Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷ ಪಟ್ಟ ಕಾಂಗ್ರೇಸ್ ಪಾಲು ಅಧ್ಯಕ್ಷರಾಗಿ ಶಿವಾನಂದ ಕರಿಗಾರ ನೇಮಕ

ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷ ಪಟ್ಟ ಕಾಂಗ್ರೇಸ್ ಪಾಲು ಅಧ್ಯಕ್ಷರಾಗಿ ಶಿವಾನಂದ ಕರಿಗಾರ ನೇಮಕ

Spread the love

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯತಿ ಅಧ್ಯಕ್ಷ ಪಟ್ಟ ಬಿಜೆಪಿ ಕೈತಪ್ಪಿ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸನ ಶಿವಾನಂದ ಕರಿಗಾರ ಜಿ ಪಂ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಜಿಪಂ ಅಧ್ಯಕ್ಷ ಚೈತ್ರಾ ಶಿರೂರ ವಿರುದ್ಧ ನಡೆದ ಅವಿಶ್ವಾಸ ಸಭೆಯಲ್ಲಿ ಅವರ ವಿರುದ್ದ ಜಿಪಂ ಸದಸ್ಯರು ಅವಿಶ್ವಾಸ ಸಾಭೀತುಪಡಿಸಿದರು.ಜಿಲ್ಲಾ ಪಂಚಾಯತ ಅಧ್ಯಕ್ಷೆ ಚೈತ್ರಾ ಶಿರೂರ ಅವರ ವಿರುದ್ದ ಅವಿಶ್ವಾಸ ಗೊತ್ತುವಳಿ ಅಂಗೀಕಾರವಾಗಿದ್ದು, ಜಿಪಂ ವಿಶೇಷ ಸಭೆಯಲ್ಲಿ ಮಂಡಿಸಲಾದ ಗೊತ್ತುವಳಿ 16 ಮತಗಳಿಂದ ಗೊತ್ತುವಳಿ ಅಂಗೀಕಾರವಾಗಿದೆ.ಗೊತ್ತುವಳಿ ವಿರುದ್ದ 6 ಮತ ‘ಕೈ’ ಹಿಡಿದ ಬಿಜೆಪಿಯ 4 ಸದಸ್ಯರು ಬಿಜೆಪಿಯ ಜ್ಯೋತಿ ಬೆಂತೂರು, ಮಂಜವ್ವ ಹರಿಜನ್, ಅಣ್ಣಪ್ಪ ದೇಸಾಯಿ, ರತ್ನಾ ಪಾಟೀಲ್ ಅವಿಶ್ವಾಸಕ್ಕೆ ಬೆಂಬಲ ಸೂಚಿಸಿದ್ದಾರೆ.ಬಹಳ ದಿನಗಳಿಂದ ನಡೆಯುತ್ತಿರವ ತೆರೆಮರೆ ಕಸರತ್ತು ಮುಕ್ತಾಯಗೊಂಡಿದೆ. ಅದ್ಯಕ್ಷ ಸ್ಥಾನವನ್ನು‌ ಬಿಜೆಪಿ ಕಳೆದುಕೊಂಡಿದ್ದು, ಮಾಜಿ‌ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹಾಗೂ ಸಂಸದ ಪ್ರಲ್ಹಾದ‌ ಜೋಶಿ ಅವರು ಮುಖಭಂಗ ಅನುಭವಿಸುವಂತಾಯಿತು.ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಮೊರಬ ಕ್ಷೇತ್ರದ ಗುಮ್ಮಗೋಳ ಗ್ರಾಮದ ವಿಜಯಲಕ್ಷ್ಮಿ ಪಾಟೀಲ್ ರೇಸ್ ನಲ್ಲಿದ್ದರು ಎನ್ನಲಾಗಿದೆ ಈ ಹಿನ್ನೆಲೆಯಲ್ಲಿ ಕಾಂಗ್ರೆಸನ ಶಿವಾನಂದ ಕರಿಗಾರ ಬಹುಮತದಿಂದ ಧಾರವಾಡ ಜಿಲ್ಲಾ ಪಂಚಾಯತ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Check Also

ಭಾರಿ ಬೆಲೆ ಬಾಳುವ ಅಕ್ರಮ ಮದ್ಯ ನಾಶ ಮಾಡಿದ ಅಬಕಾರಿ ಅಧಿಕಾರಿಗಳು

Spread the loveಕೊಳ್ಳೇಗಾಲ ಭಾ.ತ.ಮ 553 ಲೀಟರ್, ಬಿಯರ್ 2.64, ಸೇಂದಿ 46, ಕಳ್ಳ ಭಟ್ಟಿ ಸಾರಾಯಿ 19 ವರೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Hiring Reporter’s For more Information Contact Above Number 876 225 4007 . Program producer
error: Content is protected !!