ಅನುಮತಿ ನೀಡುವಂತೆ ಪೊಲೀಸರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾನೆ. ಸದ್ಯ ಪೊಲೀಸರಿಗೆ ಪತ್ರ ಬರೆದು ನಾಪತ್ತೆಯಾಗಿರೋ ಸುರೇಂದರ್ ಪ್ರಸಾದ್​ ಸಿಂಗ್​​ ಎಂಬ ಬಾಬಾನಿಗಾಗಿ ಖಾಕಿ ಶೋಧ ನಡೆಸುತ್ತಿದೆ. ಆತ ಮಾತನಾಡಿರುವ ವಿಡಿಯೋವೊಂದು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ಮಗನನ್ನು ಬಲಿಕೊಡುವ ಬಗ್ಗೆ ಮಾತನಾಡಿರುವ ಸುರೆಂದರ್​, ನರಬಲಿ ಕೊಡುವುದು ಅಪರಾಧವಲ್ಲ. ಕಾಮಾಕ್ಯ ದೇವಿ ನರಬಲಿ ನೀಡಲು ನನಗೆ ಆದೇಶಿಸಿದ್ದಾಳೆ. ಹೀಗಾಗಿ ನನ್ನ ಇಂಜಿನಿಯರಿಂಗ್‌​ ಮಗನನ್ನು ದೇವಿಗೆ ಬಲಿ ನೀಡುತ್ತೇನೆ. ಏಕೆಂದರೆ ಆತ ನನ್ನ ದೇವಸ್ಥಾನಕ್ಕೆ ಯಾವುದೇ ಧನ ಸಹಾಯ ಮಾಡುತ್ತಿಲ್ಲ. ಹೀಗಾಗಿ ಅವನು ರಾವಣ. ಅವನನ್ನು ನಾನು ದೇವಿಗೆ ಬಲಿ ಕೊಡುತ್ತೇನೆ ಎಂದು ಹೇಳಿದ್ದಾನೆ. ಇನ್ನು ಅಲ್ಲಿನ ಸ್ಥಳೀಯರು ಹೇಳುವ ಪ್ರಕಾರ ಸುರೆಂದರ್​ ಪ್ರಸಾದ್​ ಸಿಂಗ್​​ನನ್ನು ಅವರು ಪಾಗಲ್​ ಬಾಬಾ ಎಂದು ಕರೆಯುತ್ತಾರಂತೆ. ಅಲ್ಲದೇ ಆತ ವಿವಸ್ತ್ರವಾಗಿ ಓಡಾಡುವುದು, ಮನುಷ್ಯರ ತಲೆಬುರುಡೆಗಳನ್ನ ಕೈಯಲ್ಲಿ ಹಿಡಿದು ಸುತ್ತಾಡುತ್ತಾನಂತೆ. ಅವನು ಪಬ್ಲಿಸಿಟಿಗಾಗಿ ಈ ರೀತಿ ಮಾಡುತ್ತಿದ್ದ. ಈಗ ನರಬಲಿಯ ವಿಷಯವೂ ಕೂಡ ಇದೇ ರೀತಿ ಎನ್ನಿಸುತ್ತಿದೆ ಅಂತಾ ಸ್ಥಳೀಯರು ಹೇಳಿದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!