Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ವಿರಾಟ ರೂಪ ದರ್ಶನ.

ದ.ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಕೊಹ್ಲಿಯ ವಿರಾಟ ರೂಪ ದರ್ಶನ.

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯಲ್ಲಿ ನಡೆದ 2ನೇ ಟೆಸ್ಟ್​ ಪಂದ್ಯದಲ್ಲಿ ರನ್​ ಮೆಷಿನ್​ ದ್ವಿಶತಕ ಸಿಡಿಸಿ ಮಿಂಚಿದ್ದು, ಬರೋಬ್ಬರಿ 10 ತಿಂಗಳ ಬಳಿಕ ಕೊಹ್ಲಿ ಬ್ಯಾಟ್​​ನಿಂದ ಶತಕ ಸಿಡಿದಿದೆ. 183 ಎಸೆತಗಳಲ್ಲಿ 16 ಬೌಂಡರಿ ನೆರವಿನಿಂದ 104 ರನ್ ಬಾರಿಸಿದ ಕೊಹ್ಲಿ, ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಒಟ್ಟಾರೆ 69ನೇ ಶತಕ ಪೂರೈಸಿದ್ರು. ಇದರ ಜೊತೆಗೆ ಭಾರತದ ನೆಲದಲ್ಲಿ ಟೆಸ್ಟ್ ಕ್ರಿಕೆಟ್​ನಲ್ಲಿ ಕೊಹ್ಲಿಯ 12ನೇ ಶತಕವೂ ಇದಾಗಿದೆ. ವಿಶೇಷವೆಂದರೆ 336 ಎಸೆತಗಳಲ್ಲಿ 33 ಬೌಂಡರಿ ಹಾಗೂ ಎರಡು ಸಿಕ್ಸರ್​ ಸಿಡಿಸಿದ ಕೊಹ್ಲಿ ಅಜೇಯ 254 ರನ್​ ಕಲೆ ಹಾಕಿದ್ರು. ಟೆಸ್ಟ್​ ಕ್ರಿಕೆಟ್​​ನಲ್ಲೇ ಅವರು 7ನೇ ಸಲ ದ್ವಿಶತಕ ಹೊಡೆದಿದ್ದು ಭಾರತೀಯ ಕ್ರಿಕೆಟಿಗನ ಅಪರೂಪದ ದಾಖಲೆಯಾಗಿದೆ.ಈವರೆಗೆ 81 ಟೆಸ್ಟ್​ ಪಂದ್ಯಗಳನ್ನಾಡಿರುವ ವಿರಾಟ್​ ಕೊಹ್ಲಿ, 9ಕ್ಕೂ ಹೆಚ್ಚು ಸಲ 150+ ರನ್​ಗಳಿಕೆ ಮಾಡಿದ್ದಾರೆ. ಈ ಹಿಂದೆ ಕೂಡ ಕೊಹ್ಲಿ ಟೆಸ್ಟ್​​ನಲ್ಲಿ ಶ್ರೀಲಂಕಾ ವಿರುದ್ಧ 2017/18 ರಲ್ಲಿ 243ರನ್​, 2016/17ರಲ್ಲಿ ಇಂಗ್ಲೆಂಡ್​ ವಿರುದ್ಧ ಮುಂಬೈನಲ್ಲಿ 235 ರನ್​​ ಹಾಗೂ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 254 ರನ್ ​ಗಳಿಸಿದ್ದು, ಟೆಸ್ಟ್​ ಕ್ರಿಕೆಟ್​ನಲ್ಲಿ ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್​ ಆಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿದ ಬ್ಯಾಟ್ಸ್‌ಮನ್‌ಗಳ ಪೈಕಿ ಸರ್ ಡಾನ್ ಬ್ರಾಡ್ಮನ್ 12, ಶ್ರೀಲಂಕಾದ ಕುಮಾರ ಸಂಗಕ್ಕರ 11, ಲಾರಾ 9, ತದನಂತರದ ಸ್ಥಾನದಲ್ಲಿ 7 ದ್ವಿಶತಕ ಸಿಡಿಸಿರುವ ವಿರಾಟ್​ ಕೊಹ್ಲಿ ಹಾಗು ಶ್ರೀಲಂಕಾದ ಮಹೇಲಾ ಜಯವರ್ಧನೆ ಇದ್ದಾರೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!