Breaking News
Hiring Reporter’s For more Information Contact Above Number 876 225 4007 . Program producer
Home / ಸುದ್ದಿ / ದೇಶ-ವಿದೇಶ / ನಕಲಿ ದಾಖಲೆ ನೀಡಿದ್ರಾ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ..?

ನಕಲಿ ದಾಖಲೆ ನೀಡಿದ್ರಾ ದೆಹಲಿ ವಿವಿ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ..?

ನವದೆಹಲಿ: ನಕಲಿ ದಾಖಲೆ ನೀಡಿ ಪ್ರವೇಶಾತಿ ಪಡೆದಿದ್ದ ಆರೋಪ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷ ಅಂಕಿವ್ ಬೈಸೋಯಾಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎಬಿವಿಪಿ ಸೂಚಿಸಿದೆ. ಅಲ್ಲದೆ ಎಬಿವಿಪಿಯಿಂದಲೂ ಅವರನ್ನ ಅಮಾನತುಗೊಳಿಸಲಾಗಿದೆ. ಅಂಕಿವ್ ಕಳೆದ ಸೆಪ್ಟೆಂಬರ್​​​​​ನಲ್ಲಿ ನಡೆದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಎನ್​ಎಸ್​ಯುಐ ಅಭ್ಯರ್ತಿ ವಿರುದ್ಧ ಜಯಗಳಿಸಿದ್ದರು.ಆದ್ರೆ ಎಲೆಕ್ಷನ್ ಮುಗೀತಿದ್ದಂತೆ, ಎನ್ಎಸ್​ಯುಐ ಅಂಕಿವ್​ರ ಪ್ರವೇಶಾತಿಗೆ ಮಾನ್ಯತೆ ಇಲ್ಲ ಅಂತ ಹೇಳಿತ್ತು. ಬುದ್ಧಿಸ್ಟ್ ಸ್ಟಡೀಸ್​ಗೆ ಅಂಕಿವ್ ನಕಲಿ ದಾಖಲೆಗಳನ್ನ ನೀಡಿ ಪ್ರವೇಶಾತಿ ಪಡೆದಿದ್ದಾರೆ. ಹೀಗಾಗಿ ಅವರ ಅಭ್ಯರ್ಥಿತ್ವವನ್ನೇ ಅನೂರ್ಜಿತಗೊಳಿಸಬೇಕು ಅಂತ ಎನ್​ಎಸ್​ಯುಐ ಆಗ್ರಹಿಸಿತ್ತು. ಈ ಬಗ್ಗೆ ದೆಹಲಿ ವಿವಿ ತನ್ನ ತನಿಖೆಯನ್ನ ಇನ್ನೂ ನಡೆಸುತ್ತಿದೆ.ದೆಹಲಿ ವಿವಿಗೆ ಅಂಕಿವ್​ರ ದಾಖಲೆಗಳನ್ನ ಪರಿಶೀಲಿಸುವ ಹಾಗೂ ಅವರ ದಾಖಲಾತಿ ಬಗ್ಗೆ ಹರಿದಾಡುತ್ತಿರುವ ವದಂತಿಗಳಿಗೆ ಪುಲ್​ಸ್ಟಾಪ್ ಇಡುವ ಹಕ್ಕಿದೆ ಅಂತ ಎಬಿವಿಪಿ ಹೇಳಿದೆ. ಅಲ್ಲದೆ, ವಿದ್ಯಾರ್ಥಿಗಳ ಸಮಸ್ಯೆ, ಹೋರಾಟ, ನಿರೀಕ್ಷೆ ಮತ್ತು ಅವರ ಭಾವನೆಗಳನ್ನ ಮನಸಿನಲ್ಲಿಟ್ಟುಕೊಂಡು ದೆಹಲಿ ವಿವಿಯ ಘನತೆ ಕಾಪಾಡುವುದಕ್ಕಾಗಿ ತನಿಖೆ ಮುಗಿಯುವವರೆಗೆ ಅಂಕಿವ್​ರನ್ನ ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆಯೂ ಸೂಚಿಸಿದೆ. ಜೊತೆಗೆ ಆದಷ್ಟು ಬೇಗ ವಿವಿ ಈ ಪ್ರಕ್ರಿಯೆಯನ್ನ ಮುಗಿಸಿ ಸಾರ್ವಜನಿಕವಾಗಿ ಬಹಿರಂಗ ಪಡಿಸಬೇಕು ಅಂತಲೂ ಎಬಿವಿಪಿ ಆಗ್ರಹಿಸಿದೆ.

Share

About Shaikh BIG TV NEWS, Hubballi

Check Also

Featured Video Play Icon

ಬಾ ಬಾ ನಾ ರಡಿ….ರಾಬರ್ಟ್ ಗೆ ಜೈ ಅಂದ ಅಭಿಮಾನಿಗಳು | Roberrt movie craze after releasing | BIG TV NEW

Shaikh BIG TV NEWS, Hubballi See author's posts Share

Leave a Reply

Your email address will not be published. Required fields are marked *

error: Content is protected !!